– ಶಂಕರ್ ಶರ್ಮಾ ಎಂದು ಹೆಸರು ಬದಲಿಸಿದ್ದ
ಆನೇಕಲ್: ನಗರದ ಹೊರವಲಯದ ಜಿಗಣಿಯಲ್ಲಿ (Jigani) ವಾಸವಿದ್ದ ನಾಲ್ವರು ವಿದೇಶಿ ಪ್ರಜೆಗಳು ಸೇರಿದಂತೆ ಓರ್ವ ಪಾಕಿಸ್ತಾನದ ಪ್ರಜೆಯನ್ನು (Pakistan Citizen) ಪೊಲೀಸರು ಬಂಧಿಸಿದ್ದಾರೆ.
Advertisement
ಶಂಕರ್ ಶರ್ಮಾ ಎಂದು ಹೆಸರು ಬದಲಿಸಿಕೊಂಡಿದ್ದ ರಶೀದ್ ಅಲಿ ಸಿದ್ಧಿಕಿ ಎಂಬ ಪಾಕಿಸ್ತಾನದ ಪ್ರಜೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಇದನ್ನೂ ಓದಿ: ನಮ್ಮ ಪಕ್ಷದಲ್ಲೂ ಷಡ್ಯಂತ್ರಗಳು ನಡೆಯುತ್ತವೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ: ಕೆಎನ್ ರಾಜಣ್ಣ
Advertisement
Advertisement
ಪಾಕಿಸ್ತಾನದಲ್ಲಿ ಭಿನ್ನಾಭಿಪ್ರಾಯ ಉಂಟಾದ ಪರಿಣಾಮ ಪಾಕಿಸ್ತಾನ ಬಿಟ್ಟು, ಬಾಂಗ್ಲಾದೇಶಕ್ಕೆ (Bangladesh) ಪರಾರಿಯಾಗಿ ಢಾಕಾದ ಯುವತಿಯನ್ನು ವಿವಾಹವಾಗಿದ್ದನು. ಬಳಿಕ ಅಲ್ಲಿಯೂ ಇರಲು ಸಾಧ್ಯವಾಗದೇ 2014ರಲ್ಲಿ ಪತ್ನಿ ಜೊತೆ ಅಕ್ರಮವಾಗಿ ದೆಹಲಿಗೆ ಬಂದಿದ್ದ. ಸ್ಥಳೀಯ ವ್ಯಕ್ತಿಯ ನೆರವಿನಿಂದ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದ. ಅಲ್ಲಿಂದ ನೇಪಾಳಕ್ಕೆ ತೆರಳಿದ್ದ. ಅಲ್ಲಿ ಮೆಹದಿ ಎಂಬ ಫೌಂಡೇಷನ್ ಸೇರಿಕೊಂಡಿದ್ದ. ಅಲ್ಲಿ ಎಮ್.ಎಫ್.ಐ ಧರ್ಮಗುರುಗಳ ಜೊತೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ. ಆ ವೇಳೆ ನೇಪಾಳದಿಂದ ಬೆಂಗಳೂರಿಗೆ ಹೋಗುವಂತೆ ಯೂನಸ್ ಅಲ್ಗೋರ್ ಎಂಬ ಧರ್ಮಗುರುಗಳು ಸೂಚನೆ ನೀಡಿದ್ದ.
