ಚಿಕ್ಕಬಳ್ಳಾಪುರ: ಬೈಕ್ಗೆ ಕ್ಯಾಂಟರ್ (Canter vehicle) ಡಿಕ್ಕಿಯಾಗಿ ಇಬ್ಬರು ಸವಾರರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಪೋಶೆಟ್ಟಿಹಳ್ಳಿ ಗ್ರಾಮದ ಬಳಿ ನಡೆದಿದೆ.
ಮಂಚೇನಹಳ್ಳಿ ತಾಲೂಕಿನ ಹಳೇಬುದ್ದಿವಂತನಹಳ್ಳಿ ಹಾಗೂ ಎಂ ಗುಂಡ್ಲಹಳ್ಳಿ ಅಕ್ಕ ಪಕ್ಕದ ಗ್ರಾಮದ 24 ವರ್ಷದ ಪ್ರಕಾಶ್ ಹಾಗೂ 26 ವರ್ಷದ ಕೃಷ್ಣ ಮೃತರು. ಇದನ್ನೂ ಓದಿ: Mangaluru | ಹೆದ್ದಾರಿ ತಡೆಗೋಡೆಗೆ ಕಾರು ಡಿಕ್ಕಿ – ಇಬ್ಬರು ಯುವಕರು ಸಾವು
ಅಂದಹಾಗೆ ಈ ಇಬ್ಬರು ಯುವಕರು ಚಿಕ್ಕಬಳ್ಳಾಪುರ ನಗರದ ಖಾಸಗಿ ಕಂಪನಿಯಲ್ಲಿ ಕೆಲಸ (Private Company Job ಮಾಡುತ್ತಿದ್ದು ಮಾರ್ನಿಂಗ್ ಶಿಫ್ಟ್ ಇದ್ದ ಕಾರಣ ಬೆಳಿಗ್ಗೆ ಜೊತೆಯಾಗಿ ಒಂದೇ ಬೈಕಿನಲ್ಲಿ ಕೆಲಸಕ್ಕೆ ಬರ್ತಿದ್ದರು. ಇದನ್ನೂ ಓದಿ: ರಾಜ್ಯದ ಹಲವೆಡೆ ಮುಂದುವರಿದ ಮಳೆ – ಕರಾವಳಿಗೆ ಆರೆಂಜ್, ಉತ್ತರ ಒಳನಾಡಿನ 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಈ ವೇಳೆ ಪೋಶೆಟ್ಟಿಹಳ್ಳಿ ಬಳಿ ವೇಗವಾಗಿ ಬಂದ ಕ್ಯಾಂಟರ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ತಲೆಗೆ ಗಂಭೀರವಾದ ಗಾಯಗಳಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ವರ್ಷಕ್ಕೆ 30 ದಿನ ಮಾತ್ರ ತೆರೆಯುವ ಕೊಟ್ಟಿಯೂರು ಶಿವ ದೇಗುಲಕ್ಕೆ ನಟ ದರ್ಶನ್ ಭೇಟಿ