ನವದೆಹಲಿ: ಅಂತಾರಾಷ್ಟ್ರೀಯ ಹಣಕಾಸು ನಿಧಿಯ (IMF) ಕಾರ್ಯನಿರ್ವಾಹಕ ನಿರ್ದೇಶಕರಾಗಿ RBIನ ಮಾಜಿ ಗವರ್ನರ್ ಉರ್ಜಿತ್ ಪಟೇಲ್ (Urjit Patel) ನೇಮಕರಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ (PM Modi) ನೇತೃತ್ವದಲ್ಲಿ ಗುರುವಾರ (ಆ.28) ನಡೆದ ನೇಮಕಾತಿ ಸಭೆಯಲ್ಲಿ ಉರ್ಜಿತ್ ಪಟೇಲ್ ಅವರ ಹೆಸರನ್ನು ಅನುಮೋದಿಸಲಾಗಿತ್ತು. ಅದರಂತೆ ಮೂರು ವರ್ಷಗಳ ಅವಧಿಗೆ ಆರ್‌ಬಿಐನ ಮಾಜಿ ಗವರ್ನರ್ ಉರ್ಜಿತ್ ಪಟೇಲ್ ಅವರು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ (ED) ನೇಮಕಗೊಂಡಿದ್ದಾರೆ.ಇದನ್ನೂ ಓದಿ:ಹೆಲ್ಪರ್‌ಗೆ ಬಸ್ ಚಾಲನೆ ಮಾಡಲು ಕೊಟ್ಟು ಸ್ವಲ್ಪ ಹೊತ್ತಲ್ಲೇ ಚಾಲಕ ಸಾವು
2018ರಲ್ಲಿ ಆರ್‌ಬಿಐನ ಗವರ್ನರ್ ಹುದ್ದೆಗೆ ರಾಜೀನಾಮೆ ನೀಡಿದ ಏಳು ವರ್ಷಗಳ ನಂತರ ಇದೀಗ ಮತ್ತೆ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ.
ಈ ಮೊದಲು ಐಎಂಎಫ್ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದ ಕೃಷ್ಣಮೂರ್ತಿ ಸುಬ್ರಮಣಿಯನ್ (Krishnamurthy Subramanian) ಅವರನ್ನು ಐಎಂಎಫ್ ಶಿಷ್ಟಾಚಾರಗಳ ಉಲ್ಲಂಘನೆ ಮಾಡಿದ್ದರು ಎಂಬ ಆರೋಪದ ಮೇಲೆ ವಜಾಗೊಳಿಸಲಾಗಿತ್ತು. ಅದಾದ ನಂತರ ಏ.30ರಿಂದ ಐಎಂಎಫ್ ಇಡಿ ಹುದ್ದೆ ಖಾಲಿಯಾಗಿತ್ತು.ಇದನ್ನೂ ಓದಿ: ವಿಷ್ಣು ಸಮಾಧಿ ಇದ್ದ ಅಭಿಮಾನ್ ಸ್ಟುಡಿಯೋ ಮುಟ್ಟುಗೋಲು?