ಬೆಂಗಳೂರು: ರಾಷ್ಟ್ರಕ್ಕೆ, ರಾಷ್ಟ್ರಗೀತೆಗೆ, ರಾಷ್ಟ್ರಧ್ವಜಕ್ಕೆ ಎಲ್ಲರೂ ಗೌರವ ಕೊಡಬೇಕು. ಅದು ನಮ್ಮೆಲ್ಲರ ಕರ್ತವ್ಯ. ಅದು ಎಲ್ಲಿ ಇಲ್ಲವೋ ಆಗ ಎಲ್ಲಾ ಭಾರತಿಯರೂ ಅದನ್ನು ಪ್ರಶ್ನಿಸಬೇಕು, ಸರಿ ಮಾಡಬೇಕು. ಅದರೆ ಬೆಂಗಳೂರಿನಲ್ಲಿ ಆ್ಯಂಟಿ ಕರಪ್ಷನ್ ಕೌನ್ಸಿಲ್ ಆಫ್ ಇಂಡಿಯಾ ಅನ್ನೊ ಒಂದು ಸಂಘಟನೆ ಇದ್ದಕ್ಕಿದ್ದ ಹಾಗೇ ರಾಷ್ಟ್ರಗೀತೆಯ ಬಗ್ಗೆ ಅರಿವನ್ನು ಮೂಡಿಸುತ್ತೇವೆ ಎಂದು ಮುಂದೆ ಬಂದಿದ್ದಾರೆ.
ಬೆಂಗಳೂರಿನ ಪೊಲೀಸ್ ಕಚೇರಿಗಳು, ಸರ್ಕಾರಿ ಕಚೇರಿಗಳಿಗೆ ಹೋಗಿ ರಾಷ್ಟ್ರಗೀತೆ ಹಾಡೋಣ ಬನ್ನಿ, ಇಲ್ಲ ನಿಮ್ಮ ಕಚೇರಿ ಮುಂದೆ ನಾವು ಹಾಡ್ತೀವಿ ಅಂತ ಇದ್ದಕ್ಕಿದ್ದ ಹಾಗೇ ಹಾಡೋಕೆ ಶುರು ಮಾಡುತ್ತಾರೆ. ಯಾಕೆ ಈ ರೀತಿ ಅಂದರೆ ನಮ್ಮ ಹಾಗೇ ಎಲ್ಲರೂ ಗೌರವ ಕೊಡಬೇಕು ಎಂದು ಹೇಳುತ್ತಾರೆ.
Advertisement
Advertisement
ರಾಷ್ಟ್ರಗೀತೆ ಹಾಡಿ ಅನ್ನೋ ಒತ್ತಾಯವನ್ನು ಯಾರೂ ಮಾಡುವಂತಿಲ್ಲ ಹಾಗೂ ಮನವಿ ಕೇಳುವಂತಿಲ್ಲ ಎಂದು ಎಮ್‍ಎಸ್ ಬಿಲ್ಡಿಂಗ್ ಬಳಿಯ ಹ್ಯೂಮನ್ ರೈಟ್ಸ್ ಕಚೇರಿ ಹೊರಗೆ ನಿಂತು ಈ ಸಂಘಟನೆಯ ಕಾರ್ಯಕರ್ತರು ರಾಷ್ಟ್ರಗೀತೆಯನ್ನು ಹಾಡೋಕೆ ಶುರು ಮಾಡಿದರು. ಅಲ್ಲಿ ಸುತ್ತ ಇದ್ದವರಿಗೆ ಒಮ್ಮೆಲೆ ಶಾಕ್. ಈ ಟೈಮಲ್ಲಿ ಯಾರಪ್ಪ ರಾಷ್ಟ್ರಗೀತೆ ಹಾಡುತ್ತಿದ್ದಾರೆ ಎಂದು. ಎಲ್ಲರಿಗೂ ರಾಷ್ಟ್ರಗೀತೆ ಬಗ್ಗೆ ಅರಿವು ಮೂಡಿಸಬೇಕು ಎಂದು ಹಾಡಲು ಶುರು ಮಾಡಿದವರು ಸರಿಯಾಗಿ ಹಾಡುತ್ತಾರೆ ಅಂದುಕೊಂಡರೆ ಬರೀ ತಪ್ಪು ತಪ್ಪು ಹಾಡಿದ್ರು. ಇದನ್ನ ಪ್ರಶ್ನೆ ಮಾಡಿದ್ರೆ ಅದಕ್ಕೂ ಸಮಜಾಯಿಷಿ ಕೊಟ್ರು.
