ನಟ ಮಾಸ್ಟರ್ ಆನಂದ್ (Master Anand) ಪುತ್ರಿಯ ಹೆಸರಲ್ಲಿ ವಂಚನೆ ಮಾಡಿದ್ದ ಆರೋಪಿ ನಿಶಾ ನರಸಪ್ಪ (Nisha Narsappa) ಜೈಲಿನಿಂದ ಬಿಡುಗಡೆಯಾಗಿದ್ದಾಳೆ. ಹದಿನಾಲ್ಕು ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ನಿಶಾ, ಆದ್ರೆ ನಿಶಾ ವಿರುದ್ಧ ಹರಿದು ಬರುತ್ತಿರೋ ದೂರಿನ ಸುರಿಮಳೆ ಮಾತ್ರ ನಿಂತಿಲ್ಲ. ಸಾಲು-ಸಾಲು ದೂರುಗಳು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುತ್ತಿದ್ದು, ಆಕೆಯ ಮೋಸ ಮಾಡುವ ಮನಸ್ಸಿನ ಒಂದೊಂದೇ ಮುಖಗಳು ತೆರೆದುಕೊಳ್ತಿವೆ.
ದೊಡ್ದ-ದೊಡ್ಡ ಸ್ಟಾರ್ಗಳ ಹೆಸರು ಬಳಸಿಕೊಳ್ಳುತ್ತಿದ್ದ ನಿಶಾ, ದಿ. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ (Puneeth Rajkumar) ಹೆಸ್ರನ್ನೂ ಬಿಟ್ಟಿಲ್ಲ. ಅಪ್ಪುಗೆ ಟ್ರಿಬ್ಯೂಟ್ ಸಾಂಗ್ ಮಾಡ್ತಿದ್ದೀವಿ, ಅದ್ರಲ್ಲಿ ನಿಮ್ಮ ಮಕ್ಕಳನ್ನ ಕುಣಿಸ್ತೀವಿ ಅಂತಲೂ ಹಲವರಿಂದ ಹಣ ಪಡೆದಿರೋ ಆರೋಪ ಈಗ ಕೇಳಿ ಬಂದಿದೆ. ಅಲ್ಲದೇ ಶಿವರಾಜ್ ಕುಮಾರ್ (Shivarajkumar), ವಿಜಯರಾಘವೇಂದ್ರ ಸೇರಿದಂತೆ ಹಲವು ಸಿನಿಮಾ ನಟರ ಸಿನಿಮಾಗಳಲ್ಲಿ ಚಾನ್ಸ್ ಕೊಡಿಸೋದಾಗಿಯೂ ಹಣ ಪಡೆದು ವಂಚಿಸಿದ್ದಾಳೆ ಅನ್ನೋ ಸಾಲು ಸಾಲು ಆರೋಪಗಳು ನಿಶಾ ವಿರುದ್ದ ಕೇಳಿ ಬರ್ತಿವೆ. ಇದನ್ನೂ ಓದಿ:‘ನಾಗರಹಾವು’ ಚಿತ್ರದ ನಂತರ ಮತ್ತೆ ಒಂದಾಗಲಿದ್ದಾರೆ ದಿಗಂತ್-ರಮ್ಯಾ
Advertisement
Advertisement
ಈವರೆಗೆ ಆನ್ಲೈನ್, ವಾಟ್ಸಪ್ ಹಾಗೂ ನೇರವಾಗಿ ಠಾಣೆಯಲ್ಲಿ ದಾಖಲಾದ ದೂರುಗಳು ಸೇರಿ 130ಕ್ಕೂ ಹೆಚ್ಚು ಜನರಿಂದ ಕಂಪ್ಲೇಟ್ಗಳು ಬಂದಿದ್ದು ಲಕ್ಷ-ಲಕ್ಷ ಹಣ ವಂಚಿಸಿದ್ದಾಳೆ ಅಂತಾ ಹೇಳಲಾಗ್ತಿದೆ. ವಂಚನೆ ಮಾಡಿರೋ ಆರೋಪದಡಿ ಅರೆಸ್ಟ್ ಆಗಿದ್ದ ನಿಶಾಗೆ ನ್ಯಾಯಾಂಗ ಬಂಧನಕ್ಕೆ ನ್ಯಾಯಾಲಯ ಆದೇಶ ನೀಡಿತ್ತು. ಪರಪ್ಪನ ಅಗ್ರಹಾರ ಜೈಲಿನ ಮಹಿಳಾ ಅಡ್ಮಿಷನ್ ಬ್ಯಾರಕ್ ನಲ್ಲಿ ಇರಿಸಲಾಗಿತ್ತು.
Advertisement
Advertisement
ನಿಶಾ ಜೈಲಿನಲ್ಲಿದ್ದಾಗಲೂ ಆಕೆ ಮೇಲಿನ ಆರೋಪಗಳು ಹೆಚ್ಚಾಗುತ್ತಲೇ ಇವೆ. ಇನ್ನೂ ಬಹಳ ಮಂದಿ ದೂರು ನೀಡೋಕೆ ಬರ್ತಿದ್ದಾರೆ. ಈ ನಡುವೆ ಆಕೆಯ ಟೀಂ ಇನ್ಸ್ಟಾಗ್ರಾಮ್ ನಲ್ಲಿ ಎಲ್ಲದಕ್ಕೂ ಉತ್ತರ ಕೊಡ್ತೀವಿ, ಏನೂ ಆಗಿಲ್ಲ. ಹೊಸದಾಗಿ ರಿಜಿಸ್ಟ್ರೇಷನ್ ಮಾಡಿಕೊಳ್ಳೋರು ಮಾಡಿಕೊಳ್ಳಿ ಅಂತಾ ಮತ್ತೆ ಪೋಸ್ಟ್ ಹಂಚಿಕೊಂಡು ಅಚ್ಚರಿ ಮೂಡಿಸಿದ್ದರು.
Web Stories