ಬೆಂಗಳೂರು: ಖ್ಯಾತ ನಟ ಪುನೀತ್ ರಾಜ್‍ಕುಮಾರ್ ಸ್ಮರಣಾರ್ಥ ಹಾಗೂ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆಮ್ ಆದ್ಮಿ ಪಾರ್ಟಿಯು ಸಂಪಂಗಿರಾಮ ನಗರದಲ್ಲಿ ಆಯೋಜಿಸಿದ್ದ ಉಚಿತ ನೇತ್ರ ತಪಾಸಣೆ ಶಿಬಿರದಲ್ಲಿ ನೂರಕ್ಕೂ ಹೆಚ್ಚು ಜನರು ಕಣ್ಣಿನ ತಪಾಸಣೆ ಮಾಡಿಸಿಕೊಂಡರು.
ಸಂಪಂಗಿರಾಮ ನಗರ ವಾರ್ಡ್‍ನ ಎಎಪಿ ಅಧ್ಯಕ್ಷರಾದ ಪ್ರಕಾಶ್ ನೆಡುಂಗಡಿ ಅವರು ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ, ನಮ್ಮ ವಾರ್ಡ್‍ನ ಅನೇಕ ಬಡವರು ದೀರ್ಘಕಾಲದಿಂದಲೂ ಕಣ್ಣಿನ ತಪಾಸಣೆ ಮಾಡಿಸಿಕೊಂಡಿಲ್ಲ ಎಂಬುದು ನನ್ನ ಗಮನಕ್ಕೆ ಬಂದಿತು. ಡಾ.ರಾಜ್‍ಕುಮಾರ್ ಹಾಗೂ ಅವರ ಮಗ ಪುನೀತ್ ರಾಜ್‍ಕುಮಾರ್ ಅವರು ನೇತ್ರದಾನ ಮಾಡಿರುವುದು ನಾಡಿನೆಲ್ಲೆಡೆ ನೇತ್ರದಾನವನ್ನು ಪ್ರೋತ್ಸಾಹಿಸಿದೆ. ಆದ್ದರಿಂದ ಅವರ ಸ್ಮರಣಾರ್ಥ ಉಚಿತ ನೇತ್ರ ತಪಾಸಣೆ ಶಿಬಿರ ಆಯೋಜಿಸಲು ನಿರ್ಧರಿಸಿದೆವು. ದೆಹಲಿ ಮಾದರಿಯಲ್ಲಿ ಬೆಂಗಳೂರಿನಲ್ಲೂ ಸಾರ್ವಜನಿಕರ ಆರೋಗ್ಯ ವೃದ್ಧಿಸಲು ಎಎಪಿ ನಿರ್ಧರಿಸಿದ್ದು, ಇದು ಆ ಪ್ರಯತ್ನದ ಭಾಗವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಗೌಪ್ಯವಾಗಿ ಬೂಸ್ಟರ್ ಶಾರ್ಟ್ ಪಡೆಯುತ್ತಿರುವ ಆರೋಗ್ಯ ಸಿಬ್ಬಂದಿ
‘ಆಮ್ ಆದ್ಮಿ ಪಾರ್ಟಿಯು ಶಿಬಿರವನ್ನು ಆಯೋಜಿಸಿರುವುದು ಇಲ್ಲಿನ ಜನರಿಗೆ ತುಂಬಾ ಉಪಯುಕ್ತವಾಗಿದೆ. ಕಣ್ಣಿಗೆ ಬಹಳ ಆಯಾಸ ಉಂಟುಮಾಡುವ ಬದಲು ಅದರ ಸುರಕ್ಷತೆಗೆ ಕಾಳಜಿ ತೆಗೆದುಕೊಳ್ಳಬೇಕು’ ಎಂದು ತಪಾಸಣೆ ಮಾಡಿಸಿಕೊಂಡ ರವಿಕುಮಾರ್ ಎಂಬವರು ಹೇಳಿದರು.
ಖ್ಯಾತ ನೇತ್ರತಜ್ಞ ಡಾ.ರಾಜೇಶ್ ಪರೇಖ್ ಮತ್ತು ಅವರ ತಂಡದವರು ಉತ್ತಮ ಗುಣಮಟ್ಟದ ತಪಾಸಣೆ ನಡೆಸಿ, ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವವರಿಗೆ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದರು.
ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕರಾದ ಪೃಥ್ವಿ ರೆಡ್ಡಿಯವರು ಬೆಂಗಳೂರಿನ ಸರ್ವಜ್ಞ ನಗರದಲ್ಲಿ ರಾಜ್ಯೋತ್ಸವ ಆಚರಿಸಿ, ನಾಡು-ನುಡಿಯ ಉಳಿವಿಗಾಗಿ ನಾವೆಲ್ಲರೂ ಸದಾ ಬದ್ಧರಾಗಿರಬೇಕು ಎಂದು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಇದನ್ನೂ ಓದಿ: 5-6 ದಿನ ಪುನೀತ್ ಸಮಾಧಿ ಬಳಿ ಯಾರನ್ನೂ ಬಿಡಲ್ಲ: ಅರಗ ಜ್ಞಾನೇಂದ್ರ