ಬನ್ನೇರುಘಟ್ಟ To ಜಪಾನ್ – 4 ಆನೆಗಳ ಯಶಸ್ವಿ ಏರ್‌ಲಿಫ್ಟ್!

Public TV
1 Min Read
Bannerghatta National Park Elephant

ಆನೆಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ 1 ಗಂಡು ಹಾಗೂ 3 ಆನೆಗಳನ್ನು ಯಶಸ್ವಿಯಾಗಿ ಜಪಾನ್‍ಗೆ ವಿಮಾನದ ಮೂಲಕ ರವಾನೆ ಮಾಡಲಾಗಿದೆ.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕತಾರ್ ಏರ್‌ವೇಸ್ ಸರಕು ಸಾಗಾಣಿಕೆ ವಿಮಾನದ ಮೂಲಕ ಜಪಾನ್‍ಗೆ ರವಾನೆ ಮಾಡಲಾಗಿದೆ.‌ ವಿಮಾನದಲ್ಲಿ ಕೇಜ್‌ಗಳಲ್ಲಿ ಆನೆಗಳನ್ನು ಇರಿಸಲಾಗಿತ್ತು. ಜಪಾನ್‍ನ ಓಸಾಕಾ ಕಾನ್ಲೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸರಕು ಸಾಗಾಣಿಕೆ ವಿಮಾನ ಲ್ಯಾಂಡ್ ಆಗಿದೆ. ಅಲ್ಲಿಂದ ಹಿಮೇಜಿ ಸೆಂಟ್ರಲ್ ಪಾರ್ಕ್‍ಗೆ ಆನೆಗಳನ್ನು ಟ್ರಕ್‌ ಮೂಲಕ ರವಾನೆ ಮಾಡಲಾಗಿದೆ. ಇದನ್ನೂ ಓದಿ: ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಾಣಿಗಳ ವಿನಿಮಯ

ಬನ್ನೇರುಘಟ್ಟ ಜೈವಿಕ ಉದ್ಯಾನವನದ 1 ಗಂಡು ಮತ್ತು 3 ಹೆಣ್ಣು ಆನೆಗಳಾದ ಸುರೇಶ್ (8), ಗೌರಿ (9), ಶ್ರುತಿ (7) ತುಳಸಿ (5) ಜಪಾನ್‍ಗೆ ತೆರಳಿವೆ. ಆನೆಗಳ ಜೊತೆ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಿಬ್ಬಂದಿ ಸಹ ತೆರಳಿದ್ದಾರೆ. ಅಲ್ಲಿನ ಪಾರ್ಕ್ ಸಿಬ್ಬಂದಿಗೆ ಅವರು ತರಬೇತಿ ನೀಡಲಿದ್ದಾರೆ.‌

ಈ ಆನೆಗಳಿಗೆ ಪ್ರತಿಯಾಗಿ 4 ಚೀತಾ, 4 ಜಾಗ್ವಾರ್, 4 ಪೂಮಾ, 3 ಚಿಂಪಾಂಜಿ ಮತ್ತು 8 ಕ್ಯಾಪುಚಿನ್ ಕೋತಿಗಳನ್ನು ತರಲು ತೀರ್ಮಾನಿಸಲಾಗಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದ ಇತಿಹಾಸದಲ್ಲೇ ಅಂತಾರಾಷ್ಟ್ರೀಯ ಪ್ರಾಣಿಗಳ ವಿನಿಮಯ ಮೊದಲಾಗಿದೆ. ಇದನ್ನೂ ಓದಿ: ಪ್ರಾಣಿ ಪ್ರಿಯರಿಗೆ ಟಿಕೆಟ್ ದರ ಏರಿಕೆ ಶಾಕ್ – ಬನ್ನೇರುಘಟ್ಟ ಜೈವಿಕ ಉದ್ಯಾನ ಟಿಕೆಟ್ ದರ 20% ಏರಿಕೆ

Share This Article