– ಹೋಟೆಲ್‍ನಲ್ಲಿ ತಿಂಡಿ ತಿನಿಸು ಕೂಡ ದುಬಾರಿ
ಬೆಂಗಳೂರು: ಮಂಗಳವಾರ ದುನಿಯಾ ಬದಲಾಗಲಿದೆ. ದರ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ಸಾಮಾನ್ಯ ಜನತೆಗೆ ಮತ್ತೆ ಹಲವು ರೂಪಗಳಲ್ಲಿ ಬರೆ ಎಳೆಯಲಾಗುತ್ತದೆ. ಜೊತೆಗೆ ಒಂದಿಷ್ಟು ರೂಲ್ಸ್ ಅಂಡ್ ರೆಗ್ಯುಲೆಷನ್ಸ್ ಕೂಡ ಬದಲಾಗ್ತಿವೆ. ಜೊತೆಗೆ ಒಂದಿಷ್ಟು ರಿಲೀಫ್‍ಗಳು ಕೂಡ ಇರಲಿವೆ.
ಹಾಲಿನ ದರ ಏರಿಕೆ: ಎಲ್ಲಾ ಮಾದರಿಯ ನಂದಿನಿ ಹಾಲಿನ (Nandini Milk) ಬೆಲೆ ಲೀಟರ್ ಗೆ 3 ರೂ. ಹೆಚ್ಚಳವಾಗಲಿದೆ. ನಂದಿನಿ ಮೊಸರಿನ ಬೆಲೆ 3 ರೂ., ನಂದಿನಿ ಮಜ್ಜಿಗೆ (200 ಎಂಎಲ್) ಬೆಲೆಯಲ್ಲಿ 1 ರೂ. ಹೆಚ್ಚಳವಾಗಲಿದೆ. ಇತ್ತ ಹೋಟೆಲ್ ತಿನಿಸಿನ ಬೆಲೆಯಲ್ಲಿಯೂ ಏರಿಕೆಯಾಗುವ ಸಂಭವವಿದೆ. ಕಾಫಿ-ಟೀ ಬೆಲೆ 2ರಿಂದ 3 ರೂ. ಹಾಗೂ ಬೆಲೆಯಲ್ಲಿ 10ರೂ.ವರೆಗೂ ಹೆಚ್ಚಳವಾಗುವ ಸಾಧ್ಯತೆಗಳಿವೆ.
ದಶಪಥ ಸವಾರರೇ ಗಮನಿಸಿ: ನಾಳೆಯಿಂದ ದ್ವಿಚಕ್ರ ವಾಹನ ಸಂಚಾರಕ್ಕೂ ಅವಕಾಶವಿಲ್ಲ. ಆಟೋ, ಟ್ರ್ಯಾಕ್ಟರ್, ಹೈಡ್ರಾಲಿಕ್ ಟ್ರಾಲಿಗೂ ನಿರ್ಬಂಧ ಹೇರಲಾಗಿದೆ. ನಿಧಾನಗತಿಯ ವಾಹನಗಳ ಸಂಚಾರಕ್ಕೆ ನಿಷೇಧಿಸಲಾಗಿದೆ. ಇದನ್ನೂ ಓದಿ: ಮತ್ತೆ ಟೊಮೆಟೋ ದರ ಭಾರೀ ಏರಿಕೆ – ಗ್ರಾಹಕರು ಕಂಗಾಲು
ಆಗಸ್ಟ್ ನಲ್ಲಿಯೇ ಗ್ಯಾರಂಟಿ ಭಾಗ್ಯ: ರಾಜ್ಯದ ಜನತೆಗೆ ಗೃಹಜ್ಯೋತಿ ಯೋಜನೆ ಸಿಗಲಿದೆ. 200 ಯೂನಿಟ್ ಒಳಗೆ ಕರೆಂಟ್ ಬಳಸುವವರಿಗೆ ಜೀರೋ ಬಿಲ್ ನೀಡಲಾಗುವುದು. ಕಳೆದ ವರ್ಷದ ಸರಾಸರಿ ಬಳಕೆಯನ್ನು ಇದು ಆಧರಿಸಿರುತ್ತದೆ. ಇದೇ ತಿಂಗಳು ಮನೆಯೊಡತಿ ಖಾತೆಗೆ ಗೃಹಲಕ್ಷ್ಮಿ ಯೋಜನೆ ಹಣ ಹಾಕಲಾಗುತ್ತದೆ.
Web Stories