Dharwad

ಹುಬ್ಬಳ್ಳಿ ರೈಲಿನಲ್ಲಿ 15 ಕೆಜಿ ಹಸಿ ಗಾಂಜಾ ಪತ್ತೆ

Published

on

Share this

ಹುಬ್ಬಳ್ಳಿ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅಪರಿಚಿತ ಪ್ರಯಾಣಿಕ ಬಿಟ್ಟು ಹೋಗಿದ್ದ ಬ್ಯಾಗ್ ನಲ್ಲಿ 1.12 ಲಕ್ಷ ರೂ. ಮೌಲ್ಯದ 15 ಕೆ.ಜಿ ಗಾಂಜಾ ಪತ್ತೆಯಾಗಿದೆ.

 

ಶನಿವಾರ ಗುಂತಕಲ್ ರೈಲು ನಿಲ್ದಾಣದಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಅಮರಾವತಿ ಎಕ್ಸಪ್ರೆಸ್ ರೈಲಿನಲ್ಲಿ ಗಾಂಜಾ ಪತ್ತೆಯಾಗಿದೆ. ಅಪರಿಚಿತ ಪ್ರಯಾಣಿಕ ರೈಲಿನಲ್ಲಿಯೇ ಬ್ಯಾಗ್ ಬಿಟ್ಟು ಇಳಿದಿದ್ದರ ಬಗ್ಗೆ ಪ್ರಯಾಣಿಕರು ಸಂಶಯ ವ್ಯಕ್ತಪಡಿಸಿದ್ದು, ಈ ಹಿನ್ನೆಲೆ ತೀವ್ರ ಆತಂಕಕ್ಕೆ ಒಳಗಾಗಿದ್ದರು. ಈ ವೇಳೆ ಕರ್ತವ್ಯ ನಿರತ ಟಿಟಿಐ ಬ್ಯಾಗ್ ಮಾಲೀಕರು ಬರದಿದ್ದಕ್ಕೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:  ಚಾಕುವಿನಿಂದ ಎದೆಗೆ, ಹೊಟ್ಟೆಗೆ ಇರಿದು ವ್ಯಕ್ತಿಯ ಬರ್ಬರ ಹತ್ಯೆ

ತಕ್ಷಣ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಬಂದ ನಂತರ ಬ್ಯಾಗ್ ಅನ್ನು ಶ್ವಾನದಳ ಪರಿಶೀಲಿಸಿತು. ಬಳಿಕ ಪೊಲೀಸರು ಹಾಗೂ ರೈಲ್ವೆ ಸಿಬ್ಬಂದಿ ಎರಡು ಬ್ಯಾಗ್ ತೆರೆದಾಗ 8 ಬಂಡಲ್ ಹಸಿ ಗಾಂಜಾ ಪತ್ತೆಯಾಗಿದ್ದು, ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಇದನ್ನೂ ಓದಿ:  ನಿವಾಸದಲ್ಲಿದ್ದ ಮರಗಳಿಗೆ ಕೊಡಲಿ – ಮಂಡ್ಯ ಎಸ್‍ಪಿಯಿಂದ ಸರ್ವಾಧಿಕಾರಿ ಧೋರಣೆ

Click to comment

Leave a Reply

Your email address will not be published. Required fields are marked *

Advertisement
Advertisement