ಬೆಂಗಳೂರು: ಸತ್ತ ಕುದುರೆ ಅಂತ ಲೇವಡಿ ಮಾಡಿದ್ದ ಸಣ್ಣ ನೀರಾವರಿ ಸಚಿವ ಪುಟ್ಟರಾಜು ಅವರಿಗೆ ಮಾಜಿ ಶಾಸಕ ಚೆಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ.
ಸಚಿವ ಪುಟ್ಟರಾಜು ಹೇಳಿಕೆಗೆ ನಗರದಲ್ಲಿ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಅವರು, ಅವನಿಗೆ ಕಾಮನ್ ಸೆನ್ಸ್ ಇಲ್ಲ. ಮೆದುಳು ಇಲ್ಲ. ಸಚಿವನಾಗಿ ಹೀಗೆ ಮಾತಾಡೋದು ಸರಿಯಿಲ್ಲ ಅಂತ ವಾಗ್ದಾಳಿ ನಡೆಸಿದ್ರು.
Advertisement
ಸೋತವರ ಬಗ್ಗೆ ಸಚಿವ ಪುಟ್ಟರಾಜು ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಹಾಗಾದ್ರೆ ಎಂಪಿ ಎಲೆಕ್ಷನ್ ನಲ್ಲಿ ಸಿಎಂ ಆಗಿದ್ದ ಕುಮಾರಸ್ವಾಮಿ ಸೋತಿದ್ದು ಎಷ್ಟು ವೋಟ್ ನಿಂದ ಅಂತ ಪಾಪ ಅವನಿಗೆ ಗೊತ್ತಿಲ್ಲ ಅಂತ ತಿರುಗೇಟು ನೀಡಿದ್ರು.
Advertisement
Advertisement
ಉಪ ಚುನಾವಣೆಯಲ್ಲಿ ಅಭ್ಯರ್ಥಿ ಹಾಕೋಣ ಅಂತ ನಾನು ಪಕ್ಷದ ನಾಯಕರಿಗೆ ಹೇಳಿದ್ದೇನೆ. ನಾನು ಸಮ್ಮಿಶ್ರ ಸರ್ಕಾರದ ಬಗ್ಗೆ ಎಲ್ಲೂ ಮಾತನಾಡಿಲ್ಲ. ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಕಿಲ್ಲ ಅಂದ್ರೆ ಮನೆಯಲ್ಲಿ ಕುಳಿತು ಯಾರು ಬೇಕಾದ್ರೂ ಗೆಲ್ಲಬಹುದು. ಒಂದು ವೇಳೆ ಅಭ್ಯರ್ಥಿ ಹಾಕಿದ್ರೆ ಚುನಾವಣೆ ದಿನ ಫಲಿತಾಂಶ ಗೊತ್ತಾಗುತ್ತೆ ಅಂತ ಟಾಂಗ್ ಕೊಟ್ರು.
Advertisement
ದೇವೇಗೌಡರು ಆರ್.ಆರ್.ನಗರ ಹಾಗೂ ಜಯನಗರ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನ ಹಾಕಿದ್ರು. ನಂತ್ರ ಫ್ರೆಂಡ್ಲಿ ಫೈಟ್ ಅಂತ ಹೇಳಿದ್ರು. ಈಗಲೂ ಅಷ್ಟೇ ಅಭ್ಯರ್ಥಿಗಳನ್ನ ಹಾಕಲಿ ಫ್ರೆಂಡ್ಲಿ ಫೈಟ್ ನಡೆಯಲಿ ಅಂತ ಚೆಲುವರಾಯಸ್ವಾಮಿ ಹೇಳಿದ್ರು. ಇಷ್ಟಕ್ಕೆ ಸುಮ್ಮನಾಗದ ಚೆಲುವರಾಯಸ್ವಾಮಿ ಸಚಿವ ಪುಟ್ಟರಾಜು ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ್ರು. ಅವನು ಹೇಗೆ ಎಂಪಿ ಆದ ಅಂತ ನನಗೆ ಗೊತ್ತು. ಎಂಎಲ್‍ಎ ಟಿಕೆಟ್ ತಗೊಂಡಿದ್ದು ಅಂತಾನೂ ಗೊತ್ತು. ಅವನಂತೆ ನಾನು ಮಾತಾಡೊಲ್ಲ ಅಂತ ಕಿಡಿಕಾರಿದ್ರು.
ಕಾಂಗ್ರೆಸ್ ನ ಹಲವರಲ್ಲಿ ಮೈತ್ರಿ ಬೇಡ ಅನ್ನೋದು ಇದೆ. ಉಸ್ತುವಾರಿ ವೇಣುಗೋಪಾಲ್‍ಗೂ ಈ ವಿಷ್ಯ ತಿಳಿಸುತ್ತೇವೆ. ಮುಂದಿನದು ಪಕ್ಷಕ್ಕೆ ಬಿಟ್ಟ ವಿಚಾರ ಅಂದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv