– 4.70 ಲಕ್ಷ ಹಣ, 300 ಗ್ರಾಂ ಚಿನ್ನ ದೋಚಿ ಪರಾರಿ
ಕೋಲಾರ: ಪರಿಚಯಸ್ಥರ ಸೋಗಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಒಂಟಿ ಮನೆಯಲ್ಲಿ ಕಳ್ಳತನ (Theft) ಮಾಡಿರುವ ಘಟನೆ ಕೋಲಾರ (Kolar) ಜಿಲ್ಲೆ ಮುಳಬಾಗಿಲು (Mulabagilu) ತಾಲೂಕು ರಾಜೇಂದ್ರಹಳ್ಳಿ ಗ್ರಾಮದಲ್ಲಿ ನಡೆದಿದೆ.
ರಾಜೇಂದ್ರಹಳ್ಳಿ ಗ್ರಾಮದ ಹರೀಶ್ ಎಂಬವರ ಮನೆಯಲ್ಲಿ ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಪರಿಚಯಸ್ಥರಂತೆ ಹರೀಶಣ್ಣ ಎಂದು ಕರೆದಿದ್ದಾರೆ. ಬಂದು ಬಾಗಿಲು ತೆರೆಯುತ್ತಿದ್ದಂತೆ ಲಾಂಗು, ಮಚ್ಚು, ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿ ನಂತರ ಸೀರೆಯಿಂದ ಹರೀಶ್ ಅವರ ಕೈಕಾಲು ಕಟ್ಟಿಹಾಕಿ ಮನೆಯಲ್ಲಿರುವ ಹಣ ಒಡವೆಗಳನ್ನು ಕೊಡುವಂತೆ ಒತ್ತಾಯ ಮಾಡಿದ್ದಾರೆ. ಈ ವೇಳೆ ಕೊಡದೇ ಹೋದಾಗ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದನ್ನೂ ಓದಿ: Assam | 10 ತಿಂಗಳ ಮಗುವಿನಲ್ಲಿ HMPV ಪತ್ತೆ
ಈ ವೇಳೆ ಮನೆಯಲ್ಲಿದ್ದ ಹರೀಶ್ ಅವರ ತಾತ ನಾರಾಯಣಪ್ಪ ಹಣ ಒಡವೆ ಎಲ್ಲಾ ಕೊಡುವುದಾಗಿ ಹೇಳಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಮಹಿಳೆಯರು ಮಕ್ಕಳು, ವೃದ್ದರು ಎಲ್ಲರನ್ನು ಕಟ್ಟಿಹಾಕಿ, ಮನೆಯ ಬೀರು ಬೀಗ ಒಡೆದುಹಾಕಿ ಅದರಲ್ಲಿದ್ದ ಚಿನ್ನದ ಓಲೆ, ಉಂಗುರ, ಚಿನ್ನದ ಸರ ಸೇರಿ ಸುಮಾರು 300 ಗ್ರಾಂನಷ್ಟು ಒಡವೆಗಳು ಹಾಗೂ ಮನೆಯಲ್ಲಿದ್ದ ಸುಮಾರು 4.70 ಲಕ್ಷ ರೂ. ಹಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಮನೆಯ ಹೊರಗಿನಿಂದ ಬೀಗ ಹಾಕಿಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ಪಂಚಮಸಾಲಿ ಪೀಠಕ್ಕೆ ಬರಲು ಬಿಡೋದಿಲ್ಲ – ಸಮಾಜದ ಮುಖಂಡರ ಆಕ್ರೋಶ
ನಂತರ ಕಟ್ಟಿಹಾಕಿದ್ದ ಕಟ್ಟು ಬಿಡಿಸಿಕೊಂಡ ನಂತರ ಮನೆಯವರು ನಂಗಲಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ನಂಗಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈಗಾಗಲೇ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಿರುವ ಕೋಲಾರ ಎಸ್ಪಿ ನಿಖಿಲ್.ಬಿ. ಆರೋಪಿಗಳನ್ನು ಶೀಘ್ರವಾಗಿ ಬಂಧಿಸುವ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಅಪಹರಣಗಾರರ ಜೊತೆ ಮುಖಾಮುಖಿ; ಮೂವರು ಪೊಲೀಸರ ಮೇಲೆ ಹಲ್ಲೆ – ಆರೋಪಿಗಳಿಗೆ ಗುಂಡೇಟು
 


 
		 
		 
		 
		 
		
 
		 
		 
		 
		