ನವದೆಹಲಿ: ಫ್ರಾನ್ಸಿನ ಮೂರು ರಫೇಲ್ ಯುದ್ಧ ವಿಮಾನಗಳು ತಮಿಳುನಾಡಿನ ಸೂಲೂರ್‌ನಲ್ಲಿರುವ ವಾಯುನೆಯಲ್ಲಿ ನಿಲುಗಡೆಯಾಗಿತ್ತು.
ಮೂರು ರಫೇಲ್ ಜೆಟ್ ಒಳಗೊಂಡಂತೆ ಫ್ರೆಂಚ್ ವಾಯು ಪಡೆ ತಂಡವು ಪೆಸಿಫಿಕ್ ಸಾಗರದಲ್ಲಿ ನಡೆಸುತ್ತಿರುವ ಮೆಗಾ ಮಿಲಿಟರಿ ಕಾರ್ಯಾಚರಣೆಯ ಭಾಗವಾಗಿ ಸೂಲೂರಿನಲ್ಲಿ ಲ್ಯಾಂಡ್ ಆಗಿತ್ತು.
Advertisement
ಮಿಲಿಟರಿ ಸಹಕಾರವನ್ನು ಹೆಚ್ಚಿಸಲು ಫ್ರಾನ್ಸ್ ಮತ್ತು ಭಾರತವು 2018 ರಲ್ಲಿ ಪರಸ್ಪರ ಲಾಜಿಸ್ಟಿಕ್ಸ್ ಬೆಂಬಲ ನೀಡಲು ಸಹಿ ಹಾಕಿತ್ತು. ಈ ಒಪ್ಪಂದಂತೆ ಫ್ರಾನ್ಸ್ ವಿಮಾನಗಳು ಭಾರತದಲ್ಲಿ ಲ್ಯಾಂಡ್ ಆಗಿವೆ.
Advertisement
Advertisement
ಫ್ರೆಂಚ್ ವಾಯು ಮತ್ತು ಬಾಹ್ಯಾಕಾಶ ಪಡೆ ಇಂಡೋ-ಪೆಸಿಫಿಕ್‌ನಲ್ಲಿ ʼಪೆಗೇಸ್ 22ʼ ಹೆಸರಿನಲ್ಲಿ ಆಗಸ್ಟ್ 10 ರಿಂದ ಸೆಪ್ಟೆಂಬರ್ 18 ರವರೆಗೆ ಕಾರ್ಯಾಚರಣೆಯನ್ನು ನಡೆಸುತ್ತಿದೆ.
Advertisement
72 ಗಂಟೆಯ ಒಳಗಡೆ( ಆಗಸ್ಟ್10 -12ರ ಒಳಗಡೆ) ಫ್ರಾನ್ಸ್ ಸೇನೆಯನ್ನು ಮೆಟ್ರೋಪಾಲಿಟನ್ ಫ್ರಾನ್ಸ್‌ನಿಂದ ನ್ಯೂ ಕ್ಯಾಲೆಡೋನಿಯಾಗೆ ನಿಯೋಜಿಸುವುದು ಈ ಕಾರ್ಯಾಚರಣೆಯ ಮೊದಲ ಹಂತವಾಗಿತ್ತು. ಫ್ರಾನ್ಸ್ ವಸಾಹತು ಆಗಿರುವ ನ್ಯೂ ಕ್ಯಾಲೆಡೋನಿಯಾ ಆಸ್ಟ್ರೇಲಿಯಾದ ಸಿಡ್ನಿಯಿಂದ 2 ಸಾವಿರ ಕಿ.ಮೀ ದೂರದಲ್ಲಿದೆ. ಇದನ್ನೂ ಓದಿ: ಈಗ ಚುನಾವಣೆ ನಡೆದರೆ ಎನ್‌ಡಿಎಗೆ 286, ಕರ್ನಾಟಕದಲ್ಲಿ ಬಿಜೆಪಿಗೆ 13 ಸ್ಥಾನ
A contingent of the French Air & Space Force staged through an IAF base on their way to Ex-Pitch Black 2022 in Australia.
à bientôt @Armee_de_lair@IndiaembFrance pic.twitter.com/DQKSXIpu4P
— Indian Air Force (@IAF_MCC) August 11, 2022
16,600 ಕಿಮೀ. ದೂರವನ್ನು ಕ್ರಮಿಸಲು ಫ್ರಾನ್ಸ್ ವಾಯುಪಡೆಯ ತಾಂತ್ರಿಕ ನಿಲುಗಡೆ ಮಾಡಿತ್ತು. ಆಗಸ್ಟ್ 10 ರ ಸಂಜೆ ಸೂಲೂರಿನಲ್ಲಿ ಲ್ಯಾಂಡಿಂಗ್ ಆದ ವಿಮಾನಗಳು ಆಗಸ್ಟ್ 11 ರ ಮುಂಜಾನೆ ಇಂಧನ ತುಂಬಿದ ಬಳಿಕ ಕ್ಯಾಲೆಡೋನಿಯಾಕ್ಕೆ ತೆರಳಿದೆ.
ಫ್ರೆಂಚ್ ವಾಯುಪಡೆ ʼಪೆಗೇಸ್ 22ʼ ಬಳಿಕ ಆಗಸ್ಟ್ 17 ರಿಂದ ಸೆಪ್ಟೆಂಬರ್ 10 ರವರೆಗೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ʼಪಿಚ್ ಬ್ಲ್ಯಾಕ್ʼ ಸಮರಾಭ್ಯಾಸದಲ್ಲಿ ಭಾಗಿಯಾಗಲಿದೆ. ಭಾರತ ಸೇರಿದಂತೆ ಆಸ್ಟ್ರೇಲಿಯಾ, ಜಪಾನ್, ಅಮೆರಿಕ, ಜರ್ಮನಿ, ಇಂಡೋನೇಷ್ಯಾ, ಸಿಂಗಾಪುರ, ಇಂಗ್ಲೆಂಡ್, ದಕ್ಷಿಣ ಕೊರಿಯಾ ದೇಶಗಳು ಈ ಡ್ರಿಲ್‌ನಲ್ಲಿ ಭಾಗವಹಿಸಲಿವೆ.