ಮಂಡ್ಯ: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಾಜಿ ಸಂಸದೆ ಹಾಗೂ ಚಿತ್ರನಟಿ ರಮ್ಯಾ ಮತದಾನವನ್ನು ಮಾಡದೇ ಇದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಿಂದ ಸ್ಪರ್ಧೆ ಮಾಡಲು ಬಿಡುವುದಿಲ್ಲವೆಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.
ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡದೇ, ಸಾರ್ವಜನಿಕರ ಕೆಂಗಣ್ಣಿಗೆ ರಮ್ಯಾ ಗುರಿಯಾಗಿದ್ದರು. ಒಂದು ವೇಳೆ ನೀವು ಸ್ಥಳೀಯ ಸಂಸ್ಥೆಯಲ್ಲಿ ಚುನಾವಣೆಯಲ್ಲಿ ಮತದಾನ ಮಾಡದೇ ಇದ್ದರೆ, ನೀವು ಯಾವುದೇ ಕಾರಣಕ್ಕೂ ಮಂಡ್ಯದಿಂದ ಸ್ಪರ್ಧೆ ಮಾಡುವಂತಿಲ್ಲ ಎಂದು ಜನ ಆಗ್ರಹಿಸಿದ್ದಾರೆ.
Advertisement
Advertisement
ರಮ್ಯಾರವರು ನಗರದ 11 ನೇ ವಾರ್ಡಿನ ಮತದಾರರಾಗಿದ್ದು, ಮತದಾರರ ಪಟ್ಟಿಯಲ್ಲಿ 621 ನೇ ಕ್ರಮಸಂಖ್ಯೆಯಲ್ಲಿ ಹೊಂದಿದ್ದಾರೆ. ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಅವರು 420 ನೇ ಕ್ರಮಾಂಕದಲ್ಲಿದ್ದರು. ಅಲ್ಲದೇ ರಮ್ಯಾ ವಿಧಾನಸಭೆ ಚುನಾವಣೆ ಮತದಾನಕ್ಕೆ ಬರುತ್ತಾರೆಂದು ಬೆಂಬಲಿಗರು ಹೆಸರು ಹಾಗೂ ಕ್ರಮಸಂಖ್ಯೆಯನ್ನು ಬರೆದುಕೊಂಡು ಕಾಯುತ್ತಿದ್ದರು. ಆದರೆ ಅವರು ಮತದಾನ ಮಾಡದೇ ಬೇಜವಾಬ್ದಾರಿ ಪ್ರದರ್ಶಿಸಿದ್ದರು. ಮತದಾನ ಮಾಡದ ರಮ್ಯಾ ವಿರುದ್ಧ ರಾಷ್ಟ್ರಮಟ್ಟದಲ್ಲಿ ಟೀಕೆಗಳು ಕೇಳಿಬಂದಿದ್ದವು. ಅಲ್ಲದೇ ಒಬ್ಬ ಮಾಜಿ ಸಂಸದೆಯಾಗಿ ಮತವನ್ನು ಚಲಾಯಿಸದೇ, ಪ್ರಜಾಪ್ರಭುತ್ವಕ್ಕೆ ಅಪಮಾನ ಮಾಡಿದ್ದಾರೆ ಎಂದು ಜನರು ಆಕ್ರೋಶ ಹೊರಹಾಕಿದ್ದರು.
Advertisement
Advertisement
ಮಂಡ್ಯದಿಂದಲೇ ರಮ್ಯಾ ಕಾಂಗ್ರೆಸ್‍ನಿಂದ ಮತ್ತೊಮ್ಮೆ 2019ರ ಲೋಕಸಭಾ ಚುನಾವಣೆಗೆ ಸ್ಪಧಿಸುತ್ತಾರೆಂದು ಅವರ ತಾಯಿ ರಂಜಿತಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ರಾಜ್ಯ ಮಟ್ಟದಲ್ಲಿ ಜೆಡಿಎಸ್ ನೊಂದಿಗೆ ಸಮ್ಮಿಶ್ರ ಸರ್ಕಾರವನ್ನು ಹೊಂದಿರಬಹುದು, ಆದರೆ ಯಾವುದೇ ಕಾರಣಕ್ಕೂ ಜಿಡಿಎಸ್ ಗೆ ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಡುವುದಿಲ್ಲ ಎಂದು ತಿಳಿಸಿದ್ದರು. ಇದನ್ನೂ ಓದಿ: ಜೆಡಿಎಸ್‍ಗೆ ಬಿಡಲ್ಲ, ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ರಮ್ಯಾ ಕಣಕ್ಕೆ: ತಾಯಿ ರಂಜಿತಾ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv