ನವದೆಹಲಿ: ಯಾರ್ರೀ ಅವ್ನು ಪ್ರೀತಂಗೌಡ ಎಂದು ಪ್ರಶ್ನಿಸಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕಿಡಿಕಾರಿದ್ದಾರೆ.
ಆಪರೇಷನ್ ಆಡಿಯೋ ಕಮಲದ ವಿಚಾರವಾಗಿ ಮಾಧ್ಯಮಗಳು ಪ್ರಶ್ನಿಸುತ್ತಿದ್ದಂತೆ ಶಾಸಕ ಪ್ರೀತಂಗೌಡ ವಿರುದ್ಧ ದೇವೇಗೌಡ ಗರಂ ಆದರು. ನನಗೆ ಯಾವ ಪ್ರೀತಂಗೌಡನೂ ಗೊತ್ತಿಲ್ಲ. ನಾನು ಪಾರ್ಲಿಮೆಂಟ್ ನಿಂದ ಈಗ ಬಂದಿದ್ದೇನೆ. ನನಗೇನು ಗೊತ್ತಿಲ್ಲ. ಯಾರೇ ಆದರೂ ಕಾನೂನು ಪ್ರಕಾರ ಕ್ರಮ ಕೈಗೊಳುತ್ತಾರೆ ಎಂದು ತಿಳಿಸಿದರು.
Advertisement
ಇಂದು ಬಿಡುಗಡೆಯಾದ ಆಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಲು ದೇವೇಗೌಡ ನಿರಾಕರಿಸಿದರು. ಈ ಕುರಿತು ಕೇಳುವುದಕ್ಕೆ ಪತ್ರಕರ್ತರಿಗೆ ನಾಚಿಕೆ ಆಗಲ್ವಾ ಎಂದು ಪ್ರಶ್ನಿಸಿ ಮಾಧ್ಯಮಗಳ ವಿರುದ್ಧ ಕಿಡಿಕಾರಿದರು. ಆಪರೇಷನ್ ಕಮಲ ಆಡಿಯೋ ಪ್ರಕರಣದ ವಿಚಾರಣೆಗೆ ಸ್ಥಳೀಯ ಪೊಲೀಸರು ಇದ್ದಾರೆ. ನಾನು ಪ್ರತಿಕ್ರಿಯೆ ನೀಡಲ್ಲ ಎಂದು ತಿಳಿಸಿದರು. ಇದನ್ನು ಓದಿ: ಗೌಡರ ಕುಟುಂಬ ಗೂಂಡಾಗಿರಿ ಕುಟುಂಬವಲ್ಲ – ಕಲ್ಲು ತೂರಾಟ ಮಾಡಿದವ್ರನ್ನ ಕ್ಷಮಿಸಲ್ಲ: ಸಿಎಂ ಎಚ್‍ಡಿಕೆ
Advertisement
Advertisement
ಪ್ರೀತಂ ಗೌಡ ಹೇಳಿದ್ದೇನು?:
ಸೂರ್ಯ ಚಂದ್ರ ಇರುವವರೆಗೂ ರಾಷ್ಟ್ರೀಯ ಪಕ್ಷ ದೇಶದಲ್ಲಿ ಇರುತ್ತದೆ. ಮಾಜಿ ಪ್ರಧಾನಿ ದೇವೇಗೌಡರ ವಿಕೆಟ್ ಹೋಗುತ್ತೆ. ಸಿಎಂ ಕುಮಾರಸ್ವಾಮಿ ಆರೋಗ್ಯವೂ ಸರಿಯಿಲ್ಲ. ಇದರಿಂದಾಗಿ ಜೆಡಿಎಸ್ ರಾಜ್ಯದಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತದೆ. ಮೈತ್ರಿ ಸರ್ಕಾರ ಈಗಂತೂ ಬಿದ್ದರೆ ಸಾಕು ಎನ್ನುವಂತಿದೆ. ನನಗೂ ಈಗ 35-36ನೇ ವಯಸ್ಸು, ಶಾಸಕನಾಗಿ ಇದ್ದೇನೆ. ನಿನಗೆ 30 ವರ್ಷವಾಗಿದೆ. ಇನ್ನೂ 40 ವರ್ಷ ರಾಜಕಾರಣ ಮಾಡಬೇಕು. ಎಲ್ಲಾ ಒಟ್ಟಿಗೆ ಇರೋಣ ಎಂದು ಅನಾಮಿಕ ವ್ಯಕ್ತಿಯ ಜೊತೆಗೆ ಫೋನಿನಲ್ಲಿ ಪ್ರೀತಂ ಗೌಡ ಮಾತನಾಡುತ್ತಿರುವ ಆಡಿಯೋ ವೈರಲ್ ಆಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv