ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಗಾಂಜಾ ಹಾಗೂ ಮಾದಕ ವಸ್ತುಗಳನ್ನು ಮಾರಾಟ ಮಾಡುತಿದ್ದ ಗ್ಯಾಂಗ್ ಅನ್ನು ಶಹರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಭಟ್ಕಳದ ಅಂಜುಮನ ಇಂಜಿನಿಯರ್ ಕಾಲೇಜಿನ ಸಮೀಪ ಇರುವ ಪುರಸಭೆ ವಾಟರ ಫಿಲ್ಟರ್ ಟ್ಯಾಂಕ್ ಹತ್ತಿರ ಅಕ್ರಮವಾಗಿ ಗಾಂಜಾ ಮಾರಾಟ ಮಾಡುವಾಗ ಮಾಲು ಸಮೇತ ಪೊಲೀಸರು ಆರೋಪಿಗಳನ್ನು ಹಿಡಿದಿದ್ದಾರೆ.
ಬಂಧಿತರು ಭಟ್ಕಳ ಮೂಲದ ಹಿಲಾಲ್ ಸ್ಟ್ರೀಟ್, ಮಗ್ಗುಂ ಕಾಲೋನಿಯ ಮೊಹಮ್ಮದ್ ಜೀಯಾಮ್ (19), ನಸರುದ್ದೀನ ಶೇಖ್ (25), ನೌಮಾನ (25), ಮೊಹಮ್ಮದ್ ಫರಾನ ಬಂಧಿತ ಆರೋಪಿಗಳಾಗಿದ್ದಾರೆ.
ಇವರಿಂದ ಕೃತ್ಯಕ್ಕೆ ಬಳಸಿದ ಹುಂಡಾಯ್ ಕಂಪನಿಯ ವೆನ್ಯೂ ಕಾರು, 15,000 ಮೌಲ್ಯದ 370 ಗ್ರಾಂ ಗಾಂಜಾ ಹಾಗೂ 3,000 ಮೌಲ್ಯದ 1.8 ಗ್ರಾಂ MDMA (Methaphetamine) ನಿಷೇಧಿತ ಮಾದಕ ಪದಾರ್ಥವನ್ನು ವಶಕ್ಕೆ ಪಡೆಯಲಾಗಿದೆ.