Advertisement
Advertisement
ರಾಷ್ಟ್ರಗೀತೆ ಎಲ್ಲಾ ಸ್ಕೂಲ್ ಮತ್ತು ಕಾಲೇಜುಗಳಲ್ಲಿ ಹಾಡಬೇಕು. ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ರಾಷ್ಟ್ರಗೀತೆ ಹಾಡಬೇಕು. ಇದನ್ನು ನಾವು ಮಾಡ್ತೀವಿ ಮತ್ತು ಮಾಡಿ ತೋರಿಸುತ್ತೀವಿ. ತಪ್ಪು ಮಾಡುವವರಿಗೆ ಜಾಗೃತಿ ಮೂಡಿಸುತ್ತೇವೆ. ಸಂವಿಧಾನದಲ್ಲಿ ನಮಗೆ ಕೊಟ್ಟ ಅಧಿಕಾರವನ್ನು ನಾವು ರಕ್ಷಣೆ ಮಾಡಿ ಶಾಲಾ-ಕಾಲೇಜು ಮತ್ತು ದೈನಂದಿನ ದಿನಗಳಲ್ಲಿ ರಾಷ್ಟ್ರಗೀತೆಯ ಬಗ್ಗೆ ಜಾಗೃತಿಯನ್ನು ಮೂಡಿಸುತ್ತೇವೆ ಎಂದು ಆ್ಯಂಟಿ ಕರಪ್ಷನ್ ಅಧಿಕಾರಿಗಳು ಹೇಳಿದ್ರು
ರಾಷ್ಟ್ರಗೀತೆಯನ್ನು 52 ಸೆಕೆಂಡ್‍ಗಳಲ್ಲಿ ಹಾಡಿ ಮುಗಿಸಬೇಕು ಹಾಗೂ ಎಲ್ಲರೂ ಎದ್ದು ನಿಂತು ಗೌರವ ಸೂಚಿಸಬೇಕು, ಅದು ನಮ್ಮ ಕರ್ತವ್ಯ. ಆದರೆ ರಾಷ್ಟ್ರಗೀತೆ ಹಾಡುವುದಕ್ಕೆ ಒಂದು ನಿರ್ದಿಷ್ಟ ಸ್ಥಳ, ಟೈಮ್ ಇರುತ್ತದೆ. ಶಾಲೆ ಪ್ರಾರಂಭಕ್ಕೂ ಮುನ್ನ ಹಾಗೂ ಸಿನಿಮಾ ಮಂದಿರಗಳಲ್ಲಿ ಸಿನಿಮಾ ಶುರುವಾಗುವ ಮುನ್ನ ರಾಷ್ಟ್ರಗೀತೆ ಹಾಡಬೇಕು. ಸಿನಿಮಾದ ಮಧ್ಯೆ ಗೀತೆ ಹಾಡುವುದು ಅಪಮಾನ. ಅದೇ ರೀತಿ ಎಲ್ಲೆಂದರಲ್ಲಿ ತಮ್ಮನ್ನ ಹಾಗೂ ಸಂಘಟನೆಯನ್ನ ಗುರುತಿಸಿಕೊಳ್ಳೋಕೆ ಈ ರೀತಿ ಮಾಡೊದು ಎಷ್ಟು ಸರಿ ಅನ್ನೊದು ಸಾರ್ವಜನಿಕರ ಪ್ರಶ್ನೆ.