ಪಾಕ್‌ ಪ್ರಧಾನಿ ಜೊತೆ ವಿಶ್ವಕಪ್‌ ವೀಕ್ಷಣೆ – ಇಂಡೋ -ಪಾಕ್‌ ಕ್ರಿಕೆಟ್‌ಗೆ ಮತ್ತೆ ಚಾಲನೆ ನೀಡಿದ್ದ ಸಿಂಗ್‌!

Public TV
2 Min Read
Former Prime Minister Manmohan Singh Tried To Revive Cricket Diplomacy With Pakistan 2

ನಮೋಹನ್‌ ಸಿಂಗ್‌ (Manmohan Singh) ಭಾರತ ಮತ್ತು ಪಾಕ್‌ ಜೊತೆ ಕ್ರಿಕೆಟ್‌ ನಂಟು ಆರಂಭಿಸಿದ್ದು ಮಾತ್ರವಲ್ಲದೇ ಪಾಕ್‌ ಪ್ರಧಾನಿ ಜೊತೆ ಕುಳಿತು ಎರಡು ದೇಶಗಳ ನಡುವಿನ ಪಂದ್ಯ ಸಹ ವೀಕ್ಷಿಸಿದ್ದರು.

ಭಾರತ (India) ಪಾಕಿಸ್ತಾನ (Pakistan) ಕ್ರಿಕೆಟ್‌ ಮ್ಯಾಚ್‌ ಅಂದರೆ ಎರಡೂ ದೇಶಗಳ ಅಭಿಮಾನಿಗಳಿಗೆ ಭಾವನಾತ್ಮಕ ವಿಚಾರ. ಈಗ ಕೇವಲ ಐಸಿಸಿ, ಏಷ್ಯಾ ಕಪ್‌ನಲ್ಲಿ ಮಾತ್ರ ಎರಡು ತಂಡಗಳು ಮುಖಾಮುಖಿಯಾಗುತ್ತಿವೆ. ಆದರೆ ಮನಮೋಹನ್‌ ಸಿಂಗ್‌ ಅವಧಿಯಲ್ಲಿ ಎರಡು ದೇಶಗಳ ಕ್ರಿಕೆಟ್‌ ಸಂಬಂಧ ಸುಧಾರಣೆಯಾಗಿತ್ತು.

Former Prime Minister Manmohan Singh Tried To Revive Cricket Diplomacy With Pakistan 4

2008ರ ಮುಂಬೈ ದಾಳಿ (Mumbai Attack) ಬಳಿಕ ಭಾರತ-ಪಾಕ್ ಕ್ರಿಕೆಟ್ ಸಂಬಂಧ ಬಹಳ ಹಳಸಿತ್ತು. ಈಗ ಹೇಗೆ ವಿರೋಧ ವ್ಯಕ್ತವಾಗಿತ್ತೋ ಆ ಸಮಯದಲ್ಲೂ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಎರಡು ದೇಶಗಳ ಮಧ್ಯೆ ಹಳಸಿದ್ದ ಕ್ರಿಕೆಟ್‌ ಸಂಬಂಧಕ್ಕೆ ಮನಮೋಹನ್‌ ಸಿಂಗ್ ಅವಧಿಯಲ್ಲಿ ಚಾಲನೆ ಸಿಕ್ಕಿತ್ತು.  ಇದನ್ನೂ ಓದಿ: ಮನಮೋಹನ್‌ ಸಿಂಗ್‌ಗೆ ಹಿಂದಿ ಓದಲು ಬರುತ್ತಿರಲಿಲ್ಲ!

Former Prime Minister Manmohan Singh Tried To Revive Cricket Diplomacy With Pakistan 5

2011ರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯನ್ನು (World Cup Cricket) ಭಾರತ, ಶ್ರೀಲಂಕಾ, ಬಾಂಗ್ಲಾದೇಶ ಆಯೋಜಿಸಿತ್ತು. ಪಾಕ್‌ ತಂಡ ಲೀಗ್‌ ಮತ್ತು ಕ್ವಾರ್ಟರ್‌ ಫೈನಲ್‌ ಪಂದ್ಯಗಳನ್ನು ಶ್ರೀಲಂಕಾ ಮತ್ತು ಬಾಂಗ್ಲಾದೇಶದಲ್ಲಿ ಆಡಿದ್ದರೂ ಭಾರತದ ವಿರುದ್ಧದ ಸೆಮಿಫೈನಲ್‌ ಪಂದ್ಯ ಆಡಲು ಭಾರತಕ್ಕೆ ಬರಲೇಬೇಕಿತ್ತು. ಇದನ್ನೂ ಓದಿ: ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದು ಹೇಗೆ? 2004 ರಲ್ಲಿ ಏನಾಯ್ತು?

Former Prime Minister Manmohan Singh Tried To Revive Cricket Diplomacy With Pakistan 3

ಈ ಸಂದರ್ಭದಲ್ಲಿ ಮನಮೋಹನ್‌ ಸಿಂಗ್‌ ಅವರು ಪಾಕ್‌ ಪ್ರಧಾನಿ ಯೂಸುಫ್‌ ಗಿಲಾನಿ (Yusuf Raza Gilani) ಅವರಿಗೆ ಪಂದ್ಯ ವೀಕ್ಷಣೆಗೆ ಬರುವಂತೆ ಆಹ್ವಾನಿಸಿದ್ದರು. ಈ ಆಹ್ವಾನ ಸ್ವೀಕರಿಸಿದ ಗಿಲಾನಿ ಭಾರತಕ್ಕೆ ಆಗಮಿಸಿದ್ದರು. ಪಂಜಾಬಿನ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಇಬ್ಬರು ನಾಯಕರು ಎರಡು ತಂಡಗಳ ಆಟಗಾರರಿಗೆ ಕೈ ಕುಲುಕಿ ಶುಭ ಹಾರೈಸಿ ಒಟ್ಟಿಗೇ ಕುಳಿತು ವೀಕ್ಷಿಸಿದ್ದರು. ಇದನ್ನೂ ಓದಿ: ನಾನು ಮನಮೋಹನ್ ಸಿಂಗ್‌ ದೊಡ್ಡ ಅಭಿಮಾನಿ ಎಂದಿದ್ದ ಒಬಾಮಾ!

Former Prime Minister Manmohan Singh Tried To Revive Cricket Diplomacy With Pakistan 6

2012ರಲ್ಲಿ ಭಾರತ-ಪಾಕ್ ನಡುವೆ ಭಾರತದಲ್ಲಿ ದ್ವಿಪಕ್ಷೀಯ ಸರಣಿ ನಡೆದಿತ್ತು. ಮೂರು ಪಂದ್ಯಗಳ ಏಕದಿನ ಸರಣಿಯನ್ನು ಪಾಕ್‌ 2-1  ಅಂತರದಿಂದ ಗೆದ್ದರೆ ಎರಡು ಪಂದ್ಯಗಳ ಟಿ20 ಸರಣಿ 1-1 ರಲ್ಲಿ ಡ್ರಾ ಗೊಂಡಿತ್ತು. ಎರಡು ತಂಡಗಳ ನಡುವಿನ ದ್ವಿಪಕ್ಷೀಯ ಸರಣಿ ನಡೆದಿದ್ದು ಅದೇ ಕೊನೆ ಬಾರಿ.

 

Share This Article