ಕಾರವಾರ: ಕಾಂಗ್ರೆಸ್ ನ ಮಾಜಿ ಶಾಸಕ ಸತೀಶ್ ಸೈಲ್ ಅವರ ಬೆಂಬಲಿಗರು ಪಬ್ಲಿಕ್ ಟಿವಿ ವರದಿಗಾರನಿಗೆ ಬೆದರಿಕೆ ಹಾಗೂ ಹಲ್ಲೆಗೆ ಮುಂದಾದ ಘಟನೆ ನಡೆದಿದೆ.
ಎರಡು ದಿನಗಳ ಹಿಂದೆಯಷ್ಟೇ ಪಬ್ಲಿಕ್ ಟಿವಿಯಲ್ಲಿ ಕಾಂಗ್ರೆಸ್ ನ ಮಾಜಿ ಶಾಸಕ ಸತೀಶ್ ಸೈಲ್ ಅವರು ಹಾಲಿ ಬಿಜೆಪಿ ಶಾಸಕಿ ರೂಪಾಲಿ ನಾಯ್ಕ ಅವರಿಗೆ ಸರ್ಕಾರಿ ಕಚೇರಿಯನ್ನು ಬಿಟ್ಟು ಕೊಡಬೇಕಿತ್ತು. ಹೀಗಾಗಿ ಖಾಲಿ ಮಾಡುವ ವೇಳೆ ಮಾಜಿ ಶಾಸಕ ಕಚೇರಿಯಲ್ಲಿದ್ದ ವಸ್ತುಗಳನ್ನು ಕೊಂಡೊಯ್ದ ಕುರಿತು ವರದಿ ಮಾಡಲಾಗಿತ್ತು. ಇದರಿಂದ ಸಿಟ್ಟುಗೊಂಡ ಮಾಜಿ ಶಾಸಕ ತಮ್ಮ ಬೆಂಬಲಿಗರ ಮೂಲಕ ಹಲ್ಲೆಗೆ ಮುಂದಾಗಿದ್ದಾರೆ. ಇದನ್ನೂ ಓದಿ: ಸೋತ ಬಳಿಕ ಕಚೇರಿ ಖಾಲಿ ಮಾಡೋವಾಗ ಟಾಯ್ಲೆಟ್‍ನ್ನು ಕಿತ್ಕೊಂಡು ಹೋದ ಮಾಜಿ ಶಾಸಕ
ಹಲ್ಲೆಗೆ ವಿಫಲಯತ್ನ:
ಹಾಲಿ ಬಿಜೆಪಿ ಶಾಸಕಿ ರೂಪಾಲಿ ನಾಯ್ಕ ರವರಿಗೆ ನಿಗದಿಯಾಗಿದ್ದ ಸರ್ಕಾರಿ ಕಚೇರಿಯನ್ನು ಬಿಟ್ಟುಕೊಡುವ ಸಂದರ್ಭದಲ್ಲಿ ಟಾಯ್ಲೆಟ್ ಸೇರಿದಂತೆ ಕಚೇರಿಯಲ್ಲಿ ಅಳವಡಿಸಿದ್ದ ಪೈಪ್ ಬಲ್ಬ್ ಸೇರಿದಂತೆ ವಸ್ತುಗಳನ್ನು ಮಾಜಿ ಶಾಸಕ ಕೊಂಡೊಯ್ದರ ಕುರಿತು ವರದಿ ಪ್ರಸಾರ ಮಾಡಲಾಗಿತ್ತು. ಇದರಿಂದ ಕೆರಳಿದ ಮಾಜಿ ಶಾಸಕ ತಮ್ಮ ಕುಪಿತಗೊಂಡ ಮಾಜಿ ಶಾಸಕರು ಕಾರವಾರದ ನಗರಸಭಾ ಸದಸ್ಯ ವಿಠಲ್ ಸಾವಂತ್, ತನ್ನ ಬಲಗೈ ಬಂಟ ರಾಹುಲ್ ಬರ್ಕರ್ ಹಾಗೂ ಕೆಲವು ಮಹಿಳೆಯರನ್ನು ಜಿಲ್ಲಾ ಪತ್ರಿಕಾ ಭವನಕ್ಕೆ ಕರೆತಂದು, ವರದಿಗಾರ ನವೀನ್ ಸಾಗರ್ ಗೆ ಕರೆ ಮಾಡಿ ಪತ್ರಿಕಾಗೋಷ್ಠಿ ಇರುವುದಾಗಿ ಸುಳ್ಳು ಹೇಳುವ ಮೂಲಕ ಹಲ್ಲೆಗೆ ಮುಂದಾಗಿದ್ದರು. ಆದ್ರೆ ಸುದ್ದಿ ಸಂಬಂಧ ಬೇರೆಡೆ ತೆರಳಿದ್ದರಿಂದ ಭವನದಲ್ಲಿ ಶಾಸಕರ ಬೆಂಬಲಿಗರು ಗಲಾಟೆ ಮಾಡಿ ಹಲ್ಲೆ ಮಾಡುವ ಬೆದರಿಕೆಯೊಡ್ಡಿ ತೆರಳಿದ್ದಾರೆ.
ಇನ್ನು ಈ ಕುರಿತು ಪತ್ರಿಕಾ ಭವನ ಹಾಗೂ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರಾದ ಟಿ.ಬಿ ಹರಿಕಾಂತ್ ರವರು ಪ್ರತಿಕ್ರಿಯಿಸಿದ್ದು, ಭವನಕ್ಕೆ ಬಂದು ಗಲಾಟೆ ಮಾಡಿರುವುದನ್ನು ಖಂಡಿಸಿದ್ದು ಒಂದು ಮೇಳೆ ಇದೇ ವರ್ತನೆ ಮುಂದುವರೆದರೆ ಪತ್ರಕರ್ತರು ಖಂಡಿಸಿ ಮುಂದಿನ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಯಾವುದೇ ಸುದ್ದಿಗಳು ಬಂದಾಗ ಆ ಕುರಿತು ಸ್ಪಷ್ಟನೇ ನೀಡಬೇಕೇ ಹೊರತು ಈ ರೀತಿ ಹಲ್ಲೆಗೆ ಮುಂದಾಗುವುದು ಸರಿಯಲ್ಲ ಎಂದಿದ್ದಾರೆ.
https://www.youtube.com/watch?v=17a1EEoYLBo