ಆಂಗ್ಲರ ನಾಡಲ್ಲಿ ಜನಕವಾದ ಕ್ರಿಕೆಟ್ (Cricket) ಇದೀಗ ವಿಶ್ವದೆಲ್ಲೆಡೆ ಹಬ್ಬಿದೆ. ಫುಟ್‍ಬಾಲ್ (Football) ಬಿಟ್ಟರೆ ಜನ ಕ್ರಿಕೆಟ್‍ಗೆ ಹೆಚ್ಚು ಮರುಳಾಗಿದ್ದಾರೆ. ಅದರಲ್ಲೂ ಮೂರು ಮಾದರಿ ಕ್ರಿಕೆಟ್‍ನಲ್ಲಿ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‍ಗಿಂತ ಟಿ20 ಮಾದರಿ (T20) ಕ್ರಿಕೆಟ್‍ಗೆ ಜನ ಹೆಚ್ಚು ಮನಸೋತಿದ್ದಾರೆ.
ಕ್ರಿಕೆಟ್ ಆರಂಭಿಕ ಘಟ್ಟದಲ್ಲಿ ಟೆಸ್ಟ್ ಕ್ರಿಕೆಟ್‍ಗೆ ಇದ್ದಂತಹ ಮಹತ್ವ 50 ಓವರ್‌ಗಳ ಪಂದ್ಯ (ಏಕದಿನ ಕ್ರಿಕೆಟ್) ಆರಂಭವಾದ ಬಳಿಕ ಕುಗ್ಗಿತು. ಟೆಸ್ಟ್ ಎಂದರೆ 5 ದಿನಗಳ ಕಾಲ ನಡೆಯುವ ಸುದೀರ್ಘ ಕ್ರಿಕೆಟ್ ಪಂದ್ಯಾಟ. ಕ್ರಮೇಣ ಜನ ಟೆಸ್ಟ್ ಕ್ರಿಕೆಟ್‍ಗೆ ಬದಲಾವಣೆ ಬೇಕು ಎಂದು ಬಯಸತೊಡಗಿದರು. ಆಗ ಪರ್ಯಾಯವಾಗಿ 50 ಓವರ್‌ಗಳ ಪಂದ್ಯ ನಡೆಸಲು ತೀರ್ಮಾನಿಸಿ ಒಂದೇ ದಿನದಲ್ಲಿ ಮುಗಿಸುವ ರೀತಿ ಆಡಲು ಪ್ರಾರಂಭಿಸಲಾಯಿತು. ಏಕದಿನ ಕ್ರಿಕೆಟ್ 9 ರಿಂದ 10 ಗಂಟೆಗಳ ಕಾಲ ಆಡಿ ಫಲಿತಾಂಶ ಹೊರಬರುವಂತಾಯಿತು. ಇದು ಕೂಡ ಕೆಲ ಸಮಯಗಳ ಬಳಿಕ ಅಭಿಮಾನಿಗಳಿಗೆ ಬೋರ್ ಹೊಡೆಸಿತು. ಬಳಿಕ 20 ಓವರ್‌ಗಳಿಗೆ ಪಂದ್ಯ ನಡೆಸಲು ತೀರ್ಮಾನಿಸಲಾಯಿತು. ಈ ಮೂಲಕ ಟಿ20 ಮಾದರಿ ಕ್ರಿಕೆಟ್‍ನಲ್ಲಿ ಹೊಸ ಹುರುಪು ತರಿಸಿತು. ಇದನ್ನೂ ಓದಿ: ಟಿ20ಗೆ ಪಾಂಡ್ಯ ನಾಯಕ, ಸೂರ್ಯ ಉಪನಾಯಕ – ಟೀಂ ಇಂಡಿಯಾದಲ್ಲಿ ಪಂತ್‍ಗಿಲ್ಲ ಸ್ಥಾನ
