ಮಂಡ್ಯ: ಪಾಂಡವಪುರದ ಮಾಜಿ ಶಾಸಕ ಕೆ.ಕೆಂಪೇಗೌಡ (96) ಅವರು ಇಂದು ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕೆ.ಕೆಂಪೇಗೌಡ ಅವರು, ಗುರುವಾರ ಬೆಳಗಿನ ಜಾವ ಸ್ವಗ್ರಾಮದ ತೋಟದ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಪಾಂಡವಪುರ ಕ್ಷೇತ್ರದಿಂದ ಕೆಂಪೇಗೌಡ ಅವರು ಮೂರು ಬಾರಿ ಶಾಸಕರಾಗಿದ್ದರು. ಇದನ್ನೂ ಓದಿ: ಮಿಸ್ಸಿಂಗ್ ಮಿನಿಸ್ಟರ್ಸ್ – ಬೆಂಗಳೂರು ಮಂತ್ರಿ, ಸಂಸದರ ವಿರುದ್ಧ ಕಾಂಗ್ರೆಸ್ ಕಿಡಿ
1983 ರಲ್ಲಿ ಜನತಾಪರಿವಾರದಿಂದ ಗೆಲುವು ಸಾಧಿಸಿದ್ದರು. 1985 ರಲ್ಲಿ ಪಕ್ಷೇತರವಾಗಿ ಗೆದ್ದಿದ್ದರು. 1999 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಜಯ ಸಾಧಿಸಿದ್ದರು. ಆದರೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕೆ.ಕೆಂಪೇಗೌಡ ಅವರು ಹಲವು ವರ್ಷಗಳಿಂದ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದರು.
ಇಂದು ಮಧ್ಯಾಹ್ನ ಮೂರುಗಂಟೆಗೆ ಚಿನಕುರಳಿಯ ತೋಟದಲ್ಲಿಯೇ ಕೆ.ಕೆಂಪೇಗೌಡ ಅವರ ಅಂತ್ಯ ಸಂಸ್ಕಾರ ನಡೆಸಲು ಕುಟುಂಬಸ್ಥರ ತೀರ್ಮಾನಿಸಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಮಹಾ ಮಳೆಗೆ ವ್ಯಂಗ್ಯ – #LeaveBengaluru ಅಭಿಯಾನ ಆರಂಭಿಸಿದ ಕನ್ನಡಿಗರು