– ವೈದ್ಯರ ಸಲಹೆಯೇನು..?
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕೋವಿಡ್ ಪಾಸಿಟಿವ್ ಪ್ರಮಾಣ ನಿಯಂತ್ರಣಕ್ಕೆ ಬಂದಿದೆ. ಇದೀಗ ಕೋವಿಡ್ ನಿಯಂತ್ರಣಕ್ಕೆ ಬಂದಿರುವಾಗಲೇ ಸದಿಲ್ಲದೆ ಇಲಿ ಜ್ವರದ ಆತಂಕ ಜಿಲ್ಲೆಯಲ್ಲಿ ಎದುರಾಗಿದೆ.
ಹೌದು. ಕಳೆದ ಒಂದೂವರೆ ತಿಂಗಳಲ್ಲಿ ಬರೋಬ್ಬರಿ 39 ಇಲಿ ಜ್ವರದ ಪ್ರಕರಣಗಳು ಪತ್ತೆಯಾಗಿದೆ. ಮಹಿಳೆಯೊಬ್ಬರು ಇಲಿಜ್ವರದಿಂದ ಮೃತಪಟ್ಟಿದ್ದರು. ಜಿಲ್ಲಾಡಳಿತ ಆರೋಗ್ಯ ಇಲಾಖೆಯು ಈ ಬಗ್ಗೆ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ.
Advertisement
Advertisement
ಕೊಡಗು ಜಿಲ್ಲೆ ಪ್ರಾಕೃತಿಕ ವಿಕೋಪದಿಂದ ಹಿಡಿದು ಕೊರೊನಾ ವೈರಸ್‍ವರೆಗೂ ಜಿಲ್ಲೆಯ ಜನರು ಒಂದಲ್ಲ ಒಂದು ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಈ ನಡುವೆ ಇದೀಗ ಕೊಡಗಿನಲ್ಲಿ ಇಲಿ ಜ್ವರದ ಸಮಸ್ಯೆ ಹೆಚ್ಚು ಕಾಡುತ್ತಿದೆ. ಅದರಲ್ಲೂ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನಲ್ಲೇ ಹೆಚ್ಚು ಪ್ರಕರಣಗಳು ಪತ್ತೆಯಾಗಿರುವುದು ಆತಂಕದ ವಿಷಯವಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಜೊತೆ ಜಗಳಕ್ಕೆ ಹೋಗಲು ನನಗೆ ಬೇರೆ ಕೆಲಸ ಇಲ್ಲವೇ?: ಹೆಚ್‍ಡಿಕೆ
Advertisement
ಮಡಿಕೇರಿಯಲ್ಲಿ 21, ವಿರಾಜ ಪೇಟೆಯಲ್ಲಿ 9, ಸೋಮವಾರ ಪೇಟೆಯಲ್ಲಿ 9 ಪ್ರಕರಣಗಳು ಪತ್ತೆಯಾಗಿವೆ. ಮಡಿಕೇರಿ ತಾಲೂಕಿನ ಕರ್ಣಂಗೇರಿಯ ಚಂದ್ರಿಕಾ ಎನ್ನುವ 40 ವರ್ಷದ ಮಹಿಳೆ ಇಲಿಜ್ವರಕ್ಕೆ ಪ್ರಾಣ ಬಿಟ್ಟಿದ್ದಾರೆ. ಇದರಿಂದ ಜಿಲ್ಲೆಯ ಜನರು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಅಷ್ಟೇ ಅಲ್ಲದೇ ಇಲಿಜ್ವರಕ್ಕೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ನೀಡದೆ ಇರುವುದರಿಂದ ರೋಗಿಗಳು ಮಂಗಳೂರು, ಸುಳ್ಯ ಮೈಸೂರು ಜಿಲ್ಲೆಯ ಅಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
Advertisement
ಈ ಬಗ್ಗೆ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವನ್ನು ಕೇಳಿದ್ರೆ, ಇಲಿಜ್ವರದ ಮಾಹಿತಿ ಇದುವರೆಗೂ ಇಲ್ಲ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಮಡಿಕೇರಿಯಲ್ಲೇ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಇನ್ನೂ ಜಿಲ್ಲೆಯಲ್ಲಿ ಈಗಾಗಲೇ 39 ಇಲಿಜ್ವರದ ಪ್ರಕರಣಗಳು ಪತ್ತೆಯಾಗಿದೆ. ಆರೋಗ್ಯ ಇಲಾಖೆ ಹಾಗೂ ಆಶಾ ಕಾರ್ಯಕರ್ತೆಯರು ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಕಾರ್ಯ ಆರಂಭ ಮಾಡಿದ್ದಾರೆ.
ಇಲಿ ಜ್ವರ ಹೇಗೆ ಬರುತ್ತೆ?
ಅಷ್ಟಕ್ಕೂ ಇಲಿನಜ್ವರ ಬರೋದಾದ್ರು ಹೇಗೆ ಎಂದು ನೋಡಿದ್ರೆ ಮಳೆ ಸುರಿಯುತ್ತಿರುವುದರಿಂದ ಇಲಿಗಳು ಬಿಲದೊಳೊಗಿಂದ ಹೊರಬಂದು ಓಡಾಡುತ್ತವೆ. ಈ ವೇಳೆ ಅವುಗಳು ಭೂಮಿ ಮೇಲೆ ಮಾಡಿದ ಮೂತ್ರ ವಿಸರ್ಜನೆಯನ್ನು ತುಳಿದಲ್ಲಿ ಅದರಲ್ಲಿರುವ ಬ್ಯಾಕ್ಟೀರಿಯಾಗಳಿಂದ ಈ ಇಲಿ ಜ್ವರ ಬರುತ್ತದೆ. ಇಲಿ ಮೂತ್ರ ನೀರಿನಲ್ಲಿ ಬೆರೆತು ಅಂತಹ ನೀರಿನ ಸೇವನೆ ಆದಾಗಲೂ ಜ್ವರ ಬರಬಹುದು. ಇದಕ್ಕೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದಿದ್ದಲ್ಲಿ ದೇಹದಲ್ಲಿ ಬಹು ಅಂಗಾಗ ವೈಫಲ್ಯಗೊಂಡು ಮಾನವ ಸಾವನ್ನಪ್ಪುತ್ತಾನೆ. ಹೀಗಾಗಿ ಜನರು ಬರಿಗಾಲಿನಲ್ಲಿ ನಡೆದಾಡಬಾರದು. ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಕೃಷಿ ಕ್ಷೇತ್ರಕ್ಕೂ ಕಾಲಿಟ್ಟ ಡ್ರೋನ್ – ಕ್ರಿಮಿನಾಶಕ್ಕೆ ಡ್ರೋನ್ ಬಳಕೆ
ಕೊಡಗು ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರಕರಣಗಳು ಪತ್ತೆಯಾಗಿರುವ ಏರಿಯಾಗಳಿಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಏನೇ ಆಗಲಿ ಕೋವಿಡ್ ಕಡಿಮೆ ಆಗಿದೆ ಅನ್ನೋ ಹೊತ್ತಿನಲ್ಲಿ ಇಲಿಜ್ವರ ಪ್ರಕರಣಗಳು ಕೊಡಗಿನಲ್ಲಿ ಜಾಸ್ತಿ ಆಗುತ್ತಿರುವುದು ಜನರನ್ನು ಆತಂಕಕ್ಕೆ ದೂಡಿದೆ. ಈ ಹಿನ್ನೆಲೆ ಜಿಲ್ಲೆಯ ಜನರು ಜಾಗೃತಿಯಿಂದ ಇರಬೇಕು.