ಸ್ಯಾಂಡಲ್ ವುಡ್ ನಲ್ಲಿ ನಿಶಾ ನರಸಪ್ಪ ಎನ್ನುವವರು ಮಾಸ್ಟರ್ ಆನಂದ್ ಮಗಳ ಹೆಸರಿನಲ್ಲಿ ವಂಚನೆ ಮಾಡಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದರೆ, ಅತ್ತ ಬಾಲಿವುಡ್ (Bollywood)ನಲ್ಲೂ ಸಲ್ಮಾನ್ ಖಾನ್ (Salman Khan) ಹೆಸರಿನಲ್ಲಿ ದೋಖಾ (Cheating) ಮಾಡಲಾಗುತ್ತಿದೆ ಎಂದು ಸ್ವತಃ ಸಲ್ಮಾನ್ ಖಾನ್ ತಿಳಿಸಿದ್ದಾರೆ. ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಸಲ್ಮಾನ್ ಖಾನ್ ಸಂಸ್ಥೆಯಿಂದ ತಯಾರಾಗುವ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಮತ್ತು ಅವರ ಕಂಪೆನಿಯ ಹೆಸರಿನಲ್ಲಿ ಬೇರೆಯವರು ಆಡಿಷನ್ (Audition) ಮಾಡಿ ಹಣ ಪಡೆಯಲಾಗುತ್ತಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಕುರಿತು ಯಾರೋ ಮೋಸ ಹೋಗಬಾರದು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ನ್ಯಾಯಕ್ಕಾಗಿ ಇಂದು ಫಿಲ್ಮ್ ಚೇಂಬರ್ ಮುಂದೆ ನಿರ್ಮಾಪಕ ಎನ್.ಕುಮಾರ್ ಪ್ರತಿಭಟನೆ
ನಮ್ಮ ಸಂಸ್ಥೆಯಿಂದ ಯಾವುದೇ ಹೊಸ ಸಿನಿಮಾ ಮಾಡುತ್ತಿಲ್ಲ ಮತ್ತು ಸಿನಿಮಾದ ಹೆಸರಿನಲ್ಲಿ ಆಡಿಷನ್ ಕೂಡ ನಡೆಯುತ್ತಿಲ್ಲ. ಕಾಸ್ಟಿಂಗ್ ಡೈರೆಕ್ಟರ್ ಅಥವಾ ಕಾಸ್ಟಿಂಗ್ ಮಾಡಲು ಯಾವುದೇ ಏಜೆನ್ಸಿಗೆ ನಾವು ಅನುಮತಿಯನ್ನೂ ನೀಡಿಲ್ಲ. ಯಾರಾದರೂ ಇ-ಮೇಲ್ ಮಾಡಿದರೆ ಅಥವಾ ಮಸೇಜ್ ಕಳುಹಿಸಿದರೆ, ಯಾರು ರಿಯ್ಯಾಕ್ಟ್ ಮಾಡಬೇಡಿ. ಅಂಥವರ ವಿರುದ್ಧ ದೂರು ನೀಡಿ ಎಂದು ಬರೆದುಕೊಂಡಿದ್ದಾರೆ.
ಸ್ಯಾಂಡಲ್ ವುಡ್, ಬಾಲಿವುಡ್ ನಲ್ಲಿ ಮಾತ್ರವಲ್ಲ ಭಾರತೀಯ ಸಿನಿಮಾ ರಂಗದ ನಾನಾ ಕಡೆಗಳಲ್ಲಿ ಇಂತಹ ವಂಚನೆಗಳು ನಡೆಯುತ್ತಲೇ ಇವೆ. ಈಗಾಗಲೇ ಅನೇಕ ಬಾರಿ ಇಂತಹ ಪ್ರಕರಣಗಳು ಆಚೆ ಬಂದಿವೆ. ಬಂದರೂ ಜನರು ಮೋಸ ಹೋಗುವುದನ್ನು ಮಾತ್ರ ನಿಲ್ಲಿಸಿಲ್ಲ.
Web Stories