Advertisement
ಸೂಚನೆಯಂತೆ ರಶೀದ್ ಅಲಿ ಸಿದ್ಧಿಕಿ 2018ರಲ್ಲಿ ಬೆಂಗಳೂರಿಗೆ ಬಂದಿದ್ದ ಬಳಿಕ ವಾಸಿಮ್ ಮತ್ತು ಅಲ್ತಾಫ್ ಪರಿಚಯವಾಗಿತ್ತು. ಅಲ್ತಾಫ್ ಫಂಡ್ ಸೇರಿ ಎಲ್ಲಾ ವ್ಯವಸ್ಥೆಯನ್ನು ನೋಡಿಕೊಂಡಿದ್ದನು. ಅದಾದ ಬಳಿಕ ವಾಸಿಮ್ ಮತ್ತು ಅಲ್ತಾಫ್ ಇಬ್ಬರು ರಶೀದ್ ಅಲಿ ಸಿದ್ಧಿಕಿ ಜೊತೆ ಸೇರಿ ಸಂಘಟನೆಗೆ ಸೇರಿಕೊಂಡಿದ್ದರು. ಇವರ ಸಹಕಾರ ಪಡೆದು ಜಿಗಣಿಗೆ ಶಿಫ್ಟ್ ಆಗಿದ್ದ. ಜಿಗಣಿಯಲ್ಲಿ ಮನೆಮಾಡಿಕೊಂಡು ಬಿರಿಯಾನಿ ತಯಾರು ಮಾಡಿ ಆನ್ಲೈನ್ ಪುಡ್ ಡೆಲಿವರಿ ವ್ಯಾಪಾರ ಮಾಡುತ್ತಿದ್ದ.ಇದನ್ನೂ ಓದಿ: Kolara | ತಾಂತ್ರಿಕ ದೋಷದಿಂದ ತುರ್ತು ಭೂಸ್ಪರ್ಶ ಮಾಡಿದ್ದ ವಾಯುಪಡೆ ಹೆಲಿಕಾಪ್ಟರ್ ಸುರಕ್ಷಿತವಾಗಿ ಟೇಕಾಫ್
ಜಿಗಣಿಯಲ್ಲಿ ಅಪಾರ್ಟ್ಮೆಂಟ್‌ನಲ್ಲಿ (Jigani Apartment) ಬಾಂಗ್ಲಾ ಪತ್ನಿ ಸೇರಿದಂತೆ ಇಬ್ಬರು ಮಕ್ಕಳ ಜೊತೆ ಕುಟುಂಬ ಸಮೇತ ವಾಸವಿದ್ದ. ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಸಂಗ್ರಹಿಸಿ, ರಾತ್ರಿ ಕಾರ್ಯಾಚರಣೆ ನಡೆಸಿ 4 ಆರೋಪಿಗಳನ್ನು ಬಂಧಿಸಿದ್ದಾರೆ. ಜೊತೆಗೆ ಪೊಲೀಸರು ಆತನ ಮನೆಯಲ್ಲಿದ್ದ ಲ್ಯಾಪ್ ಟಾಪ್, ಟಿವಿ, ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಲ್ಯಾಪ್‌ಟಾಪ್‌ನಲ್ಲಿನ ಡೇಟಾ ಪರಿಶೀಲನೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಉಳಿದಂತೆ ಮನೆಯಲ್ಲಿ ಇನ್ನುಳಿದ ವಸ್ತುಗಳನ್ನು ಪರಿಶೀಲಿಸುತ್ತಿದ್ದಾರೆ.
ಶಂಕರ್ ಶರ್ಮಾ ಹೆಸರಿನಲ್ಲಿ ರಶೀದ್ ಅಲಿ ಸಿದ್ಧಿಕಿಯ ದಾಖಲೆಗಳು ಪತ್ತೆಯಾಗಿದ್ದು, ಭಾರತೀಯ ಪಾಸ್‌ಪೋರ್ಟ್, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪಾಕ್ ಪ್ರಜೆ ಅರೆಸ್ಟ್ ಹಿನ್ನೆಲೆ ಬೆಂಗಳೂರು ಕೇಂದ್ರ ವಲಯ ಐಜಿಪಿ ಲಾಬೂರಾಮ್ (IGP Labhu Ram) ಹಾಗೂ ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್ಪಿ ಕೆಎಸ್ ನಾಗರಾಜ್ ಭೇಟಿ ನೀಡಿದ್ದಾರೆ. ಎಸ್ಪಿ ನಾಗರಾಜ್ ಜಿಗಣಿ ಇನ್ಸ್ಪೆಕ್ಟರ್ ಮಂಜುನಾಥ್ ಬಳಿ ಮಾಹಿತಿ ಸಂಗ್ರಹಿಸುತ್ತಿದ್ದು, ಡಿವೈಎಸ್ಪಿ ಮೋಹನ್ ಕುಮಾರ್ ಠಾಣೆಯಲ್ಲಿ ಮೊಕ್ಕಾಂ ಹೂಡಿದ್ದಾರೆ.ಇದನ್ನೂ ಓದಿ: ಕುಂಟು ನೆಪ ಹೇಳಿ ಕರ್ನಾಟಕ ಐಪಿಎಸ್ ಕೇಡರ್‌ನಲ್ಲಿ ವಿಲೀನ: ಚಂದ್ರಶೇಖರ್ ಅಮಾನತಿಗೆ ಜೆಡಿಎಸ್ ದೂರು
ಸದ್ಯ ಈ ಪ್ರಕರಣ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.