ಬೆಂಗಳೂರು: ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ವಂಚಿಸಿದ ಪ್ರಕರಣದ ಎ-5 ಆರೋಪಿ ಚನ್ನ ನಾಯ್ಕ್‌ನ (Channa Nayak) ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ (Bengaluru) ಬಂಧಿಸಿದ್ದಾರೆ.
ವಂಚನೆ ಪ್ರಕರಣದಲ್ಲಿ ವಿಶ್ವನಾಥ್ ಜೀ ಪಾತ್ರ ನಿರ್ವಹಿಸಿದ್ದ ಚನ್ನ ನಾಯ್ಕ್‌ನನ್ನ ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ಚೈತ್ರಾ ಕುಂದಾಪುರ ಮತ್ತು ತಂಡವನ್ನ ಸಿಸಿಬಿ ಪೊಲೀಸರು (CCB Police) ಬಂಧಿಸಿದ್ದು, 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕೋರ್ಟ್ ಒಪ್ಪಿಸಿದೆ. ಈ ಬೆನ್ನಲ್ಲೇ 5ನೇ ಆರೋಪಿಯನ್ನ ಬಂಧಿಸಲಾಗಿದೆ. ಇದನ್ನೂ ಓದಿ: ಎಂಎಲ್‌ಎ ಟಿಕೆಟ್‌ಗಾಗಿ ಬರೋಬ್ಬರಿ 5 ಕೋಟಿ ಡೀಲ್ – ಉದ್ಯಮಿಗೆ ಚೈತ್ರಾ ಮೋಸ ಮಾಡಿದ್ದು ಹೇಗೆ? ಪೂರ್ಣ ಕಥೆ ಓದಿ
Advertisement
Advertisement
ಬಂಧನಕ್ಕೂ ಮುನ್ನ ʻಪಬ್ಲಿಕ್ ಟಿವಿʼಯೊಂದಿಗೆ ಮಾತನಾಡಿದ ಚನ್ನ ನಾಯ್ಕ್, ʻಟಿಕೆಟ್ ಬಗ್ಗೆ ಮಾತನಾಡ್ತಿನಿʼ ಇದೊಂದು ಡೈಲಾಗ್‌ಗೆ ನನಗೆ ಹಣ ನೀಡಿದ್ರು. ಎಲ್ಲದಕ್ಕೂ ಜೀ.. ಜೀ… ಅನ್ನೋ ಪದ ಬಳಕೆ ಮಾಡೋದಕ್ಕೆ ಹೇಳಿದ್ರು. ಯಾವ ಲುಕ್‌ನಲ್ಲಿ ಬರಬೇಕು ಅನ್ನೋ ಬಗ್ಗೆಯೂ ನನಗೆ ತರಬೇತಿ ನೀಡಿದ್ರು. ನನಗೂ ಚೈತ್ರಾಗೂ ಪರಿಚಯ ಇಲ್ಲ, ಸಂಬಂಧವೂ ಇಲ್ಲ. ನಾನೇ ಸಿಸಿಬಿ ಪೊಲೀಸರಿಗೆ ಫೋನ್ ಮಾಡ್ತಿನಿ ಎಂದು ಹೇಳಿದ್ದ. ಇದನ್ನೂ ಓದಿ: ನಟಿ ವಿಜಯಲಕ್ಷ್ಮಿ ಗರ್ಭಪಾತ ಆರೋಪ : ವಿಚಾರಣೆಗೆ ಇಂದು ರಾಜಕಾರಣಿ ಸೀಮನ್ ಹಾಜರಿ?
Advertisement
Advertisement
ಚೈತ್ರಾ ಕುಂದಾಪುರ ಗೋವಿಂದ ಬಾಬು ಪೂಜಾರಿ ಎಂಬ ಉದ್ಯಮಿಗೆ ಟಿಕೆಟ್ ಕೊಡಿಸುವುದಾಗಿ ಹೇಳಿ ಮೊದಲಿಗೆ 50 ಲಕ್ಷ ರೂ. ಅಡ್ವಾನ್ಸ್ ಕೊಡಬೇಕು ಎಂದು ಹೇಳಿದ್ದಳು. ನಂತರ ನಾಯ್ಕ್ ಎನ್ನುವವನ ಮೂಲಕ 3 ಕೋಟಿ ರೂ. ತೆಗೆದುಕೊಳ್ಳುವುದು ಎಂಬುದು ಆಕೆಯ ಅಸಲಿ ಪ್ಲಾನ್ ಆಗಿತ್ತು. ಆದರೆ ಯಾವಾಗ ಪೂಜಾರಿ 50 ಲಕ್ಷ ರೂ. ಕೇಳಿದ ಕೂಡಲೇ ಕೊಟ್ಟನೋ ಆಗಲೇ ಮತ್ತೆ ಇನ್ನೊಂದು ಕತೆ ಶುರು ಮಾಡಿದ್ದಳು. ಇಷ್ಟು ಸುಲಭವಾಗಿ ಹಣ ಸಿಕ್ಕಿದರೇ ಜಾಸ್ತಿ ಹಣ ಹೊಡೆಯೋಣ ಎಂದು ಚೈತ್ರಾ ಪ್ಲಾನ್ ಮಾಡಿದ್ದಳು ಅನ್ನೋ ಬಗ್ಗೆ ತನಿಖೆಯಲ್ಲಿ ಗೊತ್ತಾಗಿದೆ.
Web Stories