ತುಮಕೂರು: ಗ್ರಾಮಾಂತರ ಕ್ಷೇತ್ರದಲ್ಲಿ ರಾಜಕೀಯ ಜಿದ್ದಾ ಜಿದ್ದಿ ತಾರಕಕ್ಕೇರಿದೆ. ಹಾಲಿ ಮತ್ತು ಮಾಜಿ ಶಾಸಕರುಗಳ ಆರೋಪ-ಪ್ರತ್ಯಾರೋಪಗಳು ಮಿತಿ ಮೀರಿದೆ. ಮಾಜಿ ಶಾಸಕ ಸುರೇಶ್ ಗೌಡರ ಕೊಲೆಗೆ ಹಾಲಿ ಜೆಡಿಎಸ್ (JDS) ಶಾಸಕ ಗೌರಿಶಂಕರ್ (Gauri shankar) ಸುಪಾರಿ ಕೊಟ್ಟಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಉಂಟುಮಾಡಿದೆ.
Advertisement
ತುಮಕೂರು ಜಿಲ್ಲೆಯಲ್ಲೇ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ರಾಜಕೀಯ ಸೆಡ್ಡು, ಜಿದ್ದಾಜಿದ್ದಿಗೆ ಕುಖ್ಯಾತಿ. ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ (Suresh Gowda) ರು ತನ್ನದ್ದು ಶೇರು ಎಂದರೆ ಹಾಲಿ ಶಾಸಕ ಗೌರಿಶಂಕರ್ ತಾನೇನು ಕಡಿಮೆ ಇಲ್ಲ ತನ್ನದು ಸವಾಶೇರು ಎನ್ನುತ್ತಾರೆ. ಅಷ್ಟರ ಮಟ್ಟಿಗೆ ಪರಸ್ಪರ ರೋಶಾವೇಷ ಇದೆ. ಆದರೆ ಇದ್ದಕಿದ್ದ ಹಾಗೇ ಸುರೇಶ್ ಗೌಡರು ವೇದಿಕೆಯೊಂದರಲ್ಲಿ ಮಾತನಾಡುತ್ತಾ, ನನ್ನ ಕೊಲೆಗೆ ಗೌರಿಶಂಕರ್ ಸುಪಾರಿ ಕೊಟ್ಟಿದ್ದಾರೆ ಎಂದು ಸ್ಪೋಟಕ ಹೇಳಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ಶಾಸಕ ಗೌರಿಶಂಕರ್‌ಗೆ ಥೈಲ್ಯಾಂಡ್ ಅಂದರೆ ಬಲು ಪ್ರೀತಿ, ಗೋವಾ ಅಂದರೆ ಮೋಜು, ಅಸೆಂಬ್ಲಿ ಅಂದರೆ ಅಲರ್ಜಿ: ಸುರೇಶ್ ಗೌಡ
Advertisement
Advertisement
ಈ ಹೇಳಿಕೆ ಜಿಲ್ಲೆಯ ರಾಜಕಾರಣದಲ್ಲಿ ತೀವ್ರ ಸಂಚಲನ ಉಂಟು ಮಾಡಿದೆ. ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸುರೇಶ್ ಗೌಡರು, ಸ್ಫೋಟಕ ವಿಚಾರ ಬಿಚ್ಚಿಟ್ಟಿದ್ದಾರೆ. ಜೈಲಿನಲ್ಲಿ ಇರುವ ವ್ಯಕ್ತಿಗಳ ಜೊತೆ ಶಾಸಕರ ಬಲಗೈ ಬಂಟ ಹಿರೇಹಳ್ಳಿ ಮಹೇಶ್ ನೇರಸಂಪರ್ಕದಲ್ಲಿ ಇದ್ದು 5 ಕೋಟಿ ರೂ ಗೆ ಸುಪಾರಿ ನೀಡಿದ್ದಾರೆ. ವಿಜಯ ದಶಮಿ ಹಬ್ಬದ ಹಿಂದಿನ ದಿನವೇ ನಾನು ಸಂಚನ್ನು ಸಿಎಂ ಹಾಗೂ ಗೃಹ ಸಚಿವರ ಗಮನಕ್ಕೆ ತಂದಿದ್ದೇನೆ. ಪೊಲೀಸ್ ಕಮಿಷನರ್‍ಗೂ ದೂರು ಕೊಟ್ಟಿದ್ದೇನೆ. ಕಳೆದ ನಾಲ್ಕು ತಿಂಗಳಿನಿಂದ ಕೊಲೆಗೆ ಸಂಚು ನಡೆಯುತಿದ್ದು, ನನಗೆ ಇಂಟಲಿಜೆನ್ಸಿಯಿಂದ ತಿಳಿದುಬಂದಿದೆ ಎಂದರು.
Advertisement
ಶಾಸಕ ಗೌರಿಶಂಕರ್, ಹಿರೇಹಳ್ಳಿ ಮಹೇಶ್ ಜೊತೆಗೆ ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕನ ಹೆಸರನ್ನೂ ಸುರೇಶ್ ಗೌಡರು ತಗ್ಲಾಕಿದ್ದಾರೆ. ಕಂಪನಿ ಮಾಲೀಕ ಬಾಬು ತುಮಕೂರು ನಗರದ ಜೆಡಿಎಸ್ ಟಿಕೆಟ್ ಆಕಾಂಕ್ಷಿ. ಇವರು ಗೌರಿಶಂಕರ್ ಆಪ್ತರೂ ಕೂಡ ಹೌದು. ಇವರು ಮೂರು ಜನ ಸೇರಿಕೊಂಡು ಮಾಜಿ ಮೇಯರ್ ಹತ್ಯೆ ಮಾಡಿ ಜೈಲಿನಲ್ಲಿದ್ದ ಆರೋಪಿಗಳನ್ನು ಸಂಪರ್ಕಿಸಿ ಕೊಲೆಗೆ ಸುಪಾರಿ ಕೊಟ್ಟಿದ್ದಾರೆ ಎಂದು ಸುರೇಶ್ ಗೌಡ ಗಂಭೀರಾತಿಗಂಭೀರ ಆರೋಪ ಮಾಡಿದ್ದಾರೆ.