ಪ್ಯಾರಿಸ್: ಫ್ರೆಂಚ್ ನಿರ್ದೇಶಕ (French Director) ರೆನೆ ಕ್ಲೆಮೆಂಟ್ ಅವರು 1964ರ ಥ್ರಿಲ್ಲರ್ ʻಜಾಯ್ ಹೌಸ್ʼ (Joy House) ಸಿನಿಮಾ ಚಿತ್ರೀಕರಣ ಮಾಡುವಾಗ, ನನ್ನನ್ನು ತನ್ನೊಂದಿಗೆ ಮಲಗುವಂತೆ ಕೇಳಿದ್ದ ಎಂದು ನಟಿ ಜೇನ್ ಫೋಂಡಾ (Jane Fonda) ಹೇಳಿದ್ದಾರೆ.
ವಾಚ್ ವಾಟ್ ಹ್ಯಾಪನ್ಸ್ ನೇರ ಸಂದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ 85 ವರ್ಷದ ನಟಿ, 58 ವರ್ಷಗಳ ಹಿಂದಿನ ಕರಾಳ ನೆನಪನ್ನು ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ಮುಂಬೈ ದಾಳಿಯ ಆರೋಪಿ ತಹವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಅನುಮತಿ
Advertisement
Advertisement
ಅಂದು ನಿರ್ದೇಶಕ ಕ್ಲೆಮೆಂಟ್ಗೆ 51 ವರ್ಷ ವಯಸ್ಸಾಗಿತ್ತು, ನನಗೆ 27 ವರ್ಷ. 1950-60 ದಶಕಗಳಲ್ಲಿ ಅತ್ಯಂತ ಪ್ರಭಾವಿ ಚಲನಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕರಲ್ಲಿ ಒಬ್ಬರಾಗಿದ್ದರು. ಕೇನ್ಸ್ ಚಿತ್ರೋತ್ಸವದಲ್ಲಿ ಐದು ಬಹುಮಾನಗಳನ್ನೂ ಬಾಚಿಕೊಂಡಿದ್ದರು.
Advertisement
ಸಂದರ್ಶನದ ವೇಳೆ ಫೋಂಡಾಗೆ ನಿಮ್ಮ ಜೀವನದಲ್ಲಿ ಬಂದ ಪ್ರಮುಖ ವ್ಯಕ್ತಿಯೊಬ್ಬನ ಬಗ್ಗೆ ಹೇಳುವಂತೆ ಕೇಳಿದಾಗ ಅವರು, ಫ್ರೆಂಚ್ ನಿರ್ದೇಶಕನ ಬಗ್ಗೆ ಹೇಳಿದರು. ಇದನ್ನೂ ಓದಿ: ಹಿಂದೂ ಮಹಾಸಾಗರದಲ್ಲಿ ಚೀನಾದ ದೋಣಿ ಮುಳುಗಡೆ – 39 ಜನ ನಾಪತ್ತೆ
Advertisement
ಮುಂದುವರಿದು, ಕ್ಲೆಮೆಂಟ್ ನನ್ನೊಂದಿಗೆ ಮಲಗಲು ಬಯಸಿದ್ದ. ಏಕೆಂದರೆ ಅವನು ತನ್ನ ಉದ್ರೇಕದ ಸಾಮರ್ಥ್ಯ ತಿಳಿದುಕೊಳ್ಳಬೇಕಿತ್ತು. ಆದ್ರೆ ನಾನು ಅದಕ್ಕೆ ಒಪ್ಪಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ಫೋಂಡಾ ಆ ಸಿನಿಮಾದಲ್ಲಿ ವಿಧವೆ ಸೊಸೆ ಪಾತ್ರದಲ್ಲಿ ನಟಿಸಿದ್ದರು. ಇತ್ತೀಚೆಗೆ ಬಿಡುಗಡೆಯಾದ ʻಬುಕ್ ಕ್ಲಬ್: ದಿ ನೆಕ್ಸ್ಟ್ ಚಾಪ್ಟರ್ʼ ಚಿತ್ರದಲ್ಲಿಯೂ ಅವರು ನಟಿಸಿದ್ದಾರೆ. ಇದು 2018ರಲ್ಲಿ ಬಿಡುಗಡೆಯಾದ ಚಿತ್ರದ ಮುಂದುವರಿದ ಭಾಗವಾಗಿದೆ.