ಬಾಗಲಕೋಟೆ: ಜಿಲ್ಲೆಯ ಮಾಜಿ ಶಾಸಕ ಜಿ.ವಿ.ಮಂಟೂರ (92) ಬೆಳಗ್ಗೆ 5.30ಕ್ಕೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮಂಟೂರವರು ಬಾಗಲಕೋಟೆ ಕ್ಷೇತ್ರದಲ್ಲಿ ಎರಡು ಸಲ ಶಾಸಕರಾಗಿದ್ದರು. 1983ರಲ್ಲಿ ಪಕ್ಷೇತರರಾಗಿ ಹಾಗೂ 1985 ರಲ್ಲಿ ಜನತಾ ಪಕ್ಷದಿಂದ ಗೆದ್ದು ಶಾಸಕರಾಗಿದ್ದರು. ಮಂಟೂರ ಅವರು ಮಾಜಿ ಸಿಎಂ ರಾಮಕೃಷ್ಟ ಹೆಗಡೆ ಅವರ ಕಟ್ಟಾ ಅನುಯಾಯಿಯಾಗಿದ್ದರು. 1985ರಲ್ಲಿ ಹೆಗಡೆ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬಾರದು ಎನ್ನುವುದಕ್ಕೆ ಬಿಗಿಪಟ್ಟು ಹಿಡಿದು ಕುಳಿತಿದ್ದರು. ಕೊನೆಗೆ ಹೆಗಡೆ ಅವರು ರಾಜಭವನಕ್ಕೆ ತೆರಳದಂತೆ ಅವರ ಶೂ ತೆಗೆದಿಟ್ಟು ಗಮನ ಸೆಳೆದಿದ್ದರು. ಇದನ್ನೂ ಓದಿ: ಶಿವಮೊಗ್ಗ ಕಾಲೇಜಿನಲ್ಲಿ ಕೇಸರಿ ಧ್ವಜ ಹಾರಾಟ, ಕಲ್ಲು ತೂರಾಟ – ನಿಷೇಧಾಜ್ಞೆ ಜಾರಿ
Advertisement
Advertisement
ಬಾಗಲಕೋಟೆ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ ಮಂಟೂರ ಅವರ ಪ್ರಯತ್ನವೇ ಕಾರಣವಾಗಿದೆ. ಮುಳುಗಡೆ ಸಮಸ್ಯೆ ಬಗ್ಗೆ ಹೆಗಡೆ ಅವರಿಗೆ ಮನದಟ್ಟು ಮಾಡಿ ಬಿಟಿಡಿಎ ಸ್ಥಾಪನೆಗೆ ಕಾರಣರಾಗಿದ್ದರು. 1984ರಲ್ಲಿ ಬಿಟಿಡಿಎ ಸ್ಥಾಪನೆಯಾಗಿ, ಆರಂಭದಲ್ಲಿ ಮೂರ್ನಾಲ್ಕು ತಿಂಗಳು ಮಂಟೂರ ಅವರೇ ಪ್ರಥಮ ಅಧ್ಯಕ್ಷರಾಗಿದ್ದರು. ಇದನ್ನೂ ಓದಿ: Karnataka Hijab Row: ಹೈಸ್ಕೂಲ್, ಕಾಲೇಜುಗಳಿಗೆ 3 ದಿನ ರಜೆ
Advertisement
ಮಂಟೂರ ಅವರು ಇಂದು ಮೂವರು ಪುತ್ರರು ಹಾಗೂ ಒರ್ವ ಪುತ್ರಿಯನ್ನು ಅಗಲಿದ್ದಾರೆ. ಇಂದು ಸಂಜೆ ಅವರ ಸ್-ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು.
Advertisement