ಬೆಂಗಳೂರು: ತಮಿಳುನಾಡಿನ (Tamil Nadu) ಗರ್ಭಿಣಿ ಮಹಿಳೆಗೆ (Pregnant Woman) ಉಚಿತ ಡ್ರಾಪ್ ಕೊಟ್ಟು ಯಾವುದೇ ಹಣ ಪಡೆಯದ ಬೆಂಗಳೂರು ಆಟೋ ಚಾಲಕನ (Auto Driver) ಕಾರ್ಯಕ್ಕೆ ತಮಿಳುನಾಡಿನಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ತಮಿಳುನಾಡಿನ ಮಹಿಳೆಗೆ ಉಚಿತವಾಗಿ ಆಟೋ ಸೇವೆ ನಿಡಿದ್ದಕ್ಕಾಗಿ ಇದೀಗ ಸಾಮಾಜಿಕ ಜಾಲಾತಾಣದಲ್ಲಿ ಆಟೋ ಚಾಲಕನ ಗುಣಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಬೆಂಗಳೂರಿನಲ್ಲಿ ಗರ್ಭಿಣಿಯರಿಗೆ ಉಚಿತ ಪ್ರಯಾಣ ಎಂದು ಹಣ ಪಡೆಯದೆ ಶುಭವಾಗಲಿ ಎಂದು ಹಾರೈಸಿ ಮಹಿಳೆಯನ್ನು ಆಟೋ ಚಾಲಕ ಕಳುಹಿಸಿಕೊಟ್ಟಿದ್ದರು. ಸದ್ಯ ತಮಿಳುನಾಡಿನ ಸುದ್ದಿಮಾಧ್ಯಮಗಳಲ್ಲಿ ಆಟೋ ಚಾಲಕನ ಮಾನವೀಯ ಗುಣಕ್ಕೆ ಪ್ರಶಂಸೆ ದೊರೆತಿದೆ. ಇದನ್ನೂ ಓದಿ: ತಲೆಗೆ ಮೊಟ್ಟೆ ಏಟು – ಆಸ್ಪತ್ರೆಯಿಂದ ಮುನಿರತ್ನ ಡಿಸ್ಚಾರ್ಜ್
ಚಾಲಕ ನಿಮ್ಮ ಮಾತೃಭಾಷೆ ಯಾವುದು ಎಂದು ಗರ್ಭಿಣಿ ಮಹಿಳೆ ಬಳಿ ಕೇಳಿದಾಗ ಮಹಿಳೆ ತಮಿಳು ಎಂದಿದ್ದಾರೆ. ಈ ವೇಳೆ ನಮ್ಮಲ್ಲಿ ಯಾವುದೇ ಭಾಷೆ ಇದ್ದರೂ, ನಮ್ಮ ಆಟೋದಲ್ಲಿ ಕರ್ನಾಟಕದಲ್ಲಿ ಗರ್ಭಿಣಿಯರಿಗೆ ಉಚಿತ ಪ್ರಯಾಣ. ನನ್ನ ಆಟೋದಲ್ಲಿ ನಾನು ಯಾವ ಗರ್ಭಿಣಿಯರಿಗೂ ಹಣ ತೆಗೆದುಕೊಳ್ಳಲ್ಲ. ಹುಷಾರಾಗಿ ಹೋಗಿಬನ್ನಿ ಎಂದು ಆಟೋ ಚಾಲಕ ಹಾರೈಸಿದ್ದಾನೆ. ಇದನ್ನೂ ಓದಿ: Hubballi| ಸಿಲಿಂಡರ್ ಬ್ಲಾಸ್ಟ್ ಪ್ರಕರಣ – ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಸಾವು
ಇದೀಗ ಭಾಷೆ ಯಾವುದಾದರೂ ಇರಲಿ, ಯಾರಾದರೂ ಇರಲಿ, ಗರ್ಭಿಣಿ ಮಹಿಳೆಯರಿಗೆ ಉಚಿತ ಸೇವೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗಿದೆ. ಇದನ್ನೂ ಓದಿ: ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ಶತಮಾನದ ಸಂಭ್ರಮ – ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ ಕುಂದಾನಗರಿ