ಚಾಮರಾಜನಗರ: ರಾಜ್ಯದ ಕಾವೇರಿ ಕಣಿವೆಯಲ್ಲಿ (Kaveri River) ಭರ್ಜರಿ ಮಳೆಯಾಗಿರುವ (Rain) ಹಿನ್ನೆಲೆ ತಮಿಳುನಾಡಿಗೆ (Tamil Nadu) ನಿಗಧಿತ ಪ್ರಮಾಣಕ್ಕಿಂತ ನಾಲ್ಕೂವರೆ ಪಟ್ಟು ಅಧಿಕ ನೀರು ಬಿಡುಗಡೆಯಾಗಿದೆ. ಸುಪ್ರೀಂ ಕೋರ್ಟ್ (Supreme Court) ಆದೇಶದ ಪ್ರಕಾರ ಪ್ರಸಕ್ತ ಜಲವರ್ಷ ಜೂನ್‌ನಿಂದ ಸೆಪ್ಟೆಂಬರ್ ವರೆಗೆ 101 ಟಿಎಂಸಿ ನೀರು ಬಿಡುಗಡೆ ಮಾಡಬೇಕಿತ್ತು. ಆದರೆ ಈ ಅವಧಿಯಲ್ಲಿ 452.5 ಟಿಎಂಸಿ ನೀರು ಬಿಡುಗಡೆ ಮಾಡಲಾಗಿದೆ.
1974ರ ನಂತರ ಇದೇ ಮೊದಲ ಬಾರಿಗೆ ಅತ್ಯಧಿಕ ಪ್ರಮಾಣದಲ್ಲಿ ತಮಿಳುನಾಡಿಗೆ ನೀರನ್ನು ಬಿಡುಗಡೆ ಮಾಡಲಾಗಿದೆ. ಬಿಳಿಗುಂಡ್ಲು ಜಲಮಾಪನ ಕೇಂದ್ರದಲ್ಲಿ ನೀರಿನ ಪ್ರಮಾಣ ದಾಖಲಾಗಿದೆ. ಜೂನ್‌ನಲ್ಲಿ 16.46 ಟಿಎಂಸಿ, ಜುಲೈ ತಿಂಗಳಿನಲ್ಲಿ 106.93 ಟಿಎಂಸಿ, ಆಗಸ್ಟ್ 223.57 ಟಿಎಂಸಿ ಹಾಗೂ ಸೆಪ್ಟೆಂಬರ್‌ನಲ್ಲಿ 105.52 ಟಿಎಂಸಿ ನೀರು ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ: ಅಗ್ನಿಶಾಮಕ ದಳಕ್ಕೆ ಸೇರ್ಪಡೆಯಾಯ್ತು 90 ಮೀಟರ್ ಏರುವ ಏರಿಯಲ್ ಲ್ಯಾಡರ್ ವಾಹನ
ಕಳೆದ 4 ವರ್ಷಗಳಿಂದಲೂ ತಮಿಳುನಾಡಿಗೆ ನಿಗದಿಂತ ಅಧಿಕ ಪ್ರಮಾಣದ ನೀರು ಹರಿದು ಹೋಗಿದೆ. 2018-19 ರ ಜಲವರ್ಷದಲ್ಲಿ ನಿಗಧಿತ ಪ್ರಮಾಣಕ್ಕಿಂತ 228 ಟಿಎಂಸಿ, 2019-20 ರಲ್ಲಿ 97 ಟಿಎಂಸಿ, 2020-21 ರಲ್ಲಿ 34 ಟಿಎಂಸಿ, 2021-22 ರಲ್ಲಿ 103 ಟಿಎಂಸಿ ಅಧಿಕ ನೀರು ಬಿಡುಗಡೆ ಮಾಡಲಾಗಿದೆ. ಆದರೆ ಈ ವರ್ಷ ಜಲವಿವಾದಕ್ಕೆ ವರುಣ ಅವಕಾಶ ನೀಡಿಲ್ಲ. ಇದನ್ನೂ ಓದಿ: ಅಗ್ನಿ ದುರಂತಗಳಿಂದ ಜನರನ್ನು ರಕ್ಷಿಸುವ ಸಾಮರ್ಥ್ಯ ಹೆಚ್ಚಳ: ಬೊಮ್ಮಾಯಿ
ಮೆಟ್ಟೂರು ಜಲಾಶಯದಿಂದ ನದಿ ಮೂಲಕ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದ್ದು, ಹೆಚ್ಚುವರಿ ನೀರನ್ನು ಸಂಗ್ರಹಿಸಲು ಮೇಕೆದಾಟು ಯೋಜನೆ ಸಹಕಾರಿಯಾಗಿದೆ. ಮೇಕೆದಾಟು ಯೋಜನೆ ಜಾರಿಗೆ ಪೂರಕವಾದ ವಾತಾವರಣ ನಿರ್ಮಾಣವಾಗಿದೆ.
Live Tv