– ಸಿಎಂ ಕುಮಾರಸ್ವಾಮಿ ಅಳುವುದನ್ನು ಬಿಡಲಿ
– ಸಚಿವ ರೇವಣ್ಣನ ಹೇಳಿಕೆಗೆ ಕೋಳಿವಾಡ ಆಕ್ಷೇಪ
ಬೆಂಗಳೂರು: ಅಪ್ಪನಾಣೆ, ಅವ್ವನಾಣೆ ಸಂಸ್ಕೃತಿ ಬಿಟ್ಟು, ಅಭಿವೃದ್ಧಿಯ ವಿಚಾರವನ್ನು ಮುಂದಿಟ್ಟುಕೊಂಡು ಹೋಗಬೇಕು ಎಂದು ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಅವರು, ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ನಮ್ಮ ಸೊಕ್ಕು ಹಾಗೂ ಭಾವನೆಗಳೇ ನಮಗೆ ಸಮಸ್ಯೆಯಾಗುತ್ತವೆ. ಜೆಡಿಎಸ್ ವಿರುದ್ಧ ಮಾತನಾಡುವುದು ಸರಿಯಲ್ಲ. ಸರ್ಕಾರದ ವಿರುದ್ಧ ತಪ್ಪು ಕಲ್ಪನೆ ಬಂದರೆ ಅದರ ಬಿಸಿ ಕಾಂಗ್ರೆಸ್‍ಗೂ ತಟ್ಟುತ್ತದೆ ಹಾಗೂ ಅನ್ವಯವಾಗುತ್ತದೆ. ಇದರಿಂದಾಗಿ ಮೈತ್ರಿ ಸರ್ಕಾರದಲ್ಲಿ ಉಂಟಾಗುವ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಹೋಗಬೇಕು ಎಂದು ಪಕ್ಷದ ನಾಯಕರ ವಿರುದ್ಧ ಪರೋಕ್ಷವಾಗಿ ಚಾಟಿ ಬೀಸಿದರು.
Advertisement
Advertisement
ಸಿಎಂ ಕುಮಾರಸ್ವಾಮಿ ಭಿಕ್ಷುಕರ ಹೇಳಿಕೆ ನೀಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಸ್ಪೀಕರ್, ಕುಮಾರಸ್ವಾಮಿ ಅವರು ಪದೇ ಪದೇ ಭಿಕ್ಷುಕ ಪದ ಬಳಸುವುದು ತಪ್ಪು. ಅಷ್ಟೇ ಅಲ್ಲದೆ ಅಳುವುದನ್ನು ಬಿಡಬೇಕು. ಎಲ್ಲವನ್ನೂ ಧೈರ್ಯವಾಗಿ ಎದುರಿಸಬೇಕು. ಅದನ್ನು ಬಿಟ್ಟು ಭಾವೋದ್ವೇಗಕ್ಕೊಳಗಾಗಿ ಅಳುವುದು ಯಾಕೆ ಎಂದು ಪ್ರಶ್ನಿಸಿ ಕಿಡಿಕಾರಿದರು.
Advertisement
ಕೆರೆ ಒತ್ತುವರಿ ಸದನ ಸಮಿತಿ ವರದಿ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾವೇ ಎಲ್ಲವನ್ನೂ ಪರಿಶೀಲಿಸಿ ವರದಿ ನೀಡಿದ್ದೇವೆ. ಕುಮಾರಸ್ವಾಮಿ ಅವರು ಕೂಡ ಸಮಿತಿ ಸದಸ್ಯರಾಗಿದ್ದರು. ಈಗ ಅವರೇ ಸಿಎಂ ಆಗಿದ್ದಾರೆ. ಯಾಕೆ ಕೆರೆ ಒತ್ತುವರಿ ವರದಿಯನ್ನು ಸದನ ಸಮಿತಿ ಯಾಕೆ ಒಪ್ಪಿಕೊಳ್ಳಲಿಲ್ಲ ಎನ್ನುವುದು ನನಗೆ ಗೊತ್ತಿಲ್ಲ. ಆದರೆ ವರದಿಯನ್ನು ಮೂಲೆಗೆ ಸೇರಿಸುವುದು ಸರಿಯಲ್ಲ ಎಂದು ದೂರಿದರು.
