– ದೇವೇಗೌಡರ ನೆರಳಿಗೆ ಹೋಗಿ ಬದುಕಿ ಚೆನ್ನಾಗಾದವ್ರು ಯಾರೂ ಇಲ್ಲ ಎಂದ ಮಾಜಿ ಸ್ಪೀಕರ್
ಕೋಲಾರ: ಈ ದೇಶಕ್ಕೆ ಹಿಡಿದಿರುವ ಶನಿ ಎಂದರೆ ಅದು ಮೋದಿ (Narendra Modi) ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ (Ramesh Kumar) ನಾಲಿಗೆ ಹರಿಬಿಟ್ಟಿದ್ದಾರೆ.
Advertisement
ಕೋಲಾರದಲ್ಲಿ (Kolar) ಮಾತನಾಡಿರುವ ಅವರು, ಈ ದೇಶಕ್ಕೆ ಹಿಡಿದಿರುವ ಶನಿ ಅಂದರೆ ಅದು ಮೋದಿ. ಜೂ.4 ಕ್ಕೆ ನಾವು ಕಾಯುತ್ತಿದ್ದೇವೆ. ಈ ದೇಶಕ್ಕೆ ಹಿಡಿದಿರುವ ಶನಿ ಬಿಟ್ಟು ಹೋಗಲಿ ಎಂದು. ದೇವರಲ್ಲಿ ಕೈ ಮುಗಿದು ಬೇಡಿಕೊಂಡಿದ್ದೇವೆ. ಇಂದಿರಾ ಗಾಂಧಿ ಕೂತಿದ್ದ ಸೀಟಲ್ಲಿ ಬಂದು ಕೂತುಬಿಟ್ಟೆ. ಎಲ್ಲಾ ಜಾತಿ ಜನಾಂಗದವರಿಗೆ ಆತ್ಮಸ್ಥೈರ್ಯ ತುಂಬಿದ್ದರು ಇಂದಿರಾ ಗಾಂಧಿ. ಎಂತಹವರ ಜಾಗಕ್ಕೆ ಎಂತಹವರು ಬಂದು ಕೂತಿದ್ದಾನೆ. ಸಂತೆಯಲ್ಲಿ ಹಾವಾಡಿಗ ಸುಳ್ಳು ಹೇಳೋದು ಕೇಳಿದ್ದೇವೆ. ಪ್ರಧಾನಿ ಸುಳ್ಳು ಹೇಳೋದು ಈ ಪ್ರಪಂಚದಲ್ಲಿಯೇ ಕೇಳಿರಲಿಲ್ಲ ಎಂದು ಪ್ರಧಾನಿ ವಿರುದ್ಧ ಏಕವಚನದಲ್ಲಿಯೇ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಇಂದು ಹುಬ್ಬಳ್ಳಿಗೆ ಜೆಪಿ ನಡ್ಡಾ – ನೇಹಾ ಕುಟುಂಬಸ್ಥರ ಭೇಟಿ ಸಾಧ್ಯತೆ
Advertisement
Advertisement
ದೇವೇಗೌಡರ ನೆರಳಿಗೆ ಹೋಗಿ ಬದುಕಿ ಚೆನ್ನಾಗಿ ಆದವರು ಯಾರೂ ಇಲ್ಲ. ಚೆನ್ನಾಗಿ ಬದುಕಿದವರಿಗೇನು ಈ ಗತಿ ಬಂತು ಎಂದು ನನಗೆ ದುಃಖ. ಇರಲಿ, ರೈತನ ಮಗ ಎಂದು ಪ್ರಧಾನಿ ಮಾಡಿದ್ದೆವು. ಆತನ ಮಗ ಮುಖ್ಯಮಂತ್ರಿಯಾಗಿದ್ದರು. ಇವರು ಸೇರಿದ್ದು ಬಿಜೆಪಿ ಜೊತೆಗೆ. ಒಬ್ಬ ಪ್ರಧಾನ ಮಂತ್ರಿ, ಒಬ್ಬ ಮುಖ್ಯಮಂತ್ರಿ ಮೂರು ಸೀಟುಗಳನ್ನ ತೆಗೆದುಕೊಂಡಿದ್ದಾರೆ ಈ ಬಾರಿ. ಅದರಲ್ಲೂ ಒಂದು ಮಗನಿಗೆ ಇನ್ನೊಂದು ಮೊಮ್ಮಗನಿಗೆ ಎಂದು ವ್ಯಂಗ್ಯವಾಡಿದ್ದಾರೆ. ಅಳಿಯನನ್ನು ನಿಮ್ಮ ಲೆಕ್ಕದಲ್ಲಿ ಕೊಡಿ ಎಂದು ಅಲ್ಲಿಗೆ ಕಳಿಸಿದ್ರು. ಇವರ ಹಣೆಬರಹಕ್ಕೆ ಅವರತ್ರ ಹೋಗಿ ಸಲಾಂ ಹೊಡೆಯುತ್ತಿದ್ದಾರೆ ಎಂದು ದೊಡ್ಡಗೌಡರ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
Advertisement
ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ವಿರುದ್ಧ ವಾಗ್ದಾಳಿ ನಡೆಸಿದ ರಮೇಶ್ ಕುಮಾರ್, ಅವನ್ಯಾರೋ ಒಬ್ಬ ದೊಡ್ಡಮನುಷ್ಯ ಆಗಿದ್ದ. ಅವನು ಬಿಟ್ಟರೆ ಬೆಳಕು ಆಗೋದಿಲ್ಲ. ಬ್ಯಾಂಕು ಇರೋದಿಲ್ಲ, ಸಾಲನೂ ಸಿಗೋದಿಲ್ಲ. ಎಲ್ಲಪ್ಪಲೇ ಎಲ್ಲಿದ್ದಿಯೋ, ಬದುಕಿದ್ದಿಯೇನಪ್ಪ. ನೀನು ಬಹಳ ಶ್ರೀಕೃಷ್ಣನ ತರಹ, ನೂರಾರು ಕಡೆ ಜೀವನ ಮಾಡೋನು. ಎಲ್ಲಿದ್ಯಪ್ಪ, ಇವತ್ತು ಹಾಲ್ಟ್ ಎಲ್ಲಪ್ಪ. ಪರಿಶಿಷ್ಟ ಜಾತಿ ಅವರಿಗೆ ಒಂದು ರೂಪಾಯಿ ಸಾಲ ಕೊಡ್ತಿರ್ಲಿಲ್ಲ. ಬಡವರಿಗೆ ಮಹಿಳೆಯರಿಗೆ ಸಾಲ ಕೊಡುತ್ತಿರಲಿಲ್ಲ. ಸಾಲ ಕೊಟ್ಟದ್ದು ರಮೇಶ್ ಕುಮಾರ್ ಕಣ್ಣು ಬಿಟ್ಟ ಮೇಲೆ. ರಮೇಶ್ ಕುಮಾರ್‌ನ ಕೆಳಗೆ ಇಳಿಸಿದ್ದೀರ ಈಗ ಒಂದು ರೂಪಾಯಿ ಕೊಟ್ಟಿದ್ದೀರ? ಏನು ಹೇಳ್ತಿರಾ ನನ್ನ ಮೇಲೆ, ಕಳ್ಳತನ ಮಾಡಿದ್ದಾರೆ ಅಂತ ಹೇಳ್ತಿರಾ? ಅಸೆಂಬ್ಲಿಯಲ್ಲಿ ಮಾತನಾಡಿಲ್ಲ ಅಂತ ಹೇಳ್ತಿರ? ಲಂಚ ತೆಗೆದುಕೊಂಡಿದ್ದಾನೆ ಅಂತ ಹೇಳ್ತಿರಾ? ಏನಿದೆ ನನ್ನ ಮೇಲೆ ನೀವು ಹೇಳುವುದಕ್ಕೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮಂಡ್ಯದಿಂದ ಸುಮಲತಾ ದೂರ; ಹೆಚ್‌ಡಿಕೆ ಪರ ಪ್ರಚಾರಕ್ಕಿಳಿಯದ ಸಂಸದೆ – ಬರ್ತಾರೆ ನೋಡೋಣ ಎಂದ ಮಾಜಿ ಸಿಎಂ