– ಸೋಮವಾರ ವಿಚಾರಣೆಗೆ ಎಲ್ಲಾ ಆರೋಪಿಗಳು ಹಾಜರಾಗಬೇಕು, ಗೈರಾದ್ರೆ ಅವತ್ತೇ ಬಂಧನಕ್ಕೆ ಆದೇಶ: ಕೋರ್ಟ್ ಎಚ್ಚರಿಕೆ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ.3ಕ್ಕೆ ಚಾರ್ಜ್‌ಫ್ರೇಮ್ ನಿಗದಿ ಮಾಡಲಾಗಿದೆ ಎಂದು ಸೆಷನ್ಸ್ ಕೋರ್ಟ್ ಹೇಳಿದೆ.
ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಿದ್ದ ದರ್ಶನ್ (Darshan), ಪವಿತ್ರಾ ಗೌಡ ಸೇರಿದಂತೆ ಆರೋಪಿಗಳಿಗೆ ದೋಷಾರೋಪ ವಿಚಾರಣೆ ನಿಗದಿ ಬಗ್ಗೆ ಕೋರ್ಟ್ ಮಾಹಿತಿ ನೀಡಿದೆ. ಸೋಮವಾರ ಎಲ್ಲಾ ಆರೋಪಿಗಳು ಹಾಜರಿರಬೇಕು. ಗೈರಾದವರ ಬಂಧನಕ್ಕೆ ಕೋರ್ಟ್ ಸೂಚನೆ ನೀಡಿದೆ. ಇದನ್ನೂ ಓದಿ: ನಟ ದರ್ಶನ್ ಪುತ್ರ ವಿನೀಶ್‌ಗೆ ಬರ್ತ್‌ಡೇ ಸಂಭ್ರಮ; ವಿಜಯಲಕ್ಷ್ಮಿ ಪೋಸ್ಟ್

ಕೊಲೆ ಪ್ರಕರಣ ಸಂಬಂಧ ಆರೋಪಿಗಳು ವಿಚಾರಣೆಗೆ ಹಾಜರಿದ್ದರು. ‘ನಾವು ಮಾತನಾಡೋದು ಕೇಳಿಸ್ತಾ ಇದ್ಯಾ’ ಎಂದು ನ್ಯಾಯಾಧೀಶರು ಕೇಳಿದರು. ಕೇಳುತ್ತಾ ಇದೆ ಅಂತ ಆರೋಪಿಗಳು ಹೇಳಿದರು. ಚಾರ್ಜ್‌ಫ್ರೇಮ್ ಮಾಡುತ್ತೀವಿ ಕೇಳ್ತಾ ಇದೆ ಅಲ್ವಾ ಎಂದು ನ್ಯಾಯಾಧೀಶರು ಕೇಳಿದರು. ಈ ವೇಳೆ ಆರೋಪಿಗಳ ಹೆಸರು ಕೂಗಿ ಹಾಜರಾತಿ ಪಡೆಯಲಾಯಿತು. 16 ಮತ್ತು 17ನೇ ಆರೋಪಿಗಳು ಗೈರಾಗಿದ್ದರು. ಕುಟುಂಬದಲ್ಲಿ ಸಮಸ್ಯೆ ಇದೆ. ಹೀಗಾಗಿ ಹಾಜರಾಗಿಲ್ಲ ಎಂದು ಕೋರ್ಟ್‌ಗೆ ತಿಳಿಸಲಾಯಿತು.
ಫಿಸಿಕಲ್ ಆಗಿ ಹಾಜರಾಗಲು ಅವಕಾಶ ಮಾಡಿಕೊಡಿ. ವಿಡಿಯೋ ಕಾನ್ಫರೆನ್ಸ್ ಮೂಲಕ ಸ್ಪಷ್ಟನೆ ಇರೋದಿಲ್ಲ ಎಂದು ದರ್ಶನ್ ಪರ ವಕೀಲ ಸುನಿಲ್ ಮನವಿ ಮಾಡಿಕೊಂಡರು. ಇದೇ ವೇಳೆ, ಆರೋಪಿಗಳ ಭೇಟಿ ಮಾಡಲು ವಕೀಲರಿಗೆ ಅವಕಾಶ ನೀಡಲು ಮನವಿ ಮಾಡಲಾಯಿತು. ನಾಳೆ ಜೈಲಿನಲ್ಲಿ ಆರೋಪಿಗಳ ಭೇಟಿಗೆ ನ್ಯಾಯಾಲಯ ಅವಕಾಶ ನೀಡಿತು. ಇದನ್ನೂ ಓದಿ: ಬೆನ್ನು ನೋವಿದ್ರೂ ನನ್ನನ್ನ ಎತ್ತಿಕೊಳ್ಳುವ ದೃಶ್ಯ ಮಾಡಲು ಒಪ್ಪಿಕೊಂಡಿದ್ರು – ರಚನಾ ರೈ
ನವೆಂಬರ್ 3ಕ್ಕೆ ಚಾರ್ಜ್‌ಫ್ರೇಮ್ ನಿಗದಿ ಮಾಡಿ ಸೋಮವಾರಕ್ಕೆ ವಿಚಾರಣೆ ಮುಂದೂಡಲಾಗಿದೆ. ಎಲ್ಲಾ ಆರೋಪಿಗಳು ಹಾಜರಾಗಬೇಕು. ಗೈರಾದ್ರೆ ಅವತ್ತೆ ಬಂಧನಕ್ಕೆ ಆದೇಶ ನೀಡುವುದಾಗಿ ಕೋರ್ಟ್ ಎಚ್ಚರಿಕೆ ನೀಡಿದೆ.
 


 
		 
		 
		 
		 
		
 
		 
		 
		 
		