ಮಂಡ್ಯ: ಜೆಡಿಎಸ್‍ನಿಂದ ಅಮಾನತ್ತಾದ ಶಾಸಕರು ಒಂದು ರೀತಿಯ ಆಧುನಿಕ ಶಾಸಕರಾಗಿದ್ದಾರೆ. ಅವರೀಗ ಲಿವ್ ಇನ್ ಟುಗೇದರ್ ಮಾಡುತ್ತಿದ್ದಾರೆ. ಮದುವೆಗಿಂತ ಮುಂಚೆಯೇ ಅವರು ಪ್ರಸ್ಥ ಮಾಡಿಕೊಳ್ಳುತ್ತಾರೆ ಎಂದು ನಾಗಮಂಗಲ ಕ್ಷೇತ್ರದ ಮಾಜಿ ಶಾಸಕ ಸುರೇಶ್‍ಗೌಡ ವಾಗ್ದಾಳಿ ನಡೆಸಿದ್ದಾರೆ.
ಜಮೀರ್ ಅಹಮದ್ ಜೊತೆಯಲ್ಲಿ ಚಲುವರಾಯಸ್ವಾಮಿ ನಾಗಮಂಗಲದಲ್ಲಿ ಬೈಕ್ ಜಾಥಾ ನಡೆಸಿದ್ರು. ಈ ವೇಳೆ ಕಾರ್ಯಕರ್ತರು ತಮ್ಮ ಕೈಯಲ್ಲಿ ಕಾಂಗ್ರೆಸ್ ಬಾವುಟ ಹಿಡಿದು ಬೈಕ್ ಜಾಥಾದಲ್ಲಿ ಪಾಲ್ಗೊಂಡಿದ್ರು. ಈ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ ಮಾಜಿ ಶಾಸಕ ಸುರೇಶ್ ಗೌಡ, ಜೆಡಿಎಸ್ ಬಂಡಾಯ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಇನ್ನೂ ಸೇರದೇ ಇದ್ದರೂ ಹಣಕ್ಕಾಗಿ ಯಾವ ಆಟ ಬೇಕಾದ್ರೂ ಆಡುತ್ತಾರೆ ಎಂದು ಟೀಕಿಸಿದರು.
Advertisement
Advertisement
ಶಿಖಂಡಿ ರಾಜಕಾರಣಿ: ಸಿದ್ದರಾಮಯ್ಯ ಅವರ ಕೈಯಲ್ಲಿ ಅಧಿಕಾರ ಇರುವವರೆಗೂ ಅವರು ಅಲ್ಲಿರುತ್ತಾರೆ. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದಲ್ಲಿ ವೀಕ್ ಆದ ನಂತರ ಬೇರೆ ಪಕ್ಷ ನೋಡುತ್ತಾರೆ. ಇವರಿಗೆ ನಿಯತ್ತು ನಂಬಿಕೆ ಇಲ್ಲ. ಚಲುವರಾಯಸ್ವಾಮಿಗೆ ಚಾಲೆಂಜ್ ಮಾಡುತ್ತೇನೆ. ಎಚ್‍ಎಎಲ್ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ನನ್ನ ಮೇಲಿನ ಆರೋಪ ಸಾಬೀತು ಪಡಿಸಿದ್ರೆ ರಾಜಕೀಯ ಬಿಟ್ಟು ಹೋಗ್ತೀನಿ. ಇಲ್ಲದಿದ್ದರೆ ಅವನು ಬಿಟ್ಟು ಹೋಗ್ತಾನೆ. ಸಿದ್ದರಾಮಯ್ಯ ಇದ್ದಾರೆ ಎಂದು ನನ್ನ ಮೇಲೆ ಇಲ್ಲ ಸಲ್ಲದ ಕೇಸ್ ಹಾಕಿಸಿದ್ದಾರೆ. ಅವನೊಬ್ಬ ಶಿಖಂಡಿ ರಾಜಕಾರಣಿ ಎಂದು ಆಕ್ರೋಶ ಹೊರಹಾಕಿದ್ರು.
Advertisement
ಚಲುವರಾಯಸ್ವಾಮಿ ಯಾವಾಗಲೂ ಹಿಂದಿನಿಂದ ಯುದ್ಧ ಮಾಡ್ತಾನೆ. ಶಿಖಂಡಿ ಆಗಲಿ ಯಾರೇ ಆಗಲಿ ನಮ್ಮೆದುರು ಬಂದಾಗ ತೀರಿಸಬೇಕಾಗುತ್ತೆ. ರಾಜಕೀಯವಾಗಿ ಚಲುವರಾಯಸ್ವಾಮಿಯನ್ನು ತೀರಿಸುವವನೇ ನಾನು. ನನ್ನದು ಒಂದೇ ಗುರಿ, ಒಂದೇ ಶಪಥ ಚಲುವರಾಯಸ್ವಾಮಿ ಸೋಲುವವರೆಗೂ ನಾನು ವಿರಮಿಸುವುದಿಲ್ಲ. ಚಲುವರಾಯಸ್ವಾಮಿ ಒಬ್ಬ ದುಷ್ಠ ವ್ಯಕ್ತಿ. ವೈಯಕ್ತಿಕವಾಗಿ ರಾಜಕೀಯವಾಗಿ ನಾನು ಚಲುವರಾಯಸ್ವಾಮಿ ದ್ವೇಷಿ ಎಂದು ಸುರೇಶ್‍ಗೌಡ ಹೇಳಿದರು.