Advertisement
Advertisement
ಟಿ20 ಮಾದರಿ ಕ್ರಿಕೆಟ್ ಇದೀಗ ವಿಶ್ವ ಕ್ರಿಕೆಟ್‍ನಲ್ಲಿ ಟ್ರೆಂಡ್ ಸೆಟ್ ಮಾಡಿದೆ. ಕ್ರಿಕೆಟ್ ಮಾತ್ರವಲ್ಲ, ಓಟದ ಸ್ಪರ್ಧೆಗಳಲ್ಲಿ ನೀವು ನೋಡಿರಬಹುದು. 100 ಮೀ, 200 ಮೀ ಓಟಕ್ಕಿರುವ ಪ್ರಾಶಸ್ತ್ಯ 1,500 ಮೀ, 5,000 ಮೀ ಓಟದ ಸ್ಪರ್ಧೆಗಿಲ್ಲ. ವಿಶ್ವದಾದ್ಯಂತ ಹುಸೇನ್ ಬೋಲ್ಟ್ ಎಲ್ಲರಿಗೂ ಗೊತ್ತು. ಆದರೆ ಮೋ ಫರಾಹ್ ಯಾರಿಗೂ ಗೊತ್ತಿಲ್ಲ. ಯಾಕೆಂದರೆ ಒಲಿಪಿಂಕ್ಸ್‌ನಲ್ಲಿ 100, 200 ಮೀ.ನಲ್ಲಿ ಬೋಲ್ಟ್ ಚಿನ್ನದ ಪದಕ ಪಡೆದ ವೇಗದ ಓಟಗಾರ. ಆದರೆ ಮೋ ಫರಾಹ್ ಅದೇ ಒಲಿಂಪಿಕ್ಸ್‌ನಲ್ಲಿ 5,000 ಮೀ. ಓಟದಲ್ಲಿ ಚಿನ್ನ ಗೆದ್ದ ಓಟಗಾರ. ಆದರೆ ಆತನನ್ನು ಯಾರು ಹೆಚ್ಚಾಗಿ ಗಮನಿಸಲಿಲ್ಲ. ಯಾಕೆಂದರೆ ಲಾಂಗ್ ರನ್ನಿಂಗ್ ಮತ್ತು ಶಾರ್ಟ್ ರನ್ನಿಂಗ್ ನಡುವಿನ ವ್ಯಾತ್ಯಾಸ. ಇಬ್ಬರೂ ಕೂಡ ಚಿನ್ನದ ಸಾಧನೆಗೈದವರೆ. ಆದರೆ ವೇಗದ ನಡುವೆ ನಿಧಾನ ನಿಲ್ಲಲಿಲ್ಲ. ಹಾಗೆ ಕ್ರಿಕೆಟ್‍ನಲ್ಲೂ ಸುದೀರ್ಘ ಕ್ರಿಕೆಟ್ ಅಭಿರುಚಿ ಕಡಿಮೆಯಾಗುತ್ತಿದ್ದಂತೆ, ಜನ ಶಾರ್ಟ್ ಫಾರ್ಮೆಟ್ ಬೇಕೆಂಬ ಯೋಚನೆಗೆ ಮುಂದಾದರು.
