-ಚದರಡಿ ಲೆಕ್ಕದಲ್ಲಿ ತೆರಿಗೆ ವಿಧಿಸಲು ಮುಂದಾದ ಬಿಬಿಎಂಪಿ
ಬೆಂಗಳೂರು: ಬೆಲೆ ಏರಿಕೆಯಿಂದ ಬೇಸತ್ತ ಬೆಂಗಳೂರಿಗರಿಗೆ (Bengaluru) ಬಿಬಿಎಂಪಿ (BBMP) ಮತ್ತೊಂದು ಶಾಕ್ ನೀಡಲು ಮುಂದಾಗಿದ್ದು, ಇದೀಗ ಮನೆ ಪಾರ್ಕಿಂಗ್ ಸ್ಥಳಕ್ಕೆ ಚದರಡಿ ಲೆಕ್ಕದಲ್ಲಿ ತೆರಿಗೆ ವಿಧಿಸಲು ಬಿಬಿಎಂಪಿ ನಿರ್ಧರಿಸಿದೆ.ಇದನ್ನೂ ಓದಿ:ರಾಜೇಂದ್ರ ಕೊಲೆ ಸಂಚು ಪ್ರಕರಣ – ಮುಖ್ಯ ಆರೋಪಿ ಸೋಮ ಪೊಲೀಸರಿಗೆ ಶರಣು
ವಸತಿ ಸ್ವತ್ತುಗಳಿಗೆ ಚದರ ಅಡಿಗೆ 2 ರೂ. ಹಾಗೂ ಕಮರ್ಷಿಯಲ್ ಸಂಸ್ಥೆಗಳಿಗೆ ಚದರ ಅಡಿಗೆ 3 ರೂ.ಯೆಂದು ನಿರ್ಧರಿಸಿದೆ.
ಈ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (Tushar Girinath) ಮಾತನಾಡಿ, ಬೆಂಗಳೂರಿನ ಯಾವುದೇ ಮೂಲೆಯಲ್ಲಿ ಮನೆಯಿದ್ದರೂ 2 ರೂ. ದರ ನಿಗದಿ ಮಾಡಲಾಗಿದೆ. ಈ ಹೊಸ ಪಾರ್ಕಿಂಗ್ ನೀತಿಯಿಂದ 45 ಕೋಟಿ ರೂ. ನಷ್ಟವಾಗಲಿದೆ. ಒಂದು ವೇಳೆ ಈ ನೀತಿಗೆ ಆಕ್ಷೇಪಣೆಗಳು ಹೆಚ್ಚಾಗಿ ಬಂದರೆ ಪಾರ್ಕಿಂಗ್ ನೀತಿ ಬದಲಾಗಬಹುದು ಎಂದು ಹೇಳಿದ್ದಾರೆ.ಇದನ್ನೂ ಓದಿ:6 ವಾರಗಳಲ್ಲಿ ಓಲಾ, ಉಬರ್ ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ಸ್ಥಗಿತಕ್ಕೆ ಹೈಕೋರ್ಟ್ ಆದೇಶ