ವಿಜಯಪುರ: ಲೋಕಾಯುಕ್ತ ಡಿವೈಎಸ್ಪಿ ಎಂದು ಕರೆ ಮಾಡಿ ವಂಚನೆಗೆ ಯತ್ನಿಸಿದ್ದ ಆರೋಪಿಯನ್ನು ಇದೀಗ ವಿಜಯಪುರ (Vijayapura) ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ (Belagavi) ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಮೂಲದ ಮುರಿಗೆಪ್ಪ ವಂಚಕ.ಇದನ್ನೂ ಓದಿ: ಲಕ್ಕಿ ಬಾಸ್ಕರ್ ಸಿನಿಮಾ ಸ್ಟೈಲ್‌ನಲ್ಲಿ 24 ಕೋಟಿ ವಂಚನೆ – ಸಿಸಿಬಿ ತನಿಖೆ ವೇಳೆ ಬಟಾಬಯಲು
ಲೋಕಾಯುಕ್ತ ಡಿವೈಎಸ್ಪಿ ಎಂದು ನಂಬಿಸಿ, ಕೆಬಿಜೆಎನ್‌ಎಲ್‌ನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅಶೋಕ ಬಿರಾದಾರ ಅವರಿಗೆ ಕರೆ ಮಾಡಿ 70 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದ. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಜ.23ರಂದು ಪ್ರಕರಣ ದಾಖಲಾಗಿತ್ತು.
ಈತನ ವಿರುದ್ಧ ಒಟ್ಟು 57 ಪ್ರಕರಣಗಳು ದಾಖಲಾಗಿದ್ದು, ಮೋಸ, ವಂಚನೆ ಹಾಗೂ ಸೈಬರ್ ಅಪರಾಧಕ್ಕೆ ಸಂಬಂಧಿಸಿದಂತೆ ಕೇಸ್ ದಾಖಲಾಗಿವೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಆರೋಪಿ ಕೃತ್ಯಗಳನ್ನು ಎಸಗಿರುವುದಾಗಿ ತಿಳಿದು ಬಂದಿದೆ. ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ನಿರತರಾಗಿದ್ದ ಪೊಲೀಸರು ಮಹರಾಷ್ಟ್ರದ ಶಿರೋಳ ತಾಲೂಕಿನಲ್ಲಿ ವಶಕ್ಕೆ ಪಡೆದಿದ್ದಾರೆ.ಇದನ್ನೂ ಓದಿ: ನವೆಂಬರ್ ಗೂಗ್ಲಿ ಹಾಕಿದ ಆರ್.ಅಶೋಕ್; ಕಾಂಗ್ರೆಸ್ ಸಚಿವರು ಕೆಂಡ, ಇತ್ತ ದೆಹಲಿಗೆ ಹೋಗ್ತಾರಾ ಪರಂ ಟೀಂ?