ಮೈಸೂರು: ಸಿದ್ದರಾಮಯ್ಯ ಒಳ್ಳೆಯ ಮುಖ್ಯಮಂತ್ರಿ ಆಗಿದ್ದು, ಇವತ್ತು ಅವರು ನಮ್ಮ ಕ್ಷೇತ್ರಕ್ಕೆ ಬಂದಿದ್ದರು. ನಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದೆ. ಆ ವೇಳೆ ನಾನು ಟೇಬಲ್ ಮೇಲೆ ಕೈ ಇಟ್ಟು ಮಾತನಾಡಿದ್ದೆ. ಆದ್ದರಿಂದ ಅವರಿಗೆ ಕೋಪ ಬಂದಿದೆ ಅಷ್ಟೇ ಎಂದು ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಜಮಲಾರ್ ತಿಳಿಸಿದ್ದಾರೆ.
ಮಾಜಿ ಸಿಎಂ ಎದುರು ನಾನು ಆ ರೀತಿ ಕೋಪದಿಂದ ಮಾತನಾಡಬಾರದಿತ್ತು. ಪರಿಣಾಮ ಅವರಿಗೆ ಸಾರ್ವಜನಿಕ ಸಭೆಯಲ್ಲಿ ಅಸಮಾಧಾನ ಆಗಿದೆ. ಅಲ್ಲದೇ ಕ್ಷೇತ್ರದ ಶಾಸಕರು ಬರುತ್ತಿದ್ದ ಬಗ್ಗೆ ನಮಗೆ ಮಾಹಿತಿ ಇರುತ್ತಿರಲಿಲ್ಲ. ಆದ್ದರಿಂದ ಅದನ್ನು ಕೇಳಿದೆ. ನನಗೆ ಪಕ್ಷದ ಕಾರ್ಯಕರ್ತರು ಮಾಹಿತಿ ನೀಡದೇ ಇದ್ದದ್ದು ಸಮಸ್ಯೆ ಕಾರಣವಾಗಿದೆ. ಇದಕ್ಕಿಂತ ಹೆಚ್ಚಿನ ಸಮಸ್ಯೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನು ಓದಿ: ಸಾರ್ವಜನಿಕ ಸಭೆಯಲ್ಲಿ ಸಿದ್ದರಾಮಯ್ಯ ರೌದ್ರಾವತಾರ – ಮಹಿಳೆಯ ಮೈಕ್ ಕಿತ್ತುಕೊಂಡು ಕೋಪ ಪ್ರದರ್ಶನ
Advertisement
Advertisement
ನಮ್ಮ ಊರಿನ ಹಲವರಿಗೆ ಶಾಸಕರು ಬರುವ ಮಾಹಿತಿ ಲಭಿಸುತ್ತಿರಲಿಲ್ಲ. ಶಾಸಕರ ಕೈ ಕೆಳಗೆ ಕಾರ್ಯನಿರ್ವಹಿಸುತ್ತಿರುವ ಜನರು ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡದೇ ಈ ಗೊಂದಲ ನಿರ್ಮಾಣವಾಗಿದೆ. ಆದರೆ ಮಾಜಿ ಸಿಎಂ ಎದುರು ನಾನು ಏರು ಧ್ವನಿಯಲ್ಲಿ ಮಾತನಾಡಿದೆ ಇದು ಅವರ ಅಸಮಾಧಾನಗೊಂಡರು ಅಷ್ಟೇ ಎಂದು ತಿಳಿಸಿದರು. ಇದನ್ನು ಓದಿ: ಸಲುಗೆಯಿಂದ ತಾಳ್ಮೆ ಕಳೆದುಕೊಂಡಿದ್ದಾರೆ- ಅಪ್ಪನ ಪರವಾಗಿ ಯತೀಂದ್ರ ಕ್ಷಮೆಯಾಚನೆ
Advertisement
ತಮ್ಮ ಕ್ಷೇತ್ರದಲ್ಲಿ ತಾಲೂಕು ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ, ಅಲ್ಲದೇ ಶಾಸಕರು ಕೂಡ ಚುನಾವಣೆಯ ವೇಳೆ ಭೇಟಿ ನೀಡಿದ ಬಳಿಕ ಮತ್ತೆ ಕೇತ್ರದಲ್ಲಿ ಬಂದಿಲ್ಲ ಎಂದು ಮಹಿಳೆ ಸಭೆಯಲ್ಲಿ ಆರೋಪಿಸಿದ್ದರು. ಈ ವೇಳೆ ಗರಂ ಆದ ಸಿದ್ದರಾಮಯ್ಯ ಅವರು ಮಹಿಳೆಯಿಂದ ಮೈಕ್ ಕಿತ್ತುಕೊಂಡು ಮಾತನಾಡಿದ್ದರು. ಅಲ್ಲದೇ ನಮಗೆ ಮಾಹಿತಿ ನೀಡದೇ ಸಾರ್ವಜನಿಕವಾಗಿ ಈ ರೀತಿ ಮಾತನಾಡುವುದು ಸರಿ ಅಲ್ಲ ಎಂದು ಸಿದ್ದರಾಮಯ್ಯ ಅವರು ರೌದ್ರವತಾರ ತೋರಿದ್ದರು.
Advertisement
https://www.youtube.com/watch?v=SYhHfLYL3y8
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv