ಬೀದರ್: ಹಾವುಗಳು ಕಪ್ಪೆಗಳನ್ನು ನುಂಗೋದನ್ನು ಕೇಳಿರುತ್ತವೆ ಮತ್ತು ನೋಡಿರುತ್ತವೆ. ಆದ್ರೆ ಕಪ್ಪೆಯೊಂದು ಹಾವನ್ನೇ ನುಂಗಿರುವ ವಿಚಿತ್ರ ಘಟನೆಯೊಂದು ಜಿಲ್ಲೆಯ ಔರಾದ್ ತಾಲೂಕಿನ ಯನಗುಂದಾ ಗ್ರಾಮದಲ್ಲಿ ನಡೆದಿದೆ.
ಇಂದು ಬೆಳಗ್ಗೆ ಯನಗುಂದಾ ಗ್ರಾಮದ ಚರಂಡಿ ಬಳಿ ನಾಗರ ಹಾವು ಕಾಣಿಸಿಕೊಂಡಿತ್ತು. ಹಾವನ್ನು ಕಂಡ ಗ್ರಾಮಸ್ಥರು ಹಾವನ್ನು ನೋಡಲು ಹೋಗುತ್ತಿದ್ದಂತೆ ನಾಗರಾಜ ಚರಂಡಿಯೊಳಗೆ ನುಗ್ಗಿದ್ದಾನೆ. ಚರಂಡಿಯಲ್ಲಿ ಹೋಗುತ್ತಿದ್ದಂತೆ ಕಪ್ಪೆಯೊಂದು ಹಾವನ್ನು ನುಂಗಲು ಆರಂಭಿಸಿದೆ. ಹಾವನ್ನು ಕಪ್ಪೆ ನುಂಗುವದನ್ನು ನೋಡಿದ ಗ್ರಾಮಸ್ಥರು ದೃಶ್ಯವನ್ನು ಮೊಬೈಲಿನಲ್ಲಿ ಸೆರೆಹಿಡಿದುಕೊಂಡಿದ್ದಾರೆ.
Advertisement
Advertisement
ಹಾವು ಕಪ್ಪೆಯನ್ನು ನುಂಗುವುದನ್ನು ನೋಡಿದ್ದೇವೆ. ಆದ್ರೆ ಇದೇ ಮೊದಲ ಬಾರಿಗೆ ಕಪ್ಪೆಯೇ ಹಾವನ್ನು ನುಂಗಿದನ್ನು ನೋಡಿದ್ದೇವೆ ಎಂದು ಗ್ರಾಮಸ್ಥರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
ಮೇ ತಿಂಗಳಿನಲ್ಲಿ ಚಿಕ್ಕಮಗಳೂರಿನ ಪ್ರದೀಪ್ ಎಂಬವರ ಮನೆಯೊಳಗಡೆ ಆರು ಅಡಿ ಉದ್ದದ ಹಾವು ಸೇರಿಕೊಂಡಿತ್ತು. ಹಾವು ದೊಡ್ಡ ಕಪ್ಪೆ ನುಂಗಿ ತೆವಳಲು ಆಗದೆ ವಾಷಿಂಗ್ ಮಷೀನ್ ಸೇರಿತ್ತು. ವಾಷಿಂಗ್ ಮಷೀನ್ ಬಳಿ ರಕ್ತ ನೋಡಿ ಮನೆಯವರು ಗಾಬರಿಗೊಂಡಿದ್ದರು. ಮೊದಲು ಹಾವನ್ನು ನೋಡಿ ನಾಗರಹಾವೆಂದು ಮನೆಯವರು ಹೆದರಿಕೊಂಡಿದ್ದರು. ವಾಷಿಂಗ್ ಮಷೀನ್ ಬಿಚ್ಚಿದ ಮೇಲೆ ಅದು ಕೆರೆ ಹಾವು ಎಂದು ತಿಳಿದಿತ್ತು ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸ್ನೇಕ್ ನರೇಶ್ ಹಾವನ್ನು ರಕ್ಷಿಸಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://youtu.be/Amw3EVqleM0