ಧಾರವಾಡ: ಉತ್ತರ ಕರ್ನಾಟಕದಲ್ಲಿ ಇನ್ನೂ ನಾಲ್ಕು ದಿನಗಳ ಕಾಲ ಗುಡುಗು, ಗಾಳಿ ಸಹಿತ ಮಳೆ ಬಿಳಲಿದೆ ಎಂದು ಧಾರವಾಡ ಕೃಷಿ ವಿವಿ ಹವಾಮಾನ ಕೇಂದ್ರದ ಮುಖ್ಯಸ್ಥ ಡಾ.ಆರ್.ಎಚ್.ಪಾಟೀಲ್ ಹೇಳಿದ್ದಾರೆ.
Advertisement
ಉತ್ತರ ಕರ್ನಾಟಕ ಭಾಗದಲ್ಲಿ ಗುಡುಗು, ಸಿಡಿಲು, ರಭಸದ ಗಾಳಿ ಮಳೆ ಇರಲಿದ್ದು, ಮಳೆಗಿಂತ ಜಾಸ್ತಿ ಗಾಳಿ ಅನಾಹುತವೇ ಹೆಚ್ಚಾಗುವ ಸಾಧ್ಯತೆ ಇದೆ ಎಂದಿರುವ ಅವರು, ಸಂಜೆ ವೇಳೆಗೆ ಅಲ್ಲಲ್ಲಿ ಬಿರುಗಾಳಿ ಮಳೆ ಹೆಚ್ಚಾಗಲಿದೆ ಎಂದಿದ್ದಾರೆ. ಇದನ್ನೂ ಓದಿ: WHO ಡೇಟಾ, ಕಾಂಗ್ರೆಸ್ ಬೇಟಾ ಎರಡೂ ತಪ್ಪು: ಬಿಜೆಪಿ ಆರೋಪ
Advertisement
Advertisement
ಸೂಚನೆ: ಮರಗಳ ಕೆಳಗೆ ವಾಹನಗಳು ನಿಲ್ಲಿಸಬಾರದು, ಇಂತಹುದೇ ಸ್ಥಳದಲ್ಲಿ ಗಾಳಿ, ಸಿಡಿಲು ಬರುತ್ತೆ ಅಂತಾ ಹೇಳಲಾಗದು ಎಂದಿರುವ ಪಾಟೀಲ್, ಸುಂಟರಗಾಳಿ, ಗುಡುಗು, ಸಿಡಿಲು ಪ್ರಾದೇಶಿಕವಾಗಿ ಬಹಳ ಬರಲಿವೆ. ಮುಂದಿನ ನಾಲ್ಕೈದು ದಿನ ಹೆಚ್ಚಿನ ಅನಾಹುತಗಳ ಸಾಧ್ಯತೆ ಇದೆ. ಮರಗಳ ಕೆಳಗೆ ಜನ ನಿಲ್ಲುವುದು, ವಾಹನ ನಿಲ್ಲಿಸುವುದು ಬೇಡ. ಈ ಕುರಿತು ಜನ ಮುಂಜಾಗ್ರತೆ ವಹಿಸಬೇಕು ಎಂದು ಹೇಳಿದ್ದಾರೆ.