Advertisement
ಟಿ20 ಮಾದರಿ
ಟಿ20, 20 ಓವರ್‌ಗಳ ಪಂದ್ಯ ಕೇವಲ 4 ಗಂಟೆಯಲ್ಲಿ ಪಂದ್ಯವನ್ನು ಮುಗಿಸುವ ಫಾರ್ಮೆಟ್ ಇದು. ಟಿ20 ಮಾದರಿ ಜಾರಿಗೆ ಬಂದ ಬಳಿಕ ಟೆಸ್ಟ್ ಕ್ರಿಕೆಟ್ ಮತ್ತು ಏಕದಿನ ಮಾದರಿ ಕ್ರಿಕೆಟ್‍ಗಿಂತ ಹೆಚ್ಚು ಜನಪ್ರಿಯವಾಯಿತು. ಏಕೆಂದರೆ ಇಲ್ಲಿ ಬ್ಯಾಟ್ಸ್‌ಮ್ಯಾನ್‌ಗಳ ಮನಮೋಹಕ ಹೊಡೆತ ನೋಡುವುದೇ ಒಂದು ಹಬ್ಬ. ಟಿ20 ಫಾರ್ಮೆಟ್‍ನಲ್ಲಿ ಇದೀಗ ಹೊಸ ಟ್ರೆಂಡ್ ಸೃಷ್ಟಿಯಾಗಿದೆ. ಅದು 360 ಡಿಗ್ರಿ ಬ್ಯಾಟಿಂಗ್. ಈ ಹಿಂದೆಯೇ ಟಿ20 ಕ್ರಿಕೆಟ್ ಎಂದರೆ ಅದು ಬ್ಯಾಟ್ಸ್‌ಮ್ಯಾನ್‌ಗಳ ಸ್ವರ್ಗ ಎಂಬ ಮಾತಿದೆ. ಇಲ್ಲಿ ಬೌಲರ್‌ಗಳ ಪಾಡು ಬಹಳ ಅನಾಯಸ. ಬ್ಯಾಟಿಂಗ್‍ನಲ್ಲಿ ಬೌಂಡರಿ, ಸಿಕ್ಸ್ ಚಚ್ಚುವ ಪರಿಗೆ ಬೌಲರ್ ಬೆಂಡಾಗುವುದೇ ಟಿ20 ಕ್ರಿಕೆಟ್. ಇಲ್ಲಿ ಹೊಡಿಬಡಿ ಆಟಗಾರ ಎಂದರೇ ಕ್ರಿಕೆಟ್ ಪ್ರಿಯರಿಗೆ ಅಚ್ಚುಮೆಚ್ಚು. ಅದರಲ್ಲೂ ಇದೀಗ 360 ಡಿಗ್ರಿ ಬ್ಯಾಟ್ಸ್‌ಮ್ಯಾನ್‌ಗಳಿಗೆ ಹೆಚ್ಚಿನ ಬೇಡಿಕೆ. ಇದನ್ನೂ ಓದಿ: ದ್ವಿಶತಕ ಸಿಡಿಸಿ ಅಬ್ಬರದ ಸಂಭ್ರಮದಲ್ಲಿ ವಾರ್ನರ್ ಎಡವಟ್ಟು – ಕೈ,ಕೈ ಹಿಡಿದು ಪೆವಿಲಿಯನ್‌ಗೆ ಕರೆತಂದ ಫಿಸಿಯೋ
Advertisement
360 ಡಿಗ್ರಿ ಬ್ಯಾಟಿಂಗ್
ಟಿ20 ಮಾದರಿಯಲ್ಲೂ ಇದೀಗ ಹೆಚ್ಚು ಬೇಡಿಕೆ ಇರುವುದು, ಮೈದಾನದ ಮೂಲೆ ಮೂಲೆಗೂ ಹೊಡೆದು ಭರ್ಜರಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯವಿರುವ ಆಟಗಾರನಿಗೆ. 