– ದೇವೇಗೌಡರ ಬಗ್ಗೆ ಮಾತನಾಡುವಷ್ಟು ದೊಡ್ಡ ವಕ್ತಿ ನಾನಲ್ಲ
ಕೋಲಾರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಜೊತೆ ಮಾತುಕತೆ ನಡೆಸಿದ್ದೇನೆ. ನಾನು ಕಾಂಗ್ರೆಸ್ ಸೇರುವುದು ಖಚಿತ ಎಂದು ಕೋಲಾರ ಶಾಸಕ ಶ್ರೀನಿವಾಸಗೌಡ ಹೇಳಿದ್ದಾರೆ.
Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಭೇಟಿ ಮಾಡಿ ಈ ವಿಚಾರ ತಿಳಿಸಿದ್ದೇನೆ. ನಾನು ನಾಲ್ಕು ಬಾರಿ ಕಾಂಗ್ರೆಸ್ ಪಕ್ಷದಿಂದ ಗೆದ್ದು ಶಾಸಕ, ಸಚಿವನಾಗಿದ್ದೇನೆ. ಹಾಗಾಗಿ ನನಗೆ ವಿಶ್ವಾಸ ಇದೆ. ಮುಂದೆ ಕೋಲಾರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಸೇರ್ಪಡೆಗೆ ಎಷ್ಟು ಜನ ಆಸಕ್ತರು ಎಂದು ಹೇಳಲ್ಲ: ಡಿಕೆಶಿ
Advertisement
Advertisement
ಕಾಂಗ್ರೆಸ್ ಸೇರಲು ಸ್ಥಳೀಯ ಕಾಂಗ್ರೆಸ್ ಮುಖಂಡರ ವಿರೋಧ ವ್ಯಕ್ತವಾಗುತ್ತಿದೆಯಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಕಾಂಗ್ರೆಸ್ ಪಕ್ಷಕ್ಕೆ ಹೋಗುವುದು ತೀರ್ಮಾನ ಆಗಿದೆ. ವಿರೋಧಿಸುವುವವರಿಗೆಲ್ಲ ಉತ್ತರ ಕೊಡಲ್ಲ, ಅವಕಾಶ ಸಿಕ್ಕರೆ 2023ರ ವಿಧಾಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಫರ್ಧಿಸುವೆ. ಪಕ್ಷ ಬಿಡುವ ತೀರ್ಮಾನ ಮಾಡಿದ ಮೇಲೆ ರಾಜೀನಾಮೆ ಕೊಡುವುದು ದೊಡ್ಡ ವಿಷಯವಲ್ಲ ಎಂದರು. ಇದನ್ನೂ ಓದಿ: ಟೀಚರ್ ಆದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ
Advertisement
ಹೆಚ್‍ಡಿ ಕುಮಾರಸ್ವಾಮಿ ಕೆ.ಸಿ ವ್ಯಾಲಿ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಅದು ಕೊಚ್ಚೆ ನೀರು ಅಂತ ಟೀಕಿಸಿದರು. ನರಸಾಪುರ ಕೆರೆಯಲ್ಲಿ ಕೆಸಿ ವ್ಯಾಲಿ ನೀರು ಕುಡಿದು ನಾವೂ ರೈತರಾಗಿರೋರು. ಜಿಲ್ಲೆಯಲ್ಲಿ ಮಳೆಯ ದಿನಗಳು ಕಡಿಮೆಯಾಗಿದೆ. ಅದು ಕುಮಾರಸ್ವಾಮಿಗೆ ಗೊತ್ತಿಲ್ಲ. ಕೆರೆಗಳು ಕೆಸಿ ವ್ಯಾಲಿ ನೀರಿನಿಂದ ಕೋಡಿ ಹರಿಯುವುದನ್ನು ನೋಡುವುದೇ ಖುಷಿಯ ವಿಚಾರ, ಇದು ರೈತರಾಗಿರೋರಿಗೆ ಅರ್ಥವಾಗುತ್ತೆ, ರೈತರಲ್ಲದೇ ಇರೋರಿಗೆ ಇದರ ಬಗ್ಗೆ ಏನು ಗೊತ್ತು ಎಂದು ಹೆಚ್‍ಡಿ ಕುಮಾರಸ್ವಾಮಿ ಅವರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ದೇವೇಗೌಡರ ಬಗ್ಗೆ ಮಾತನಾಡುವ ದೊಡ್ಡ ವ್ಯಕ್ತಿ ನಾನಲ್ಲ. ಈಗಾಗಲೇ ತೀರ್ಮಾನ ಕೈಗೊಂಡಿದ್ದಾಗಿದೆ. ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಹೋಗುವುದು ಖಚಿತ ಎಂದರು. ಜೆಡಿಎಸ್ ಜಿಲ್ಲಾಧ್ಯಕ್ಷ ವೆಂಕಟಶಿವಾರೆಡ್ಡಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ರಾಜೀನಾಮೆ ಕೊಡು ಅನ್ನೋಕೆ ಅವರ್ಯಾರು, ಕೊಡು ಅನ್ನೋಕೆ ಈಗ ಅವರಿಗೆ ಅಧಿಕಾರ ಇಲ್ಲ, ಚುನಾವಣೆಯಲ್ಲಿ ಗೆದ್ದು ಹೇಳಿದರೇ ನಾನು ಅವರ ಮಾತು ಕೇಳುತ್ತಿದ್ದೆ ಸೋತಿರುವವರ ಮಾತು ಕೇಳಲ್ಲ ಎಂದರು.
ಯಾರಿಗೂ ಯಾವುದೂ ಅನಿವಾರ್ಯ ಇಲ್ಲ, ನಾನು ನಾನಾಗೆ ಜೆಡಿಎಸ್ ಪಕ್ಷ ತೊರೆದಿದ್ದೇನೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸೇರುತ್ತೇನೆ ಇದರಲ್ಲಿ ಎರಡು ಮಾತಿಲ್ಲ ಎಂದು ತಿಳಿಸಿದರು.