ಚಿಕ್ಕಮಗಳೂರು: ನಕಲಿ ಖಾತೆ ಕ್ರಿಯೆಟ್ ಮಾಡಿ ಒಂದು ವರ್ಷದಿಂದ ಅಮೆಜಾನ್ ಕಂಪನಿಗೆ ಒಂದು ಕೋಟಿ, ಮೂವತ್ತು ಲಕ್ಷ ರೂ. ಹಣವನ್ನು ವಂಚಿಸಿದ್ದ ಆರೋಪಿಗಳನ್ನು ಚಿಕ್ಕಮಗಳೂರು ಪೊಲೀಸರು ಬಂಧಿಸಿದ್ದಾರೆ.
ದರ್ಶನ್, ಪುನೀತ್, ಸಚಿನ್ ಶೆಟ್ಟಿ ಹಾಗೂ ಅನಿಲ್ ಬಂಧಿತ ಆರೋಪಿಗಳು. ಸಾರ್ವಜನಿಕರು ಅಮೆಜಾನ್‍ನಲ್ಲಿ ಬುಕ್ ಮಾಡಿದ ವಸ್ತು ಏಕದಂತ ಕೊರಿಯರ್ ಸರ್ವೀಸ್ ಸೆಂಟರ್ ಗೆ ಬರುತ್ತಿತ್ತು. ಸರ್ವಿಸ್ ಸೆಂಟರ್ ನಿಂದ ಬಂದ ವಸ್ತುಗಳನ್ನು ಆರೋಪಿಗಳು ಡೆಲವರಿ ಮಾಡುತ್ತಿದ್ದರು.
Advertisement
Advertisement
ಹೇಗೆ ಮೋಸ ಮಾಡ್ತಿದ್ದರು?: ಗ್ರಾಹಕರ ಮೊಬೈಲ್‍ಗೆ ಡೆಲವರಿ ಸೆಕ್ಸಸ್ ಫುಲ್ ಅಂತ ಮೆಸೇಜ್ ಬರುತ್ತೆ. ಆದ್ರೆ, ಗ್ರಾಹಕರು ಪಾವತಿಸೋ ಹಣ ಮಾತ್ರ ಹೋಗೋದು ಇವರ ಅಕೌಂಟ್‍ಗೆ. ಈ ರೀತಿಯ ಮಾಸ್ಟರ್ ಮೈಂಡ್ ನಿಂದ ಒಂದು ವರ್ಷದಿಂದ ಅಮೇಜಾನ್ ಕಂಪನಿಗೆ ಒಂದು ಕೋಟಿ, ಮೂವತ್ತು ಲಕ್ಷ ರೂ. ಹಣವನ್ನು ಮೋಸ ಮಾಡಿದ್ದಾರೆ. ಹಣಕ್ಕೆ ಗ್ರಾಹಕರು ಡೆಬಿಟ್ ಕಾರ್ಡ್ ಬಳಸ್ತಾರೆ ಅಂತ ಗೊತ್ತಾದ್ರೆ ಸಾಕು ತಮ್ಮ ಟ್ಯಾಬ್ ನಲ್ಲಿ ಸ್ವೈಪ್ ಮಾಡಿ ಹಣವನ್ನ ಅಕೌಂಟ್‍ಗೆ ಜಮಾ ಮಾಡಿಕೊಳ್ಳುತ್ತಿದ್ದರು. ಇತ್ತ ಗ್ರಾಹಕರಿಗೂ ಡೆಲವರಿ ಮೆಸೇಜ್ ಬರುತ್ತೆ. ಅತ್ತ ಕಂಪನಿಗೂ ಮೆಸೇಜ್ ತಲುಪುತ್ತಿತ್ತು. ಇವರೇ ಅಮೆಜಾನ್‍ನಲ್ಲಿ ನಕಲಿ ಖಾತೆ ಕ್ರಿಯೇಟ್ ಮಾಡಿ ತಾವೇ ಆರ್ಡರ್ ಮಾಡಿ ಬಳಿಕ ಕ್ಯಾನ್ಸಲ್ ಮಾಡಿ ವಸ್ತುವನ್ನ ಬೇರೆಯವರಿಗೆ ಮಾಡುವ ಮೂಲಕ ಕಂಪನಿಗೆ ಟೋಪಿ ಹಾಕುತ್ತಿದ್ದರು.
Advertisement
Advertisement
ಸದ್ಯ ಬುಲೆಟ್, ಎರಡು ಪಲ್ಸರ್, ಒಂದು ಜಿಕ್ಸರ್ ಬೈಕ್ಗಳು ಸೇರಿದಂತೆ 6 ಲಕ್ಷದ 44 ಸಾವಿರ ನಗದು, 21 ಮೊಬೈಲ್ ಫೋನ್, ಲ್ಯಾಪ್ಟಾಪ್, 2 ಟ್ಯಾಬ್ಗಳು ಸೇರಿದಂತ್ತೆ ಲಕ್ಷಾಂತರ ರೂಪಾಯಿ ವಸ್ತುಗಳನ್ನ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ನಾಲ್ವರು ಆರೋಪಿಗಳು ಸೆರೆ ಸಿಕ್ಕಿದ್ದು, ಇಬ್ಬರು ತಲೆ ಮರೆಸಿಕೊಂಡಿದ್ದಾರೆ.
ಬೆಂಗಳೂರಿನ ಅಮೆಜಾನ್ ಕಂಪೆನಿಯ ಮ್ಯಾನೇಜರ್ ನವೀನ್ ಕುಮಾರ್ ಅವರಿಗೆ ಆಡಿಟಿಂಗ್ ವೇಳೆ ಈ ಮೋಸ ಗೊತ್ತಾಗಿದೆ. ಕೂಡಲೇ ಎಸ್ಪಿ ಅಣ್ಣಾಮಲೈಗೆ ತಿಳಿಸಿದ್ದಾರೆ. ಪ್ರಕರಣವನ್ನು ಕೈಗೆತ್ತಿಕೊಂಡು ಅಣ್ಣಾಮಲೈ ಆ್ಯಂಡ್ ಟೀಂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಪೊಲೀಸರು ಆರೋಪಿಗಳ ಬ್ಯಾಂಕ್ ಖಾತೆಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.