ಚಾಮರಾಜನಗರ: ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಕೊಡ್ತೀವಿ ಎಂದು ಇಂಧನ ಖಾತೆ ಸಚಿವ ಕೆ.ಜೆ.ಜಾರ್ಜ್ (K.J.George) ಭರವಸೆ ನೀಡಿದರು.
ಚಾಮರಾಜನಗರದಲ್ಲಿ (Chamarajanagara) ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಆಗಿರುವ ವರೆಗೂ, ರಾಜ್ಯದಲ್ಲಿ ವಿದ್ಯುತ್ ಕ್ಷೇತ್ರ ಖಾಸಗೀಕರಣ ಆಗಲ್ಲ. ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಕೊಡ್ತೀವಿ ಎಂದು ತಿಳಿಸಿದರು. ಇದನ್ನೂ ಓದಿ: ಯು.ಟಿ.ಪಿ ಕಾಲುವೆ ಒಡೆದು 1 ತಿಂಗಳಾದ್ರೂ ದುರಸ್ತಿ ಮಾಡದ ಅಧಿಕಾರಿಗಳು- ಕಂಗಾಲಾದ ರೈತರು
Advertisement
Advertisement
ಬೇರೆ ಕಡೆ ವಿದ್ಯುತ್ ಖರೀದಿಸಿ ರೈತರಿಗೆ ಉಚಿತ ವಿದ್ಯುತ್ ನೀಡ್ತಿದ್ದೇವೆ. ವಿದ್ಯುತ್ ಕಳ್ಳತನ ತಪ್ಪಿಸಲು ಕೃಷಿ ಪಂಪ್ ಸೆಟ್‌ಗಳಿಗೆ ಆಧಾರ್ ಲಿಂಕ್ ಕಡ್ಡಾಯ ಮಾಡಲಾಗಿದೆ. ಇದರಿಂದ ರೈತರಿಗೆ ಅನುಕೂಲ. ಯಾರೋ ವಿದ್ಯುತ್ ಕಳ್ಳತನ ಮಾಡಿ ರೈತರ ಮೇಲೆ ಹಾಕುತ್ತಿದ್ದರು. ಆಧಾರ್ ಲಿಂಕ್‌ನಿಂದ ಅದೆಲ್ಲಾ ತಪ್ಪಲಿದೆ. ನಮ್ಮ ಇಲಾಖೆಗೂ ಲೆಕ್ಕ ಸಿಗಲಿದೆ ಎಂದು ಸ್ಪಷ್ಟಪಡಿಸಿದರು.
Advertisement
ಕೃಷಿ ಪಂಪ್‌ಸೆಟ್ ಅಕ್ರಮ ಸಕ್ರಮದ ಅಡಿ 4 ಲಕ್ಷ ಅರ್ಜಿ ಬಾಕಿ ಇದ್ದವು. ಈಗ ಅದೆಲ್ಲಾ ಕಡಿಮೆಯಾಗಿದೆ. ವಿದ್ಯುತ್ ಲೈನ್‌ನಿಂದ 500 ಮೀಟರ್ ಒಳಗೆ ಇರುವ ಕೃಷಿ ಪಂಪ್‌ಸೆಟ್‌ಗಳ ಸಕ್ರಮಕ್ಕೆ ಕ್ರಮ ವಹಿಸಲಾಗುವುದು. 500 ಮೀಟರ್ ಆಚೆ ಇರುವ ಕೃಷಿ ಪಂಪ್‌ಸೆಟ್‌ಗಳಿಗೆ ಕುಸುಮ್ ‘ಬಿ ಸೋಲಾರ್ ಯೋಜನೆ ಜಾರಿ ಮಾಡಲಾಗುವುದು ಎಂದರು. ಇದನ್ನೂ ಓದಿ: ಬೆಳಗಾವಿಯಲ್ಲಿ ಡಿ.9 ರಿಂದ ಚಳಿಗಾಲದ ಅಧಿವೇಶನ
Advertisement
ಪಂಪ್‌ಸೆಟ್ ಮೋಟಾರ್, ಮೀಟರ್ ಎಲ್ಲವನ್ನು ಇಲಾಖೆಯಿಂದಲೇ ಕೊಡ್ತೀವಿ. 80% ಸಬ್ಸಿಡಿ ಕೊಡ್ತೀವಿ ಎಂದು ರೈತರಿಗೆ ಸಚಿವರು ಭರವಸೆ ನೀಡಿದರು.