Advertisement
ಕುಮಾರಸ್ವಾಮಿ ಅವರ ಸಲಹೆಯ ಮೇರೆಗೆ ಕೆರೆ ಒತ್ತುವರಿ ಸದನ ಸಮಿತಿ ರಚನೆಯಾಗಿತ್ತು. ಈಗ ಅವರೆ ವರದಿ ಮೂಲೆಗೆ ಇಟ್ಟರೆ ಹೇಗೆ? ಲಕ್ಷಾಂತರ ರೂ. ಖರ್ಚು ಮಾಡಿ ವರದಿ ಮಾಡಿದ್ದು ಯಾಕೆ? ನೈಸ್ ವರದಿಯನ್ನು ನಾವು ಕೊಟ್ಟಿದ್ದೇವೆ. ಅದನ್ನು ಮೂಲೆಗೆ ಇಟ್ಟಿದ್ದಾರೆ. ಹೀಗೆ ಮಾಡಿದರೆ ಜನರ ವಿಶ್ವಾಸ ಕಳೆದುಕೊಳ್ಳಬೇಕಾಗುತ್ತದೆ ಎಂದು ಸರ್ಕಾರದ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.
ಹಾವೇರಿ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ. ಟಿಕೆಟ್ ಬೇಕೆಂದು ನಾನು ಲಾಬಿ ಮಾಡಲ್ಲ, ಬೇಡುವುದಿಲ್ಲ. ಅವರಾಗಿಯೇ ಕೊಟ್ಟರೆ ನಾನು ಸ್ಪರ್ಧಿಸುತ್ತೇನೆ ಎಂದು ಲೋಕಸಭಾ ಚುನಾವಣೆ ಟಿಕೆಟ್ ಆಕಾಂಕ್ಷೆ ಹೊರಹಾಕಿದರು.
ಜಾತಿವಾದಿ ಬಿಜೆಪಿ ಅಧಿಕಾರಕ್ಕೆ ಬರಬಾರದು ಎನ್ನುವ ಉದ್ದೇಶದಿಂದ ಮೈತ್ರಿ ಮಾಡಿಕೊಂಡಿದ್ದೇವೆ ಎಂದು ಲೋಕೋಪಯೋಗಿ ಸಚಿವ ರೇವಣ್ಣ ಹೇಳಿದ್ದರು. ಇದನ್ನು ಖಂಡಿಸಿದ ಕೋಳಿವಾಡ ಅವರು, ಕೊಡುವುದು ತೆಗೆದುಕೊಳ್ಳುವುದು ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ಸಚಿವ ಎಚ್.ಡಿ.ರೇವಣ್ಣ ಅವರು ಇಲ್ಲ ಸಲ್ಲದ ಹೇಳಿಕೆ ನೀಡುವುದು ಸರಿಯಲ್ಲ ಎಂದು ಕಿಡಿಕಾರಿದರು.
ಕಾಶ್ಮೀರದ ಪುಲ್ವಾಮಾ ದಾಳಿಯಲ್ಲಿ ಕೇಂದ್ರ ಸರ್ಕಾರ ರಾಜಕಾರಣ ಬೆರೆಸಬಾರದು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ದಾಳಿ ವಿಚಾರವನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಮತ್ತೊಮ್ಮೆ ಪ್ರಧಾನಿಯಾಗುವ ಕನಸು ಕಟ್ಟಿಕೊಂಡಿರುವ ಮೋದಿ ಅವರು ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಹೀಗೆ ಮಾಡುವವರು ಅಯೋಗ್ಯರೆಂದು ಕರೆಸಿಕೊಳ್ಳುತ್ತಾರೆ ಎಂದು ಗುಡುಗಿದರು.
ಪುಲ್ವಾಮಾ ದಾಳಿಯನ್ನು ತಡೆಯುವಲ್ಲಿ ಗುಪ್ತಚರ ಇಲಾಖೆ ವಿಫಲವಾಗಿದೆ. ಹೀಗಾಗಿ ಸೂಸೈಡ್ ಬಾಂಬ್ ದಾಳಿ ನಡೆಯಿತು. ಅಷ್ಟೊಂದು ಭದ್ರತೆ ನಡುವೆಯೂ ಘಟನೆ ನಡೆಯಿತು ಎಂದ ಅವರು, ಶಾಲಾ ಮಕ್ಕಳ ಕೈಯಲ್ಲಿ ಮೋದಿ, ಮೋದಿ ಅಂತ ಬರೆಸುತ್ತರುವುದು ಖಂಡನೀಯ. ಉಗ್ರರನ್ನು ಸೆದೆಬಡಿದೆರ ಪ್ರಧಾನಿ ಮೋದಿ ಅವರಿಗೆ ಗೌರವ ಸಿಗಲಿದೆ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv