– ಮಕ್ಕಳಿಗೆ ಫ್ರೀ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಟೀಚಿಂಗ್
– ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ
ಬೆಂಗಳೂರು: ಟೆಕ್ಕಿ ಅತುಲ್ ಸುಭಾಷ್ (Atul Subhash) ಆತ್ಮಹತ್ಯೆ ಕೇಸ್ ಈಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಅತುಲ್ ಸಾವಿಗೆ ಇಡೀ ದೇಶವೇ ಮರುಗುತ್ತಿದ್ದು, ಆತನನ್ನು ಈ ವ್ಯವಸ್ಥೆಯೇ ಬಲಿ ಪಡೆದಿದೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಇದರ ನಡುವೆ ಅತುಲ್ ಕೇವಲ ಒಬ್ಬ ಎಂಜಿನಿಯರ್ ಆಗಿರಲಿಲ್ಲ, ಬದಲಾಗಿ ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿಯಾಗಿದ್ದರು.
‘ನ್ಯಾಯ ಬಾಕಿಯಿದೆ’ ಎಂಬ ಪದ ಇದೀಗ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ. ಬೆಂಗಳೂರಿನ (Bengaluru) ಟೆಕ್ಕಿ ಅತುಲ್ ಆತ್ಮಹತ್ಯೆ ಇದಕ್ಕೆ ಕಾರಣ. ರಾಷ್ಟ್ರಮಟ್ಟದಲ್ಲಿ ಹಲ್‌ಚಲ್ ಎಬ್ಬಿಸಿದ, ಅತುಲ್ ಒಳಗೊಬ್ಬ ನಿಜವಾದ ಸಮಾಜಮುಖಿ ವ್ಯಕ್ತಿತ್ವವಿತ್ತು. ಜೀವನದಲ್ಲಿ ಅದೆಷ್ಟೋ ನೋವುಗಳನ್ನು ಅನುಭವಿಸುತ್ತಿದ್ದರೂ, ಸಮಾಜಕ್ಕಾಗಿ (Social Work) ಏನಾದರೂ ಮಾಡಬೇಕು, ಬಡವರ ಹಾಗೂ ಅನಾಥರಿಗೆ ಕೈಲಾದ ಸಹಾಯ ಮಾಡಬೇಕು ಎಂಬ ಹಂಬಲವಿತ್ತು. ಇದೇ ಕಾರಣದಿಂದ ‘ಸೇವ್ ಇಂಡಿಯನ್ ಫ್ಯಾಮಿಲಿ’ ಫೌಂಡೇಶನ್ ಸೇರಿದಂತೆ ಕೆಲ ಎನ್‌ಜಿಒಗಳಲ್ಲಿ ಸದಸ್ಯರಾಗಿದ್ದರು. ಈ ಮೂಲಕ ಸರ್ಕಾರಿ ಶಾಲಾ ಮಕ್ಕಳಿಗೆ ಹಾಗೂ ಅನಾಥಾಶ್ರಮಕ್ಕೆ ಸಹಾಯಹಸ್ತ ಚಾಚಿದ್ದ ಅತುಲ್ ಸ್ನೇಹಿತರು ಅತುಲ್‌ನನ್ನು ಗುಣಗಾನ ಮಾಡುತ್ತಿದ್ದಾರೆ. ಇದನ್ನೂ ಓದಿ: 16 ವರ್ಷದಿಂದ ಗದಗ ಮೃಗಾಲಯದಲ್ಲಿ ಘರ್ಜಿಸುತ್ತಿದ್ದ ಹುಲಿ ಸಾವು
ಇನ್ನೂ ಅತುಲ್ ತನ್ನ ಮಗು ತನ್ನ ಜೊತೆಯಲ್ಲಿ ಇಲ್ಲದಿದ್ದರೂ ಅನೇಕ ಅನಾಥಶ್ರಮಗಳ ಜೊತೆ ಸಂಪರ್ಕ ಹೊಂದಿದ್ದರು. ಅನೇಕ ಅನಾಥ ಮಕ್ಕಳಿಗೆ ಸಹಾಯ ಮಾಡಿದ್ದಾರೆ. ಜೊತೆಗೆ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಪುಸ್ತಕಗಳನ್ನು ವಿವರಿಸಿದ್ದಾರೆ. ಎಐ ಆರ್ಟಿಫಿಶಿಯಲ್ ಇಂಟಲಿಜೆನ್ಸ್‌ನಲ್ಲಿ ಎಕ್ಸ್‌ಪರ್ಟ್ ಆಗಿದ್ದ ಅತುಲ್, ಅನೇಕ ವಿದ್ಯಾರ್ಥಿಗಳಿಗೆ ಫ್ರೀಯಾಗಿ ಟೀಚಿಂಗ್ ಮಾಡುತ್ತಿದ್ದರು. ಇದೆಲ್ಲವನ್ನೂ ನೆನದು ಅತುಲ್ ಸ್ನೇಹಿತರು ಭಾವುಕರಾದರು. ಒಟ್ಟಿನಲ್ಲಿ ಅತುಲ್‌ನ ಈ ವ್ಯಕ್ತಿತ್ವಕ್ಕೆ ಮಾರುಹೋದ ಅನೇಕ ಜನ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಇದನ್ನೂ ಓದಿ: ಮಹಿಳೆಯರ ಗ್ರಾಮೀಣ ಕ್ರೀಡೋತ್ಸವಕ್ಕೆ ಸಾಕ್ಷಿಯಾದ ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