360 ಡಿಗ್ರಿ ಬ್ಯಾಟ್ಸ್‌ಮ್ಯಾನ್ ಎಂದರೆ ಆತ ಯಾವುದೇ ಎಸೆತವನ್ನು ಮೈದಾನದ ಯಾವುದೇ ಮೂಲೆಗೂ ಹೊಡೆದಾಡುವ ಶಕ್ತಿ ಇರುವ ದಾಂಡಿಗ. ವಿಶ್ವ ಕ್ರಿಕೆಟ್‍ನಲ್ಲಿ ದಕ್ಷಿಣ ಆಫ್ರಿಕಾ ತಂಡದ ಎಬಿ ಡಿವಿಲಿಯರ್ಸ್ 360 ಡಿಗ್ರಿ ಬ್ಯಾಟ್ಸ್‌ಮ್ಯಾನ್ ಎಂದೇ ಖ್ಯಾತರಾಗಿದ್ದವರು. ಅವರನ್ನು ಹೊರತುಪಡಿಸಿದರೆ ಇದೀಗ 360 ಡಿಗ್ರಿ ಬ್ಯಾಟ್ಸ್‌ಮ್ಯಾನ್ ಆಗಿ ಭಾರತದ ಆಟಗಾರ ಸೂರ್ಯ ಕುಮಾರ್ ಯಾದವ್ ಗುರುತಿಸಿಕೊಂಡಿದ್ದಾರೆ. ಇವರ ಆಟ ನೋಡಲು ಅಭಿಮಾನಿಗಳು ಹೆಚ್ಚು ಇಷ್ಟ ಪಡುತ್ತಾರೆ. ಹಾಗಾಗಿ ಈ ಹೊಡಿಬಡಿ ಆಟ ಇನ್ನಷ್ಟು ರೋಚಕತೆ ಮೂಡಿಸಿದೆ. ಈ ನಡುವೆ ಟಿ20 ಮಾದರಿಯಿಂದ ಜನ ಬದಲಾವಣೆ ಬಯಸುತ್ತಿದ್ದಾರೆ.
ಟಿ10ನತ್ತ ಚಿತ್ತ
ಇದೀಗ ಕ್ರಿಕೆಟ್ ಪ್ರಿಯರ ದೃಷ್ಟಿ ಟಿ20 ಯಿಂದ ಟಿ10ನತ್ತ (T10) ನೆಟ್ಟಿದೆ. 20 ಓವರ್‌ಗಳ ಪಂದ್ಯಕ್ಕಿಂತಲೂ 10 ಓವರ್‌ಗಳ ಪಂದ್ಯದೆಡೆಗೆ ಸಾಗುತ್ತಿದೆ. ಈಗಾಗಲೇ ದುಬೈ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾಗಳಲ್ಲಿ ಟಿ10 ಮಾದರಿ ಲೀಗ್ ಯಶಸ್ಸು ಕಂಡಿದೆ. ಇದು ಟಿ20 ಗಿಂತ ಕಡಿಮೆ ಅವಧಿಯಲ್ಲಿ ಮುಗಿಯುತ್ತಿದ್ದು, ಕೇವಲ 2 ಗಂಟೆಯಲ್ಲಿ ಹೆಚ್ಚು ಅಬ್ಬರ ಕಾಣಸಿಗುವಂತಾಗಿಸಿದೆ. ಜನ ನಿಧಾನವಾಗಿ ಟಿ10 ಕ್ರಿಕೆಟ್‍ನತ್ತ ಮುಖ ಮಾಡುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಇದು ಕೂಡ ಬದಲಾಗಬಹುದು. ಜನ ಸಮಯದ ಅಭಾವದಿಂದಾಗಿ 10 ರಿಂದ 5 ಓವರ್‌ಗಳ ಪಂದ್ಯದ ಕಡೆಗೂ ಸಾಗಬಹುದು. ಈ ರೀತಿಯ ಟೂರ್ನಿ ಲೋಕಲ್ ಆಟದಲ್ಲಿದ್ದು, ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಕಂಡುಬಂದಿಲ್ಲ. ಮುಂದಿನ ದಿನಗಳಲ್ಲಿ ಕಾಣಸಿಕ್ಕರೂ ಅಚ್ಚರಿ ಪಡಬೇಕಾಗಿಲ್ಲ. ಇದನ್ನೂ ಓದಿ: ತನ್ನ ವಿಕೆಟ್ ಪಡೆದ ಬಾಂಗ್ಲಾ ಬೌಲರ್‌ಗೆ ವಿಶೇಷ ಉಡುಗೊರೆ ನೀಡಿದ ಕೊಹ್ಲಿ