ಡೆಹ್ರಾಡೂನ್: ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ (Harish Rawath) ಇದ್ದ ಕಾರು ಅಪಘಾತಕ್ಕೀಡಾದ ಘಟನೆ ನಡೆದಿದೆ.
ರಾವತ್ ಅವರು ಹಲದ್‍ವಾನಿಯಿಂದ ಕಾಶಿಪುರದಲ್ಲಿರುವ ಉದ್ಧಮ್ ಸಿಂಗ್ ನಗರಕ್ಕೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿಯಾಗಿದೆ. ಘಟನೆಯಿಂದ ಯಾವುದೇ ಅಪಾಯವಾಗಿಲ್ಲ ಎನ್ನಲಾಗಿದೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ರಾವತ್, ಘಟನೆಯಲ್ಲಿ ಭಾರೀ ಅಪಾಯದಿಂದ ಪಾರಾಗಿದ್ದೇನೆ. ಅಪಘಾತದಿಂದ ಸ್ವಲ್ಪ ವಿಚಲಿತನಾದೆ. ಹೀಗಾಗಿ ಅವಘಡ ನಡೆದ ಕೂಡಲೇ ವೈದ್ಯರಿಂದ ಪರೀಕ್ಷಿಸಲ್ಪಟ್ಟಿದೇನೆ ಎಂದರು. ಇದನ್ನೂ ಓದಿ: ಅಕ್ರಮ ಮದರಸಾಗಳಿಗೆ ದಿನಕ್ಕೆ 10 ಸಾವಿರ ದಂಡ: ಯೋಗಿ ಸರ್ಕಾರದಿಂದ ನೋಟಿಸ್
ಪರೀಕ್ಷೆಯ ಬಳಿಕ, ಯಾವುದೇ ತೊಂದರೆ ಇಲ್ಲ ಎಂದು ಹೇಳಿ ವೈದ್ಯರು ಡಿಸ್ಚಾರ್ಜ್ ಮಾಡಿದ್ದಾರೆ. ಕೆಲವು ಸ್ನೇಹಿತರು ಘಟನೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಕೆಲವರಲ್ಲಿ ಕಳವಳವನ್ನು ಉಂಟುಮಾಡಬಹುದು. ಆತಂಕ ಪಡುವಂಥದ್ದೇನೂ ಇಲ್ಲ. ನಾನು ಮತ್ತು ನನ್ನ ಸಹೋದ್ಯೋಗಿಗಳೂ ಚೆನ್ನಾಗಿದ್ದೇವೆ ಎಂದು ಮಾಹಿತಿ ನೀಡಿದರು.
ವರದಿಗಳ ಪ್ರಕಾರ, ಅಪಘಾತದಿಂದಾಗಿ ರಾವತ್ ಎದೆಗೆ ಗಾಯಗಳಾಗಿವೆ. ಅಲ್ಲದೆ ರಾವತ್ ಜೊತೆ ಪ್ರಯಾಣಿಸುತ್ತಿದ್ದ ಅವರ ಪರ್ಸನಲ್ ಭದ್ರತಾ ಅಧಿಕಾರಿ ಮತ್ತು ಇತರ ಸಹಚರರಿಗೂ ಗಾಯಗಳಾಗಿವೆ ಎನ್ನಲಾಗಿತ್ತು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]