ದಿಕ್ಕು ತೋಚದೆ ದಾರಿಯಲ್ಲಿ ಕುಳಿತ ವೃದ್ಧ- ಕಾರು ನಿಲ್ಲಿಸಿ ಹಣ ಕೊಟ್ಟು, ವಾಹನ ಹತ್ತಿಸಿದ ಮಾಜಿ ಶಾಸಕ

Public TV
1 Min Read
smg copy

ಶಿವಮೊಗ್ಗ: ಕಾಡಿನ ದಾರಿಯಲ್ಲಿ ದಿಕ್ಕು ತೋಚದೆ ಬಳಲಿದ್ದ ವೃದ್ಧನೊಬ್ಬನಿಗೆ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಆಸರೆಯಾಗಿ ಮಾನವೀಯತೆ ಮೆರೆದಿದ್ದಾರೆ.

ಕಲರ್ ಫುಲ್ ಯುವ ರಾಜಕಾರಣಿ ಎಂದೇ ಖ್ಯಾತರಾಗಿರುವ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಸಾಗರದಿಂದ ನಿಟ್ಟೂರು ಮೂಲಕ ಕೊಲ್ಲೂರಿಗೆ ಪ್ರಯಾಣ ಬೆಳೆಸಿದ್ದರು. ಕಾಡಿನ ದಾರಿ ಮಧ್ಯದಲ್ಲಿ ವೃದ್ಧನೊಬ್ಬ ದಾರಿ ಕಾಣದೆ ಗಾಬರಿಯಾಗಿ ಕುಳಿತಿದ್ದನು. ಇದು ಗೋಪಾಲಕೃಷ್ಣ ಬೇಳೂರು ಗಮನಕ್ಕೆ ಬಂದಿದೆ. ಕೂಡಲೇ ಕಾರು ನಿಲ್ಲಿಸಿದ ಗೋಪಾಲಕೃಷ್ಣ ವೃದ್ಧನ ಹತ್ತಿರ ಬಂದು ವಿಚಾರಿಸಿದ್ದಾರೆ.

67005bb5 a762 4b0b b06b a6655a34a884

ವೃದ್ಧ ನಿಟ್ಟೂರಿಗೆ ಹೋಗಬೇಕಿತ್ತು. ಆದರೆ ದಿಕ್ಕು ತೋಚದೆ ಹೋಗಲಾರದ ಸ್ಥಿತಿ ತಲುಪಿದ್ದನು. ಅಲ್ಲದೆ ನಡೆದು-ನಡೆದು ದಣಿದಿದ್ದನು. ಕೂಡಲೇ ವೃದ್ಧನಿಗೆ ತನ್ನ ಗ್ರಾಮ ತಲುಪಲು ವಾಹನದ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೇ ತಮ್ಮ ಜೇಬಿನಲ್ಲಿದ್ದ ಹಣ ಕೊಟ್ಟು ನಿಟ್ಟೂರಿಗೆ ಕಳುಹಿಸುವ ವ್ಯವಸ್ಥೆ ಮಾಡಿ ಗೋಪಾಲಕೃಷ್ಣ ಮಾನವೀಯತೆ ಮೆರೆದಿದ್ದಾರೆ.

ವೃದ್ಧನಿಗೆ ತಾವೇ ಖುದ್ದಾಗಿ ಸಹಾಯ ಮಾಡಿ ವಾಹನ ಹತ್ತಿಸಿ ಕಳಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ಫುಲ್ ವೈರಲ್ ಆಗಿದೆ. ಗೋಪಾಲಕೃಷ್ಣರ ಅಭಿಮಾನಿಗಳಂತೂ ತಮ್ಮ ನಾಯಕರ ಈ ಕಾರ್ಯಕ್ಕೆ ಫುಲ್ ಖುಷ್ ಆಗಿದ್ದಾರೆ.

58ad4d52 d6d2 4db1 a8a4 70629f6fe16c

Share This Article
Leave a Comment

Leave a Reply

Your email address will not be published. Required fields are marked *