ಚಂಡೀಗಢ: ಮಾರಾಟಗಾರರೊಬ್ಬರು ಕೊರೊನಾ ಮೂರನೇ ಡೋಸ್ ಬೂಸ್ಟರ್ ಡೋಸ್‍ನ್ನು ಹಾಕಿಸಿಕೊಂಡ ಜನರಿಗೆ ಉಚಿತ ಪುರಿ ಸಾಗುವನ್ನು ನೀಡುತ್ತಿದ್ದಾರೆ.
ಚಂಡೀಗಢದ ಮಾರಾಟಗಾರ ಸಂಜಯ್ ರಾಣಾ(45) ಜನರಲ್ಲಿ ಜಾಗೃತಿ ಮೂಡಿಸಲು ಈ ರೀತಿ ಮಾಡುತ್ತಿದ್ದಾರೆ. ಬೂಸ್ಟರ್ ಡೋಸ್‍ನ್ನು ಪಡೆಯಲು ಹೆಚ್ಚಿನ ಜನರು ಮುಂದೆ ಬರದ ಹಿನ್ನೆಲೆಯಲ್ಲಿ ಈ ರೀತಿಯ ಕಾರ್ಯವನ್ನು ಕೈಗೊಂಡಿದ್ದಾರೆ.
Advertisement
Advertisement
ಒಂದು ವರ್ಷದ ಹಿಂದೆ ಕೊರೊನಾ ಲಸಿಕೆಯನ್ನು ಪಡೆದುಕೊಳ್ಳುವವರಿಗೆ ಉಚಿತ ಪುರಿ ಸಾಗುವನ್ನು ನೀಡುತ್ತಿರುವುದಕ್ಕೆ ಪ್ರಧಾನಿ ಮೋದಿ ಅವರು ಮನ್ ಕಿ ಬಾತ್‍ನಲ್ಲಿ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದರು. ಸಂಜಯ್ ರಾಣಾ ಆಹಾರದ ಅಂಗಡಿಯನ್ನು ನಡೆಸುತ್ತಾರೆ. ಸೈಕಲ್‍ನಲ್ಲಿ ಚೋಲೆ ಭತುರೆಯನ್ನು ಮಾರಾಟ ಮಾಡುತ್ತಾರೆ. ಕಳೆದ 15 ವರ್ಷಗಳಿಂದ ಈ ಸ್ಟಾಲ್ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕಳ್ಳ-ಪೊಲೀಸ್ ಆಟವಾಡುತ್ತಾ ನೆರೆ ಮನೆಯ ಬಾಲಕನನ್ನು ಕೊಂದ ಬಿಜೆಪಿ ಮುಖಂಡನ ಮಗ
Advertisement
Advertisement
ಸಂಜಯ್ ರಾಣಾ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಬೂಸ್ಟರ್ ಲಸಿಕೆಯನ್ನು ತೆಗೆದುಕೊಂಡವರು ಪ್ರಮಾಣ ಪತ್ರವನ್ನು ತೋರಿಸಬೇಕು. ಅದಾದ ಬಳಿಕ ರುಚಿಕರವಾದ ಪುರಿ ಸಾಗುವನ್ನು ನೀಡುತ್ತೇವೆ ಎಂದು ತಿಳಿಸಿದ್ದಾರೆ.
ಸಮಾಜದ ಒಳಿತಿಗಾಗಿ ಕೆಲಸ ಮಾಡಲು, ಸೇವಾ ಮನೋಭಾವ ಮತ್ತು ಕರ್ತವ್ಯ ಪ್ರಜ್ಞೆ ಇರಬೇಕು. ಇದನ್ನು ಸಂಜಯ್ ಅವರು ಸಾಬೀತು ಪಡಿಸಿದ್ದಾರೆ ಎಂದು ಪ್ರಧಾನಿ ಮೋದಿ ಅವರು ಶ್ಲಾಘಿಸಿದ್ದರು. ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಹಿಂದೆ PFI ಕೈವಾಡ ಶಂಕೆ ವ್ಯಕ್ತಪಡಿಸಿದ ಕೇಂದ್ರ ಸಚಿವೆ ಶೋಭಾ