ಅಹ್ಮದಾಬಾದ್: ನವೀಕರಿಸಬಹುದಾದ ಇಂಧನ (Renewable Energy) ಇಲಾಖೆಯಿಂದ 4ನೇ ಜಾಗತಿಕ ಮಟ್ಟದ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಭೆ ಮತ್ತು ಎಕ್ಸ್‌ಪೋ ಆಯೋಜಿಸಲಾಗಿದೆ. ಗುಜರಾತ್‌ನ (Gujarat) ಗಾಂಧಿನಗರದ (Gandhinagar) ಮಹಾತ್ಮ ಮಂದಿರದಲ್ಲಿ ಇಂದಿನಿಂದ (ಸೆ.16) ಮೂರು ದಿನಗಳ ಕಾಲ ಎಕ್ಸ್‌ಪೋ ನಡೆಯುತ್ತಿದ್ದು, ಇಂದು ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಎಕ್ಸ್‌ಪೋದಲ್ಲಿ ಕರ್ನಾಟಕದ ಇಂಧನ ಇಲಾಖೆಯೂ (KREDL) ಭಾಗಿಯಾಗಿದ್ದು, ವಿಶೇಷವಾದ ಪೆವಿಲಿಯನ್ ಅನ್ನು ನಿರ್ಮಿಸಿದೆ. ಕರ್ನಾಟಕ ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ನೇತೃತ್ವದಲ್ಲಿ ಹಾಕಲಾಗಿರುವ ಕರ್ನಾಟಕ ಪೆವಿಲಿಯನ್ ಉದ್ಯಮಿಗಳ ಗಮನ ಸೆಳೆಯುತ್ತಿದೆ. ಇದನ್ನೂ ಓದಿ: Fifth And Final Call | ಮಾತುಕತೆಗಾಗಿ ಪ್ರತಿಭಟನಾನಿರತ ವೈದ್ಯರಿಗೆ ಅಂತಿಮ ಆಹ್ವಾನ ಕೊಟ್ಟ ದೀದಿ
Advertisement
Advertisement
Advertisement
ಸೌರಶಕ್ತಿ ಸ್ಥಾಪಿತ ಸಾಮರ್ಥ್ಯ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ 2ನೇ ರಾಜ್ಯ, ಪವನಶಕ್ತಿ ಸ್ಥಾಪಿತ ಸಾಮರ್ಥ್ಯದಲ್ಲಿ 3ನೇ ರಾಜ್ಯ, ಜಲವಿದ್ಯುತ್ ಸ್ಥಾಪಿತ ಸಾಮರ್ಥ್ಯದಲ್ಲಿ 2ನೇ ರಾಜ್ಯ ಮತ್ತು ಪಾವಗಡ ಸೋಲಾರ್ ಪಾರ್ಕ್‌ಗೆ ದೇಶದ ಅತಿದೊಡ್ಡ ನವೀಕರಿಸಬಹುದಾದ ಇಂಧನ ಪಾರ್ಕ್ ಎಂಬ ನಾಲ್ಕು ಪ್ರಶಸ್ತಿಗಳನ್ನು ರಾಜ್ಯ ಇಂಧನ ಇಲಾಖೆಗೆ ಕೇಂದ್ರ ನವೀಕರಿಸಬಹುದಾದ ಇಂಧನ ಇಲಾಖೆ ನೀಡಿ ಗೌರವಿಸಿದೆ. ಇದನ್ನೂ ಓದಿ: ಬ್ರೇಕ್ ಫೇಲ್ ಆಗಿ ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ – ಓರ್ವ ಸಾವು, ಮತ್ತೊಬ್ಬ ಗಂಭೀರ
Advertisement
ಈ ಬಗ್ಗೆ ಮಾತನಾಡಿದ ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೂಡಿಕೆಗೆ ಅವಕಾಶಗಳಿದೆ. ಅಂತಹ ಅಂಶಗಳನ್ನಿಟ್ಟುಕೊಂಡು ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಲು ಪೆವಿಲಿಯನ್ ಹಾಕಿದ್ದು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಹೂಡಿಕೆದಾರರ ಆಕರ್ಷಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು. ಇದನ್ನೂ ಓದಿ: ರಾಹುಲ್ ಗಾಂಧಿ ನಾಲಿಗೆಯನ್ನು ಕತ್ತರಿಸಿದವ್ರಿಗೆ 11 ಲಕ್ಷ ಬಹುಮಾನ ಘೋಷಿಸಿದ ಶಿವಸೇನಾ ಶಾಸಕ