ಲಕ್ನೋ: ಮಳೆಗಾಗಿ ಕಪ್ಪೆಗಳ ಮದುವೆ ಮಾಡಿರುವ ಘಟನೆ ಉತ್ತರ ಪ್ರದೇಶದ ಗೋರಖ್‍ಪುರದಲ್ಲಿ ನಡೆದಿದೆ.
ಗೋರಖ್‍ಪುರದಲ್ಲಿ ಈ ಬಾರಿಯ ವಾಡಿಕೆಗಿಂತ ಕಡಿಮೆ ಮಳೆ ಆಗಿದೆ. ಈ ಹಿನ್ನೆಲೆಯಲ್ಲಿ ಕಂಗೆಟ್ಟ ಜನರು ಕಾಲಿಬರಿ ದೇವಸ್ಥಾನದಲ್ಲಿ ಎಲ್ಲಾ ವಿಧಿ ವಿಧಾನಗಳನ್ನು ಅನುಸರಿಸಿ ಕಪ್ಪೆಗಳ ಮದುವೆ ಮಾಡಿದ್ದಾರೆ. ಸ್ಥಳೀಯ ಹಿಂದೂ ಸಂಘಟನೆಯು ಈ ವಿಧಿವಿಧಾನವನ್ನು ನಡೆಸಿದ್ದು, ಮದುವೆ ವೀಕ್ಷಿಸಲು ಸಾವಿರಾರು ಜನರು ಸೇರಿದ್ದರು.
Advertisement
Advertisement
ಈ ಬಗ್ಗೆ ಹಿಂದೂ ಮಹಾಸಂಘದ ಸದಸ್ಯರಾದ ರಮಾಕಾಂತ್ ವರ್ಮಾ ಮಾತನಾಡಿ, ಇಡೀ ಪ್ರದೇಶವು ಬರಗಾಲದಂತಹ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಈಗಾಗಲೇ ಈ ತಿಂಗಳು ಕಳೆಯುತ್ತಿದೆ. ಆದರೂ ಮಳೆ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಮೇಕೆದಾಟು ಆಣೆಕಟ್ಟು ನಿರ್ಮಾಣ ಯೋಜನೆ- ಜು. 26ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್
Advertisement
ಮಳೆ ಆಗಲಿ ಎಂದು ಕಳೆದ ವಾರ ಹೋಮಹವನಗಳನ್ನು ಮಾಡಿದ್ದೇವೆ. ಆದರೂ ಮಳೆ ಆಗಲಿಲ್ಲ. ಇದಕ್ಕಾಗಿ ಜೋಡಿ ಕಪ್ಪೆಗಳ ಮದುವೆಯನ್ನು ಮಾಡಿದ್ದೇವೆ. ಇದರಿಂದಾಗಿ ಆದರೂ ಮಳೆಯಾಗುತ್ತವೆ ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದರು. ಇದನ್ನೂ ಓದಿ: DSP ಮಾದರಿಯಲ್ಲೇ ಮಹಿಳಾ PSI ಹತ್ಯೆ?- ತಪಾಸಣೆಗೆ ಮುಂದಾದ ಅಧಿಕಾರಿಗೆ ವಾಹನ ಡಿಕ್ಕಿ ಹೊಡೆದು ಸಾವು