ಪ್ಯಾರಿಸ್/ವಾಷಿಂಗ್ಟನ್: ನಗ್ನ ಮಾಡೆಲ್‌ಗಳ ಹಾಗೂ ಪೋರ್ನ್ ಸ್ಟಾರ್‌ಗಳ ಫೋಟೋಗಳಿಂದಲೇ ಕುಖ್ಯಾತಿ ಪಡೆದಿರುವ ಅಮೆರಿಕದ ಪ್ಲೇಬಾಯ್ ಮ್ಯಾಗಜೀನ್ (PlayBoy Magazine) ಕವರ್‌ಪೇಜ್‌ನಲ್ಲಿ ಫ್ರಾನ್ಸ್‌ನ ಮಹಿಳಾ ಸಚಿವೆ ಮರ್ಲಿನ್ ಶಿಯಪ್ಪಾ (40) (Marlene Schiappa) ಕಾಣಿಸಿಕೊಂಡಿದ್ದು ವಿವಾದಕ್ಕೆ ಕಾರಣವಾಗಿದೆ.
Invité ce matin sur Europe1 le Ministre de l’intérieur @GDarmanin apporte son soutien à @MarleneSchiappa sur sa Une Une de #playboy. Il cite Cookie Dingler : « vous ne me ferez pas dire de mal de Marlène Schiappa (…) être une femme libérée, c’est pas si facile » pic.twitter.com/pz50OoQdls
— Jeanne Baron (@jeannebarontv) April 2, 2023
Advertisement
ಸಾಮಾಜಿಕ ಆರ್ಥಿಕತೆ ಮತ್ತು ಫ್ರೆಂಚ್ ಅಸೋಸಿಯೇಷನ್‌ಗಳ ಸಚಿವರಾಗಿ ಸೇವೆ ಸಲ್ಲಿಸುವುದರ ಹೊರತಾಗಿಯೂ ಸ್ತ್ರೀವಾದಿ ಬರಹಗಾರರೂ ಆಗಿರುವ ಸಚಿವೆ ʻಮಹಿಳೆಯರು ಮತ್ತು ಎಲ್‌ಜಿಬಿಟಿ ಹಕ್ಕುಗಳʼ ಕುರಿತು 12 ಪುಟಗಳ ಸಂದರ್ಶನದೊಂದಿಗೆ ಕವರ್ ಫೋಟೋಗೆ ಪೋಸ್ ನೀಡಿದ್ದಾರೆ. ಅಲ್ಲದೆ, ಮಹಿಳೆಯರು ತಮ್ಮ ದೇಹವನ್ನು ಎಲ್ಲಿ ಬೇಕಾದರೂ ಬಹಿರಂಗಪಡಿಸಬಹುದು. ಅದರಲ್ಲಿ ನನಗೆ ಯಾವುದೇ ಸಮಸ್ಯೆಯಿಲ್ಲ. ಆದರೆ ಕೆಲ ಸಾಮಾಜಿಕ ಸನ್ನಿವೇಶಗಳಿವೆ ಎಂದು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: Umpire killed: ʼನೋಬಾಲ್ʼ ನೀಡಿದ್ದಕ್ಕೆ ಅಂಪೈರ್‌ನನ್ನೇ ಇರಿದು ಕೊಂದ ಆಟಗಾರ
Advertisement
Advertisement
ಈ ಬಗ್ಗೆ ಸ್ವಪಕ್ಷೀಯರಿಂದಲೇ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಖುದ್ದು ಪ್ರಧಾನಿ ಎಲಿಜಬೆತ್ ಬೋರ್ನ್ (Elisabeth Borne), ಮರ್ಲಿನ್ ಹೇಳಿಕೆ ಸರಿಯಲ್ಲ ಎಂದಿದ್ದಾರೆ. ಆಕೆಯ ವರ್ತನೆ, ಪ್ರತಿಕ್ರಿಯೆ ಸರಿಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದ್ರೆ ಸಚಿವೆ ಮರ್ಲಿನ್ ಮಾತ್ರ ತಮ್ಮ ಹೇಳಿಕೆ ಸಮರ್ಥನೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಜಗತ್ತಿಗೆ ಶಾಕ್ ಕೊಟ್ಟ OPEC – ಕಚ್ಚಾ ತೈಲ ಬೆಲೆ ದಿಢೀರ್ ಭಾರೀ ಏರಿಕೆ
Advertisement
ಪ್ಲೇ ಬಾಯ್ ಸಾಫ್ಟ್ ಪೋರ್ನ್ ಅಲ್ಲ: ಈ ಕುರಿತು ಪ್ರತಿಕ್ರಿಯೆ ನೀಡಿರುವ ಮ್ಯಾಗಜೀನ್, ಮರ್ಲಿನ್ ಶಿಯಪ್ಪ ಸ್ತ್ರೀವಾದಿ ಎಂಬ ಕಾರಣಕ್ಕೆ, ಲೇಖನಕ್ಕೂ ಹೊಂದಾಣಿಕೆಯಾಗುವಂತೆ ಅವರ ಫೋಟೋ ಬಳಸಿಕೊಳ್ಳಲಾಗಿದೆ. ಪ್ಲೇಬಾಯ್ ಸಾಫ್ಟ್ ಪೋರ್ನ್ ಮ್ಯಾಗಜೀನ್ ಅಲ್ಲ. ಇದರಲ್ಲಿ ಕೆಲ ಮಹಿಳೆಯರ ವಿವಸ್ತ್ರ ಫೋಟೋಗಳು ಇದೆ. ಆದರೆ ಅವು ಬಹುಪಾಲು ಪುಟಗಳು ಇಲ್ಲ ಎಂದು ಸ್ಪಷ್ಟನೆ ನೀಡಿದೆ.