ಕೊಪ್ಪಳ: ಎಲ್ಲ ಸ್ನೇಹಿತರು ಸೇರಿ ಒಟ್ಟಿಗೆ ಫ್ರೆಂಡ್ಶಿಪ್ ಬೆಲ್ಟ್ ಕಟ್ಟಿದ್ದವನ ಜೀವ ಕೊನೆಯುಸಿರೆಳೆದಿರುವ ಮನಕಲುಕುವ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಮೃತ ದುರ್ದೈವಿ ಬಾಲಕನನ್ನು ಸುಹಾಸ್ ಸೌದ್ರಿ ಎಂದು ಗುರುತಿಸಲಾಗಿದೆ. ಕಾರಟಗಿ ಪಟ್ಟಣ ನಿವಾಸಿ ಸುಹಾಸ್ ಸೌದ್ರಿ ಚಿಕ್ಕ ವಯಸ್ಸಿನಿಂದಲೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ. ಸುಹಾಸ್ ಕಾರಟಗಿಯ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದ. ಆದರೆ ಕಳೆದ ಒಂದು ತಿಂಗಳಿಂದ ಆತನ ಆರೋಗ್ಯ ತುಂಬಾ ಕೆಟ್ಟಿತ್ತು. ಈ ಹಿನ್ನೆಲೆ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ತೀವ್ರ ಅನಾರೋಗ್ಯದ ನಡುವೆಯೂ ಸುಹಾಸ್ ತನ್ನ ಶಾಲೆ, ಶಿಕ್ಷಕರು, ಸ್ನೇಹಿತರನ್ನು ನೆನೆಸಿಕೊಂಡಿದ್ದಾನೆ. ಇದನ್ನೂ ಓದಿ: ಶಿಕ್ಷಕಿ ವೃತ್ತಿಯಿಂದ ನಿವೃತ್ತಿಗೊಂಡ ತಾಯಿಯನ್ನು ಹೆಲಿಕಾಪ್ಟರ್ನಲ್ಲಿ ಮನೆಗೆ ಕರೆತಂದ ಮಗ!
ಈ ಹಿನ್ನೆಲೆ ತನ್ನ ಮಗನ ಕೊನೆ ಆಸೆ ಈಡೇರಿಸಲು ಪೋಷಕರು ಶಾಲೆಗೆ ಕರೆದುಕೊಂಡು ಹೋಗಿದ್ದಾರೆ. ಸುಹಾಸ್ ಶಾಲಾ ಆವರಣದಲ್ಲಿ ಕಾರಿನಲ್ಲಿಯೇ ಮಲಗಿದ್ದ. ಆತನನ್ನು ನೋಡಿ ಇಡೀ ಶಾಲೆಯೇ ಅತ್ತಿತ್ತು. ಸುಹಾಸ್ ಸ್ನೇಹಿತರು ಆತನ ಪರಿಸ್ಥಿತಿಯನ್ನು ಕಂಡು ಕಣ್ಣೀರು ಹಾಕುತ್ತಲೇ ಫ್ರೆಂಡ್ಶಿಪ್ ಬೆಲ್ಟ್ ಕಟ್ಟಿದ್ದರು.
ಓದಿನಲ್ಲಿ ಟಾಪರ್
ಸುಹಾಸ್ ಓದಿನಲ್ಲಿ ಟಾಪರ್ ಆಗಿದ್ದು, ಶಾಲೆಯಲ್ಲಿ ಎಲ್ಲರೊಂದಿಗೂ ಅನ್ಯೋನ್ಯವಾಗಿದ್ದ. ಅದಕ್ಕೆ ಇಡೀ ಶಾಲೆಯ ಸ್ನೇಹಿತರು ಫ್ರೆಂಡಶಿಪ್ ಬೆಲ್ಟ್ ಕಟ್ಟುವ ಮೂಲಕ ಅಂತಿಮ ವಿದಾಯವನ್ನು ಹೇಳಿದರು. ಇಂದು ಬೆಳಗ್ಗೆ ಸುಹಾಸ್ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಭದ್ರತಾ ಪಡೆಗಳ ಎನ್ಕೌಂಟರ್ನಲ್ಲಿ ಎಲ್ಇಟಿ ಉಗ್ರ ಬಲಿ