ಕೋಲಾರ: ಕಾಂಗ್ರೆಸ್ ಏನ್ ನಮ್ಮಪ್ಪಂದಾ, ಅವರು ಸೆಕ್ಯೂಲರ್ ಆಗಿ ಕೆಲಸ ಮಾಡಬೇಕು ಎಂದುಕೊಂಡಿದ್ದಾರೆ. ಕಾಂಗ್ರೆಸ್ ಒಂದು ದೊಡ್ಡ ಸಂಸ್ಥೆ, ಅದನ್ನ ಸೇರಬೇಕು ಎಂದು ತೀರ್ಮಾನ ಮಾಡಿದ್ರೆ ಸೇರ್ತಾರೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ಕೋಲಾರದ ಅಮ್ಮಾನಿ ಕೆರೆ ತುಂಬಿ ಕೋಡಿ ಹರಿದ ಹಿನ್ನೆಲೆ ಇಂದು ಕಾಂಗ್ರೆಸ್ ಮುಖಂಡರೊಂದಿಗೆ ಬಾಗಿನ ಅರ್ಪಿಸುವ ಮುನ್ನ ಕೋಲಾರ ಶಾಸಕ ಶ್ರೀನಿವಾಸಗೌಡ ಅವರ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಶ್ರೀನಿವಾಸಗೌಡ ಅವರು ಗ್ರಾಮ ಪಂಚಾಯ್ತಿಯಿಂದ ಬಂದವರು, ಜನರ ಮಧ್ಯೆ ಆಯ್ಕೆಯಾಗಿ ಬಂದವರು. ಅವರೇನು ಆಕಾಶದಿಂದ ಉದುರಿ ಬಂದವರಲ್ಲ, ಗಾಳಿಯಲ್ಲಿ ತೇಲಿ ಬಂದವರಲ್ಲ ಎಂದು ತಿಳಿಸಿದರು.
ಶ್ರೀನಿವಾಸಗೌಡರಿಗೆ ಅವರದ್ದೇ ಆದ ಶಕ್ತಿ ಸಾಮರ್ಥ್ಯ ಇದೆ. ಅವರದ್ದೇ ಆದ ವರ್ಚಸ್ಸು ಇದೆ. ರಾಷ್ಟ್ರೀಯ-ಅಂತರಾಷ್ಟ್ರೀಯ ಮಟ್ಟದಲ್ಲಿ ಸಹಕಾರ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಕಾಂಗ್ರೆಸ್ಸಿನಲ್ಲಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಇಷ್ಟು ಹಳೆ ಮನುಷ್ಯ, ಅನುಭವ ಇರುವವರು ಕಾಂಗ್ರೆಸ್ಸಿಗೆ ಬಂದ್ರೆ ಶಕ್ತಿ ಬರಲಿದೆ. ಸಂವಿಧಾನದಲ್ಲಿ ಅವಕಾಶವಿದೆ ಎಂದರು. ಇದನ್ನೂ ಓದಿ: ರೈತರಿಗೆ ದಾಖಲೆ ನೀಡಲು ಸತಾಯಿಸುತ್ತಿದ್ದ ಅಧಿಕಾರಿಗಳಿಗೆ ತರಾಟೆ- ಸೂ….ಮಕ್ಕಳು ಎಂದ ರಮೇಶ್ ಕುಮಾರ್
ಇದೇ ವೇಳೆ ನಿಮ್ಮ ಕೃಪಕಟಾಕ್ಷೆ ಇದೆಯಲ್ಲಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಅವರು ಸ್ವತಂತ್ರ ನಾಯಕರು, ಅವರಿಗೆ ಯಾರ ಕೃಪಕಟಾಕ್ಷ ಬೇಕಾಗಿಲ್ಲ, ದಯಮಾಡಿ ಇಂತಹ ಮಾತಾಡಬೇಡಿ ಎಂದು ರಮೇಶ್ ಕುಮಾರ್ ಹೇಳಿದರು. ಇದನ್ನೂ ಓದಿ: ಡಿಕೆಶಿ ಜೊತೆ ಮಾತುಕತೆ, ಕಾಂಗ್ರೆಸ್ ಸೇರುವುದು ಖಚಿತ: ಶಾಸಕ ಶ್ರೀನಿವಾಸಗೌಡ