ಕೀವ್: ಉಕ್ರೇನ್‍ನ ಮಾಜಿ ಸಂಸದನ ಪತ್ನಿ 28 ಮಿಲಿಯನ್ ಡಾಲರ್(2.8 ಕೋಟಿ), 1.3 ಮಿಲಿಯನ್‍ಯುರೋ ನಗದು ಹಣದೊಂದಿಗೆ ದೇಶದಿಂದ ಪಲಾಯನ ಮಾಡುವಾಗ ಸಿಕ್ಕಿ ಬಿದ್ದಿದ್ದಾರೆ.
ಉಕ್ರೇನ್‍ನ ಮಾಜಿ ಸಂಸದ ಕೊಟ್ವಿಟ್ಸ್ಕಿ ಪತ್ನಿ ಸೂಟ್‍ಕೇಸ್‍ಗಳಲ್ಲಿ 28 ಮಿಲಿಯನ್ ಡಾಲರ್ ಮತ್ತು 1.3 ಮಿಲಿಯನ್ ಯುರೋಗಳಷ್ಟು ಹಣವನ್ನು ಸಾಗಿಸುವ ಪ್ರಯತ್ನವನ್ನು ಮಾಡಿದ್ದಾರೆ.
ಯುದ್ಧಪೀಡಿತ ಉಕ್ರೇನ್‍ನಿಂದ ತಪ್ಪಿಸಿಕೊಳ್ಳಲು ಮತ್ತು ಜಕರ್‍ಪಾಟಿಯಾ ಪ್ರಾಂತ್ಯದ ಮೂಲಕ ಹಂಗೇರಿಯನ್ನು ಪ್ರವೇಶಿಸಲು ಪ್ರಯತ್ನಿಸಿದ್ದಾರೆ. ಆದರೆ ಹಂಗೇರಿಯನ್ ಗಡಿಯಲ್ಲಿ ತಪಾಸಣೆ ಮಾಡುವಾಗ ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ: 7 ನಂಬರ್ ಜೆರ್ಸಿ ಹಿಂದಿನ ಕಹಾನಿ ಬಿಚ್ಚಿಟ್ಟ ಧೋನಿ
ಫೆಬ್ರವರಿ 24 ರಂದು ರಷ್ಯಾ ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿತು. ಯುದ್ಧದ ಪರಿಣಾಮವಾಗಿ, ಉಕ್ರೇನ್‍ನಾದ್ಯಂತ 1 ಕೋಟಿಗೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. ಇದರಲ್ಲಿ ಸುಮಾರು 30 ಲಕ್ಷ ಜನರು ಪೋಲೆಂಡ್, ಸ್ಲೋವಾಕಿಯಾ, ರೊಮೇನಿಯಾ ಮತ್ತು ಹಂಗೇರಿಯಂತಹ ನೆರೆಯ ದೇಶಗಳಿಗೆ ಪಲಾಯನ ಮಾಡಿದ್ದಾರೆ. ಉಕ್ರೇನ್ ಯುದ್ಧದಲ್ಲಿ ಮಕ್ಕಳು ಸೇರಿದಂತೆ ನೂರಾರು ನಾಗರಿಕರು ಸಾವನ್ನಪ್ಪಿದ್ದಾರೆ. ಇದುವರೆಗೆ 14,000ಕ್ಕೂ ಹೆಚ್ಚು ರಷ್ಯಾದ ಸೈನಿಕರು ಹತರಾಗಿದ್ದಾರೆ ಎಂದು ಉಕ್ರೇನ್ ಹೇಳಿಕೊಂಡಿದೆ.