ಬೆಂಗಳೂರು: ಸ್ನೇಹಿತರಿಬ್ಬರು ರಾತ್ರಿ ಫುಲ್ ಪಾರ್ಟಿ ಮಾಡಿದ್ದು, ಕ್ಷುಲ್ಲಕ ಕಾರಣಕ್ಕೆ ಜಗಳ ಶುರುವಾಗಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಗರದ ಡಿಜೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Advertisement
ಪ್ರಶಾಂತ್ ತನ್ನ ಸ್ನೇಹಿತ ನಿತೇಶ್ ನನ್ನು ಕೊಲೆ ಮಾಡಿದ್ದಾನೆ. ರಾತ್ರಿ ಇಬ್ಬರೂ ಒಟ್ಟಿಗೆ ಪಾರ್ಟಿ ಮಾಡಿದ್ದು, ಪಾರ್ಟಿ ಬಳಿಕ ಕ್ಷುಲ್ಲಕ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಆಗಿದೆ. ಈ ವೆಳೆ ನಿತೇಶ್ ಸ್ನೇಹಿತ ಪ್ರಶಾಂತ್ ಗೆ ಕಾಲಿನಿಂದ ಒದ್ದಿದ್ದ. ಕಾಲಿನಿಂದ ಒದ್ದ ಬಳಿಕ ಇಬ್ಬರು ಒಟ್ಟಿಗೆ ಮಲಗಿದ್ದರು. ಮಲಗಿ ಸ್ವಲ್ಪ ಸಮಯದ ನಂತರ ಕೋಪಗೊಂಡು ಮತ್ತೆ ಎಚ್ಚರಗೊಂಡಿದ್ದ ಪ್ರಶಾಂತ್, ನನಗೇ ಒದೆಯುತ್ತೀಯಾ ಎಂದು ಹಾಲೊ ಬ್ರಕ್ಸ್ ಎತ್ತಿ ನಿತೇಶ್ ತಲೆಮೇಲೆ ಹಾಕಿದ್ದಾನೆ. ಪರಿಣಾಮ ನಿತೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಕಾಮುಕ ವೃದ್ಧನಿಂದ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನ
Advertisement
Advertisement
ಸ್ಥಳಕ್ಕೆ ಡಿಜೆಹಳ್ಳಿ ಪೊಲೀಸರು ಭೇಟಿ ನೀಡಿದ್ದು, ಪರಾರಿಯಾಗುತ್ತಿದ್ದ ಪ್ರಶಾಂತ್ ನನ್ನು ಡಿಜೆಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.